Paris Paralympics 2024: ಉದ್ಘಾಟನಾ ಸಮಾರಂಭಕ್ಕೆ ಪ್ರಣಯನಗರಿ ಸಜ್ಜು; ಲೈವ್ ಸ್ಟೀಮಿಂಗ್ ಯಾವಾಗ, ಎಲ್ಲಿ?
2024ರ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕೆ ಪ್ರಣಯನಗರಿ ಪ್ಯಾರಿಸ್ ಸಿದ್ದವಾಗಿದೆ. ನಗರದ ಹೃಯ ಭಾಗದಲ್ಲಿರುವ ಸೆನ್ ನದಿಯ ದಂಡೆಯಲ್ಲಿ ಆಯೋಜಿಸಲಾಗಿದೆ. ಇತ್ತೀಚೆಗೆ ಮುಕ್ತಾಯವಾದ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭವೂ ಇದೇ ರೀತಿ ನಡೆದಿತ್ತು.

11 ದಿನ ನಡೆಯಲಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ 169 ದೇಶಗಳಿಂದ 4400ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. 549 ಪದಕಗಳಿಗಾಗಿ 22 ಕ್ರೀಡೆಗಳಲ್ಲಿ ಅಥ್ಲೀಟ್ಸ್ ಪ್ರಬಲ ಹೋರಾಟ ನಡೆಸಲಿದ್ದಾರೆ. ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು ಎಲ್ಲ ರೀತಿಯ ತಯಾರಿಯನ್ನು ಪ್ಯಾರಿಸ್ ಮಾಡಿಕೊಂಡಿದೆ.
ಭಾರತದ ಅಥ್ಲೀಟ್ಸ್ ತಂಡ
ಈ ಬಾರಿಯ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಒಟ್ಟು 12 ಕ್ರೀಡೆಗಳಲ್ಲಿ ಸ್ಪರ್ಧಿಸುತ್ತಿದೆ. ದೇಶವನ್ನು ಪ್ರತಿನಿಧಿಸಲು ಭಾರತದ 84 ಕ್ರೀಡಾಪಟುಗಳು ಸಜ್ಜಾಗಿದ್ದಾರೆ. ಭಾರತದಿಂದ ಹಿಂದೆಂದೂ ಇಷ್ಟೊಂದು ಸಂಖ್ಯೆ ಕ್ರೀಡಾಪಟುಗಳು ಭಾಗವಹಿಸಿರಲಿಲ್ಲ. ಆಗಸ್ಟ್ 29 ರಂದು ಸ್ಪರ್ಧೆಗಳಲ್ಲಿ ಭಾಗವಹಿಸಲಿರುವ ಕ್ರೀಡಾಪಟುಗಳು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿಲ್ಲ.
ಭಾರತದ ಧ್ವಜಧಾರಿಗಳು ಯಾರು?
ಬುಧವಾರ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಶಾಟ್‌ಪುಟ್ ತಾರೆ ಭಾಗ್ಯಶ್ರೀ ಜಾಧವ್ ಮತ್ತು ಸ್ಟಾರ್ ಜಾವೆಲಿನ್ ಎಸೆತಗಾರ ಸುಮಿತ್ ಆಂಟಿಲ್ ಧ್ವಜಧಾರಿಗಳಾಗಿದ್ದಾರೆ. ಈ ಇಬ್ಬರು ತಾರೆಗಳು ಭಾರತ ಅಥ್ಲೀಟ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಸಮಾರಂಭ ಯಾವಾಗ?
ಪ್ಯಾರಿಸ್ ನರದ ಪ್ಲೇಸ್ ಡಿ ಲಾ ಕಾಪ್, ಚಾಂಪ್ಸ್ ಎಲಿಸೀಸ್‌ನಲ್ಲಿ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿದೆ. ಆಗಸ್ಟ್ 28, ಬುಧವಾರ ರಾತ್ರಿ 11.30 ಗಂಟೆಗೆ ಆರಂಭವಾಗಲಿದೆ.
ನೇರಪ್ರಸಾರ ಎಲ್ಲಿ?
ಭಾರತದಲ್ಲಿ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ ಯಾವುದೇ ಟಿವಿ ಚಾನೆಲ್‌ನಲ್ಲಿ ನೇರಪ್ರಸಾರವಾಗುವುದಿಲ್ಲ. ಆದರೆ ಕ್ರೀಡಾಕೂಟಕ್ಕಡ ಸಂಬಂಧಿಸಿದ ಮುಖ್ಯಾಂಶಗಳು Sports18 TV ಚಾನೆಲ್‌ನಲ್ಲಿ ವೀಕ್ಷಿಸಬಹುದಾಗಿದೆ. ಮೊಬೈಲ್‌ನಲ್ಲಿ ಅಪ್ಲಿಕೇಶನ್ JioCinema ನಲ್ಲಿ ಲೈವ್ ಸ್ಟೀಮಿಂಗ್ ಲಭ್ಯವಿರಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications