2036ರ ಒಲಿಂಪಿಕ್ಸ್ ಕನಸಿನ ಬಗ್ಗೆ ಕೆಂಪು ಕೋಟೆಯಲ್ಲಿ ಮೋದಿ ಹೇಳಿದ್ದೇನು?
ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಒಂದು ಕನಸನ್ನು ಎಲ್ಲರ ಮುಂದೆ ತೆರೆದಿಟ್ಟರು. 2036ರಲ್ಲಿ ನಡೆಯುವ ಒಲಿಂಪಿಕ್ಸ್‌ಗೆ ಭಾರತ ಆತಿಥ್ಯ ನೀಡಬೇಕು ಎಂಬುದೇ ತಮ್ಮ ಕನಸಾಗಿದೆ ಎಂದು ಬಣ್ಣಿಸಿದರು. ಭಾರತವು ವಿಶ್ವ ಮಟ್ಟದ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಲು ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿದೆ ಎಂದು ತಿಳಿಸಿದರು.
ಭಾರತ ತನ್ನ ಕ್ಷಮತೆಯನ್ನು ವಿಶ್ವದ ಮುಂದೆ ತೆರೆದಿಟ್ಟಿದೆ. ಭಾರತದಲ್ಲಿ ಜಿ20 ಶೃಂಗ ಸಭೆಯನ್ನು ಆಯೋಜಿಸಿತ್ತು. ಈ ಮೂಲಕ ಭಾರತ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ತೋರಿಸಿಕೊಟ್ಟಿದೆ ಎಂದು ಪ್ರಧಾನಿ ಹೇಳಿದರು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಹೆಮ್ಮೆಯ ಕ್ರೀಡಾಪಟುಗಳು ನಮ್ಮ ಜೊತೆ ಇದ್ದಾರೆ. ಇವರು ಭಾರತದ ಜನರ ಆಸೆಯನ್ನು ಈಡೇರಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಪ್ಯಾರಿಸ್‌ನಲ್ಲಿ ಪ್ಯಾರಾ ಒಲಿಂಪಿಕ್ಸ್ ನಡೆಯಲಿದ್ದು, ಅದಕ್ಕಾಗಿ ನಾನು ನಮ್ಮ ಕ್ರೀಡಾ ಪಟುಗಳಿಗೆ ಶುಭ ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.

ಭಾರತಕ್ಕೆ ಒಂದು ಕನಸು
ನಮ್ಮ ದೇಶದಲ್ಲಿ ಕ್ರೀಡಾ ಕೂಟದ ಮಹಾ ಜಾತ್ರೆ ನಡೆಯಬೇಕು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. 2036ರಲ್ಲಿ ಒಲಿಂಪಿಕ್ಸ್ ಆತಿಥ್ಯ ವಹಿಸುವುದು ನಮ್ಮೆಲ್ಲರ ಕನಸು. ಈ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದಿದ್ದಾರೆ. ಇದಕ್ಕೂ ಮುನ್ನ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಕೂಡ ಲೋಕಸಭೆಯಲ್ಲಿ ಭಾರತವು ಒಲಿಂಪಿಕ್ಸ್ ಆತಿಥ್ಯವನ್ನು ಪಡೆಯಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದರು.
ಇತ್ತೀಚಿಗೆ ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್ ಕ್ರೀಡಾ ಕೂಟಕ್ಕೆ ತೆರೆ ಬಿದ್ದಿದೆ. 2028 ರ ಒಲಿಂಪಿಕ್ಸ್‌ನ ಆತಿಥ್ಯವನ್ನು ಅಮೆರಿಕದ ಲಾಸ್ ಏಂಜಲೀಸ್ ನಗರದಲ್ಲಿ ನಡೆಯಲಿದೆ. 2032 ರ ಒಲಿಂಪಿಕ್ ಕ್ರೀಡಾಕೂಟವು ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ನಡೆಯಲಿದೆ. ಒಲಿಂಪಿಕ್ ಕ್ರೀಡಾಕೂಟವನ್ನು ಯಾವ ದೇಶ ಆಯೋಜಿಸಬೇಕು ಎಂಬುದನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ನಿರ್ಧರಿಸುತ್ತದೆ.
ಪ್ಯಾರಾಒಲಿಂಪಿಕ್ಸ್ ಇದೇ 28 ರಿಂದ, ಸೆಪ್ಟಂಬರ್ 8ರ ವರೆಗೆ ಪ್ಯಾರಿಸ್‌ನಲ್ಲಿ ನಡೆಯಲಿದೆ. ಭಾರತದ ತಂಡ ಒಟ್ಟು 84 ಕ್ರೀಡಾಪಟುಗಳನ್ನು ಒಳಗೊಂಡಿದ್ದು, ಅವರು 12 ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ. ಪ್ಯಾರಾಒಲಿಂಪಿಕ್ಸ್‌ನಲ್ಲಿ ಭಾರತ ಅಮೊಘ ಸಾಧನೆ ಮಾಡಿದೆ. ಕಳೆದ ಒಲಿಂಪಿಕ್ಸ್‌ನಲ್ಲಿ ಭಾರತ 19 ಪದಕ ಗೆದ್ದು ಕೊಂಡಿತ್ತು. ಇದರಲ್ಲಿ 5 ಚಿನ್ನ, 8 ಬೆಳ್ಳಿ ಮತ್ತು 6 ಕಂಚಿನ ಪದಕ ಸೇರಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications