For Quick Alerts
ALLOW NOTIFICATIONS  
For Daily Alerts

2036ರ ಒಲಿಂಪಿಕ್ಸ್ ಆತಿಥ್ಯಕ್ಕೆ ಭಾರತ ಸಿದ್ಧ ಎಂದು ಬಿಡ್ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

2036ರ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸುವ ಭಾರತದ ಉದ್ದೇಶ ಮತ್ತು ಉತ್ಸಾಹವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸೂಚಿಸಿದರು. 2036ರಲ್ಲಿ ಭಾರತಕ್ಕೆ ಬಹು-ರಾಷ್ಟ್ರೀಯ ಕ್ರೀಡಾಕೂಟವನ್ನು ತರಲು ದೇಶವು ಯಾವುದೇ ಅವಕಾಶವನ್ನು ಬಿಡುವುದಿಲ್ಲ ಎಂದು ನರೇಂದ್ರ ಮೋದಿ ಹೇಳಿದರು.

ಮುಂಬೈನಲ್ಲಿ ನಡೆದ 141ನೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ನರೇಂದ್ರ ಮೋದಿ ಅವರು ಭಾರತದ ಬಿಡ್ ಅನ್ನು ಮುಂದಿಟ್ಟಿದ್ದಾರೆ.

india-is-all-set-to-host-the-2036-olympics

"2036ರಲ್ಲಿ ಭಾರತದಲ್ಲಿ ಒಲಿಂಪಿಕ್ಸ್ ಆಯೋಜಿಸುವ ನಮ್ಮ ಪ್ರಯತ್ನಗಳಲ್ಲಿ ಭಾರತವು ಯಾವುದೇ ಅವಕಾಶವನ್ನು ಬಿಡುವುದಿಲ್ಲ. ಇದು 140 ಕೋಟಿ (1.4 ಬಿಲಿಯನ್) ಭಾರತೀಯರ ದೊಡ್ಡ ಕನಸು," ಎಂದು ನರೇಂದ್ರ ಮೋದಿ ತಿಳಿಸಿದರು.

ಮುಂಬರುವ ವರ್ಷಗಳಲ್ಲಿ ಭಾರತವು ಕ್ರೀಡಾ ಸೂಪರ್ ಪವರ್‌ಗಳಲ್ಲಿ ಒಂದಾಗಿ ಹೊರಹೊಮ್ಮಲು ನೋಡುತ್ತಿರುವಾಗ, ಇದು 1.4 ಶತಕೋಟಿ ಭಾರತೀಯರ ಕನಸಾಗಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

ಭಾರತ ಈವರೆಗೆ ಎಂದಿಗೂ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಿಲ್ಲ ಮತ್ತು ಭಾರತ ಕೊನೆಯ ಬಾರಿಗೆ 2010ರಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಿತ್ತು.

"ನಿಮ್ಮ ಸಹಕಾರ ಮತ್ತು ಬೆಂಬಲದೊಂದಿಗೆ ನಾವು ಈ ಕನಸನ್ನು ನನಸಾಗಿಸಲು ಬಯಸುತ್ತೇವೆ. ಭಾರತವು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯ ಬೆಂಬಲವನ್ನು ಪಡೆಯಲಿದೆ ಎಂಬ ವಿಶ್ವಾಸವಿದೆ," ಎಂದರು.

india-is-all-set-to-host-the-2036-olympics

ಕಳೆದ ತಿಂಗಳು, ಪೋಲೆಂಡ್ ಅಧ್ಯಕ್ಷ ಆಂಡ್ರೆಜ್ ಡುಡಾ ಅವರು ತಮ್ಮ ದೇಶವು 2036ರ ಒಲಂಪಿಕ್ಸ್ ಅನ್ನು ಆಯೋಜಿಸುವ ಭರವಸೆಯನ್ನು ಹೊಂದಿದೆ ಎಂದು ಹೇಳಿದರು. ಇದೇ ವೇಳೆ ಇಂಡೋನೇಷ್ಯಾ ಮತ್ತು ಮೆಕ್ಸಿಕೋ ಕೂಡ ಕ್ರೀಡೆಯ ಅತಿದೊಡ್ಡ ಕ್ರೀಡಾಕೂಟವನ್ನು ಆಯೋಜಿಸಲು ಬಿಡ್ ಮಾಡುವ ನಿರೀಕ್ಷೆಯಿದೆ.

ಇದೀಗ ಭಾರತವು 2029ರಲ್ಲಿ ಯೂತ್ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲಿದೆ ಎಂದು ನರೇಂದ್ರ ಮೋದಿ ಹೇಳಿದರು. ಕ್ರೀಡೆ ಎಂದರೆ ಪದಕ ಗೆಲ್ಲುವುದಷ್ಟೇ ಅಲ್ಲ ಹೃದಯ ಗೆಲ್ಲುವುದೂ ಆಗಿದೆ ಎಂದರು.

Story first published: Saturday, October 14, 2023, 23:23 [IST]
Other articles published on Oct 14, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+