Paris Olympic 2024: ಚಿನ್ನ ಗೆದ್ದ ಅರ್ಷದ್ ನದೀಮ್‌ಗೆ ಪಾಕಿಸ್ತಾನ ಘೋಷಿಸಿದ ನಗದು ಬಹುಮಾನ ಎಷ್ಟು ಗೊತ್ತಾ?
ಆಗಸ್ಟ್ 9 ಶುಕ್ರವಾರ, 2024ರ ಪ್ಯಾರಿಸ್ ಒಲಿಂಪಿಕ್ಸ್ ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯಲ್ಲಿ 92.97 ಮೀಟರ್ ದಾಖಲೆ ದೂರ ಎಸೆದು ಪಾಕಿಸ್ತಾನದ ಅಥ್ಲೀಟ್ ಅರ್ಷದ್ ಸದೀಮ್ ಅವರು ಬಂಗಾರದ ಪದಕವನ್ನು ಗೆದ್ದಿದ್ದಾರೆ. ಹೀಗಾಗಿ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಬೆಳ್ಳಿಗೆ ತೃಪ್ತಿಪಡಬೇಕಾಯಿತು.
ಅರ್ಷದ್ ಒಲಿಂಪಿಕ್ಸ್‌ನಲ್ಲಿ 40 ವರ್ಷಗಳ ಬಳಿಕ ಚಿನ್ನದ ಪದಕವನ್ನು ಪಾಕಿಸ್ತಾನಕ್ಕೆ ತಂದು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನದ 32 ವರ್ಷಗಳ ಸುದೀರ್ಘ ಪದಕದ ಬರವನ್ನು ಅರ್ಷದ್ ನದೀಮ್ ಕೊನೆಗೊಳಿಸಿದ್ದಾರೆ. ಪಾಕಿಸ್ತಾನ ಈ ಹಿಂದೆ 1992ರಲ್ಲಿ ಮೊದಲ ಬಾರಿಗೆ ಒಲಿಂಪಿಕ್ ಪದಕ ಗೆದ್ದಿತ್ತು.

1992ರ ಬಳಿಕ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಗೆಲ್ಲುವಲ್ಲಿ ಪಾಕಿಸ್ತಾನ ವಿಫಲವಾಗಿತ್ತು. ಕೊನೆಯದಾಗಿ 1984 ರಲ್ಲಿ ಪಾಕ್ ಚಿನ್ನದ ಪದಕವನ್ನು ಗೆದ್ದಿತ್ತು. ಈ ಎರಡೂ ಪದಕಗಳನ್ನು ಪುರುಷರ ಹಾಕಿ ತಂಡ ಜಯಿಸಿತ್ತು.
ನಗದು ಬಹುಮಾನ
1992ರ ಬಾರ್ಸಿಲೋನಾ ಒಲಿಂಪಿಕ್ಸ್ ಹಾಕಿಯಲ್ಲಿ ಪಾಕಿಸ್ತಾನದ ಪುರುಷರ ತಂಡ ಕಂಚಿನ ಪದಕವನ್ನು ಗೆದ್ದು ಬೀಗಿತ್ತು. ಆ ಬಳಿಕ ಪಾಕಿಸ್ತಾನ ಯಾವುದೇ ಪದಕ ಗೆದ್ದಿಲ್ಲ. ಇದೀಗ ಅರ್ಷದ್ ಅವರ ಮೂಲಕ ಒಲಿಂಪಿಕ್ಸ್‌ನಲ್ಲಿ ಚಿನ್ನದ ಗೆದ್ದಿರುವ ಪಾಕಿಸ್ತಾನ ಸಂತಸದಲ್ಲಿದೆ.
ಇದೇ ವೇಳೆ ಪಾಕಿಸ್ತಾನ ಸರ್ಕಾರವು ಸ್ಟಾರ್ ಅಥ್ಲೀಟ್ ಅರ್ಷದ್ ನದೀಮ್‌ಗೆ 50 ಮಿಲಿಯನ್ ಪಾಕಿಸ್ತಾನಿ ರೂಪಾಯಿ (ಸುಮಾರು 1.5 ಕೋಟಿ ಭಾರತೀಯ ರೂಪಾಯಿ) ಬಹುಮಾನವನ್ನು ಘೋಷಿಸಿದೆ. ಈ ಬಗ್ಗೆ ಕರಾಚಿ ಮೇಯರ್ ಮುರ್ತಾಜಾ ವಹಾಬ್ ಅವರು ಸಾಮಾಜಿಕ ಜಾಲತಾಣ ಟ್ಟೀಟರ್ (ಎಕ್ಸ್)ನಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
'ಅಭಿನಂದನೆಗಳು ಅರ್ಷದ್. ಅದೃಷ್ಟವಶಾತ್, ಜನರೊಂದಿಗೆ ಈ ಐತಿಹಾಸಿಕ ಕ್ಷಣವನ್ನು ವೀಕ್ಷಿಸುವ ಅವಕಾಶ ನನಗೆ ಸಿಕ್ಕಿತು. 40 ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನಕ್ಕೆ ಚಿನ್ನದ ಪದಕ ಸಿಕ್ಕಿದೆ. ಪಿಪಿಪಿಯ ಸಿಂಧ್ ಸರ್ಕಾರವು ಅರ್ಷದ್‌ಗೆ 5 ಮಿಲಿಯನ್ ರೂಪಾಯಿಗಳನ್ನು ನೀಡಲಿದೆ. ಕರಾಚಿ ಮೆಟ್ರೋಪಾಲಿಟನ್ ಕಾರ್ಪೊರೇಷನ್ (ಕೆಎಂಸಿ) ಪ್ರಾಂತೀಯ ರಾಜಧಾನಿಯಲ್ಲಿ 'ಅರ್ಷದ್ ನದೀಮ್ ಅಥ್ಲೆಟಿಕ್ಸ್ ಅಕಾಡೆಮಿ' ಸ್ಥಾಪಿಸಲಿದೆ ಎಂದು ಮುರ್ತಾಜಾ ವಹಾಬ್ ಬರೆದುಕೊಂಡಿದ್ದಾರೆ.
ಪಾಕ್ ಪ್ರಧಾನಿ ಸಂತಸ
ಇದಕ್ಕೂ ಮುನ್ನ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಅವರು ಅರ್ಷದ್ ನದೀಮ್ ಐತಿಹಾಸಿಕ ಸಾಧನೆಗೆ ಅಭಿನಂದಿಸಿದ್ದಾರೆ. 'ಈ ಗೆಲುವು ಯುವ ಕ್ರೀಡಾಪಟುಗಳಿಗೆ ಸ್ಪೂರ್ತಿದಾಯಕ ಉದಾಹರಣೆಯಾಗಲಿದೆ ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications