Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ಯಾರಾಲಿಂಪಿಕ್ಸ್: ಭವೀನಾಬೆನ್ ಪಟೇಲ್ ಬೆಳ್ಳಿ ಪದಕದ ಸಾಧನೆಗೆ ಕ್ರಿಕೆಟರ್‌ಗಳಿಂದ ಪ್ರಶಂಸೆ

Paralympics 2021: Cricketers praises Bhavinaben Patel for her historic silver medal

ಟೋಕಿಯೋ, ಆಗಸ್ಟ್ 29: ಈ ಬಾರಿಯ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಭವೀನಾಬೆನ್ ಪಟೇಲ್ ಐತಿಹಾಸಿಕ ಸಾಧನೆಯನ್ನು ಮಾಡಿದ್ದಾರೆ. ಟೇಬಲ್‌ ಟೆನಿಸ್‌ನಲ್ಲಿ ಭವೀನಾಬೆನ್ ಪಟೇಲ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಈ ಪದಕದ ಸಾಧನೆಯಿಂದಾಗಿ ಭಾರತದ ಕ್ರೀಡಾಪ್ರೇಮಿಗಳು ಈಗ ಸಂಭ್ರಮದಲ್ಲಿದ್ದಾರೆ. ಸಾಕಷ್ಟು ಪೈಪೋಟಿಯನ್ನು ಎದುರಿಸಿ ಫೈನಲ್‌ಹಂತಕ್ಕೇರುವಲ್ಲಿ ಯಶಸ್ವಿಯಾಗಿದ್ದ ಭವೀನಾಬೆನ್ ಪಟೇಲ್‌ಗೆ ಸೆಮಿಫೈನಲ್‌ನಲ್ಲಿಯೂ ಪ್ರಭಲ ಸ್ಪರ್ಧೆ ಎದುರಾಗಿತ್ತು. ಸೆಮಿಫೈನಲ್ ಗೆದ್ದು ಫೈನಲ್‌ಗೆ ಪ್ರವೇಶ ಪಡೆದಿದ್ದ ಭವೀನಾಬೆನ್ ಪಟೇಲ್ ಬೆಳ್ಳಿ ಪದಕವನ್ನು ಖಚಿತೊಡಿಸಿಕೊಂಡಿದ್ದರು.

ಭವೀನಾಬೆನ್ ಪಟೇನ್ ಸೆಮಿಫೈನಲ್‌ನಲ್ಲಿ ಕೂಡ ಚೀನಾದ ಟೇಬಲ್ ಟೆನಿಸ್ ಆಟಗಾರ್ತಿಯ ವಿರುದ್ಧ ಸೆಣೆಸಾಡಿದ್ದರು. ವಿಶ್ವದ ನಂಬರ್ 3 ಶ್ರೇಯಾಂಕಿಯಾಗಿರುವ ಮಿಯಾವೋ ಝಾಂಗ್ ವಿರುದ್ಧ ಭವೀನಾ ಬೆನ್ ಪಟೇಲ್ 7-11 11-7 11-4 9-11 11-8 ಅಂತರದಿಂದ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದರು. ಈ ಮೂಲಕ ಪ್ಯಾರಾಲಿಂಪಿಕ್ಸ್‌ನ ಟೇಬಲ್‌ ಟೆನಿಸ್‌ನಲ್ಲಿ ಫೈನಲ್‌ಗೆ ಪ್ರವೇಶ ಪಡೆದ ಭಾರತದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದರು.

ಫೈನಲ್‌ನಲ್ಲಿ ವಿಶ್ವದ ನಂಬರ್ 1 ಆಟಗಾರ್ತಿ ಝೌ ಯಿಂಗ್ ವಿರುದ್ಧ ಸೆಣೆಸಾಡಿದ ಭವೀನಾಬೆನ್ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. 7-11, 7-11, 6-11 ನೇರ ಆಟದಿಂದ ಝೌ ಯಿಂಗ್ ಭವೀನಾಬೆನ್ ಪಟೇಲ್ ಅವರನ್ನು ಮಣಿಸಿದರು. ಈ ಮೂಲಕ ಬೆಳ್ಳಿಯ ಪದಕ್ಕೆ ಭಾರತದ ಆಟಗಾರ್ತಿ ತೃಪ್ತಿಪಟ್ಟಿದ್ದಾರೆ. ಆದರೆ ಪ್ಯಾರಾಲಿಂಪಿಕ್ಸ್‌ನ ಟೇಬಲ್‌ಟೆನಿಸ್‌ನಲ್ಲಿ ಈವರೆಗೆ ಪದಕ ಗೆಲ್ಲಲು ಅಸಾಧ್ಯವಾಗಿದ್ದ ಭಾರತಕ್ಕೆ ಬೆಳ್ಳಿಯ ಪದಕದ ಮೂಲಕ ಸಾಧ್ಯವಾಗಿಸಿದ್ದಾರೆ. ಈ ಮೂಲಕ ಭಾರತದ ಕ್ರೀಡಾಪ್ರೇಮಿಗಳು ಈ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ.

ಭವೀನಾಬೆನ್ ಪಟೇಲ್ ಅವರ ಈ ಸಾಧನೆಗೆ ಎಲ್ಲಾ ಕ್ರೀಡಾಪ್ರೇಮಿಗಳು ಕೂಡ ಸಂಭ್ರಮವನ್ನು ವ್ಯಕ್ತಪಡಿಸುತ್ತಿದ್ದು ಅಭಿನಂದನೆ ತಿಳಿಸುತ್ತಿದ್ದಾರೆ. ಭಾರತೀಯ ಕ್ರಿಕೆಟ್‌ನ ಮಾಜಿ ಹಾಗೂ ಹಾಲಿ ಆಟಗಾರರು ಕೂಡ ಈ ಸಾಧನೆಯನ್ನು ಪ್ರಶಂಸಿದ್ದು ಭವೀನಾಬೆನ್‌ಗೆ ಅಭಿನಂದನೆ ತಿಳಿಸುತ್ತಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಟ್ವಿಟ್ಟರ್‌ನಲ್ಲಿ ಅಭಿನಂದನೆ ತಿಳಿಸಿದ್ದಾರೆ. "ಕ್ರೀಡಾ ದಿನವಾಗಿರುವ ಇಂದು ಭಾರತೀಯ ಭಾರತದ ಕ್ರೀಡಾಪ್ರೇಮಿಗಳಿಗೆ ಎಂತಾ ಅದ್ಭುತವಾದ ಸುದ್ದಿಯಿದು. ಬೆಳ್ಳಿಯ ಪದಕಕ್ಕಾಗಿ ಭವೀನಾಬೆನ್ ಅವರಿಗೆ ಅಭಿನಂದನೆಗಳು. ಇದೊಂದು ಐತಿಹಾಸಿಕವಾದ ಸಾಧನೆ. ಕ್ರೀಡೆಯಲ್ಲಿ ನಾವು ಗೆಲ್ಲುವ ಪ್ರತಿಯೊಂದು ಪದಕ ಕೂಡ ಲಕ್ಷಾಂತರ ಜನರಿಗೆ ಸ್ಪೂರ್ತಿಯಾಗುತ್ತದೆ. ಭವಿಷ್ಯದಲ್ಲಿ ಮತ್ತಷ್ಟು ಪದಕಗಳಿಗೆ ಇದು ಬೀಜ ಬಿತ್ತದಂತೆ. ನಮ್ಮ ಪಾಲಿಗೆ ಪ್ಯಾಲಿಂಪಿಕ್ಸ್‌ನಲ್ಲಿ ಇದು ಅತ್ಯುತ್ತಮ ಆರಂಭ" ಎಂದು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಭಾರತೀಯ ಕ್ರಿಕೆಟ್‌ನ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಕೂಡ ಟ್ವಿಟ್ಟರ್‌ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. "ಭಾರತಕ್ಕೆ ಬೆಳ್ಳಿ ಪದಕ. ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಪದಕವನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಭವೀನಾಬೆನ್ ಅವರಿಗೆ ಅಭಿನಂದನೆಗಳು" ಎಂದು ಸಂಬ್ರಮವನ್ನು ಟ್ವಿಟ್ಟರ್‌ನಲ್ಲಿ ವ್ಯಕ್ತಪಡಿಸಿದ್ದಾರೆ.

ಇನ್ನು ಟೀಮ್ ಇಂಡಿಯಾದ ಇನ್ನೋರ್ವ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಹಾಗೂ ಐಪಿಎಲ್‌ನ ಕೆಲ ತಂಡಗಳು ಕೂಡ ಭಾರತೀಯ ಕ್ರೀಡಾಪಟುವಿನ ಈ ಸಾಧನೆಯನ್ನು ಕೊಂಡಾಡಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿಯೂ ಭಾರತೀಯರ ಪ್ರದರ್ಶನ ಗಮನಾರ್ಹ: ಇನ್ನು ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕೂಡ ಭಾರತೀಯ ಆಟಗಾರರು ಟೇಬಲ್ ಟೆನಿಸ್ ವಿಭಾಗದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಭಾರತದ ಆಟಗಾರ್ತಿ ಮನಿಕಾ ಭಾತ್ರ ಮೂರನೇ ಸುತ್ತನ್ನು ಪ್ರವೇಶಿಸುವ ಮೂಲಕ ಭಾರತೀಯರು ಸಂಭ್ರಮಿಸಲು ಕಾರಣವಾಗಿದ್ದರು. ಒಲಿಂಪಿಕ್ಸ್‌ನ ಇತಿಹಾಸದಲ್ಲಿ ಭಾರತೀಯ ಪೆಡ್ಲರ್‌ಗಳು ಮೊದಲ ಬಾರಿಗೆ ಪದಕಗೆಲ್ಲುವ ಭರವಸೆಯನ್ನು ಮೂಡಿಸಿದ್ದರು. ಶರತ್ ಕೂಡ ಅದ್ಭುತ ಪ್ರದರ್ಶನ ನೀಡಲು ಯಶಸ್ವಿಯಾಗಿದ್ದು ಪ್ರದರ್ಶನದಿಂದಾಗಿ ಗಮನಸೆಳೆದಿದ್ದಾರೆ.

Story first published: Sunday, August 29, 2021, 15:47 [IST]
Other articles published on Aug 29, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+