For Quick Alerts
ALLOW NOTIFICATIONS  
For Daily Alerts

ಹನಿಟ್ರ್ಯಾಪ್‌ಗೆ ಒಳಗಾದ್ರಾ ಪಾಕ್ ನಾಯಕ ಬಾಬರ್?: ಟ್ವಿಟ್ಟರ್‌ನಲ್ಲಿ ವೈರಲ್ ಆಯ್ತು ಖಾಸಗಿ ವಿಡಿಯೋ

By ಪ್ರತಿನಿಧಿ
Pakistan skipper Babar Azams alleged personal videos viral on social media

ಪಾಕಿಸ್ತಾನ ಕ್ರಿಕೆಟ್ ಮತ್ತೊಂದು ವಿವಾದದಲ್ಲಿ ಸಿಲುಕಿದೆ. ತವರಿನಲ್ಲಿ ಸಾಲು ಸಾಲು ಸೋಲು ಹಾಗೂ ಕ್ರಿಕೆಟ್ ಮಂಡಳಿಯಲ್ಲಿ ನಡೆಯುತ್ತಿರುವ ಬದಲಾವಣೆಗಳಿಮದ ಈಗಾಗಲೇ ಗೊಂದಲದ ಗೂಡಾಗಿರುವ ಪಾಕಿಸ್ತಾನ ಕ್ರಿಕೆಟ್‌ಗೆ ಮತ್ತೊಂದು ಆಘಾತ ಎದುರಾಗಿದೆ. ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಎನ್ನಲಾದ ಕೆಲ ಖಾಸಗಿ ವಿಡಿಯೋಗಳು ವೈರಲ್ ಆಗಿದ್ದು ಪಾಕ್ ನಾಯಕ ಸೆಕ್ಸ್ಟಿಂಗ್‌ನಲ್ಲಿ ಬಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಈ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಬಾಬರ್ ಅಜಂ ವಿರುದ್ಧ ಕಟು ಟೀಕೆಗಳು ವ್ಯಕ್ತವಾಗುತ್ತಿರುವಂತೆಯೇ ಕೆಲವರು ಬಾಬರ್ ಅಜಂ ಅವರನ್ನು ಬೇಕೆಂದೇ ಈ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನಗಳಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹನಿಟ್ರ್ಯಾಪ್‌ಗೆ ಒಳಗಾಗಿದ್ದಾರಾ ಬಾಬರ್ ಅಂಬ ಅನುಮಾನಗಳನ್ನು ಕೂಡ ಕೆಲವರು ವ್ಯಕ್ತಪಡಿಸಿದ್ದು ನಕಲಿ ವಿಡಿಯೋಗಳು ಎಂದು ಕೂಡ ಹೇಳುತ್ತಿದ್ದಾರೆ.

ಬಾಬರ್ ಅಜಂ ಪ್ರಸ್ತುತ ಅದ್ಭುತ ಫಾರ್ಮ್‌ನಲ್ಲಿದ್ದು ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿಯೂ ಬಾಬರ್ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ ಪಾಕಿಸ್ತಾನ ತಂಡ ಕಳಪೆ ಪ್ರದರ್ಶನ ಈಡುವ ಮೂಲಕ ತವರಿನಲ್ಲಿ ಸರಣಿ ಸೋಲು ಅನುಭವಿಸಬೇಕಾಯಿತು. ಇನ್ನು ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿಯೂ ಪಾಕ್ ತಂಡದ ಪ್ರದರ್ಶನ ಕಳಪೆಯಾಗಿದ್ದು ಸಾಕಷ್ಟು ಟೀಕೆಗೆ ಗುರಿಯಾಗಿದೆ.

ಸದ್ಯಕ್ಕೆ ಈ ವೀಡಿಯೊಗಳ ಸತ್ಯಾಸತ್ಯತೆಯನ್ನು ಬಗ್ಗೆ ಯಾವುದೇ ಸ್ಪಷ್ಟತೆಗಳು ಇಲ್ಲ. ಆದರೆ ವೀಡಿಯೊಗಳಲ್ಲಿ ಕಂಡುಬರುವ ವ್ಯಕ್ತಿಯು ಪಾಕಿಸ್ತಾನದ ನಾಯಕ ಬಾಬರ್ ಅಜಂಗೆ ಸಂಪೂರ್ಣವಾಗಿ ಹೋಲಿಕೆಯಾಗುತ್ತಿದೆ ಎನ್ನಲಾಗಿದೆ. ಇದು ಪಾಕ್ ನಾಯಕ ಬಾಬರ್ ಅಜಂ ಅವರನ್ನು ಮುಂದಿನ ದಿನಗಳಲ್ಲಿ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆಯಿದೆ.

Story first published: Monday, January 16, 2023, 22:44 [IST]
Other articles published on Jan 16, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+