ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಐತಿಹಾಸಿಕ ಚಿನ್ನದ ಪದಕವನ್ನು ಗೆದ್ದ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರ ಸಾಧನೆಗೆ ಎಲ್ಲೆಡೆಯಿಂದ ಪ್ರಶಂಸೆಗಳು ಹರಿದುಬರುತ್ತಿದೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ನೀರಜ್ ಚೋಪ್ರ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದು ಕ್ರೀಡಾಪಟುವಿನ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ.
ಹಂಗೇರಿಯಾ ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ 88.17 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ನೀರಜ್ ಚೋಪ್ರ ಐತಿಹಾಸಿಕ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಈ ಮೂಲಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಐವರೆಗೆ ಯಾವುದೇ ಭಾರತೀತ ಅಥ್ಲಿಟ್‌ನಿಂದ ಮಾಡಲು ಸಾಧ್ಯವಾಗದ ಸಾಧನೆಯನ್ನು ಸಾಧಿಸಿದ್ದಾರೆ ನೀರಜ್ ಚೋಪ್ರ. ಪಾಕಿಸ್ತಾನದ ಅರ್ಷದ್ ನದೀಮ್, ಜೆಕ್ ರಿಪಬ್ಲಿಕ್‌ನ ಜಾಕೂಬ್ ವಡ್ಲೇಜ್ ತೀವ್ರ ಪೈಪೊಟಿ ನೀಡಿದರಾದರೂ ನೀರಜ್ ಚೋಪ್ರ ಅವರನ್ನು ಹಿಂದಿಕ್ಕಲು ಸಾಧ್ಯವಾಗಲಿಲ್ಲ.

ಇನ್ನು ನೀರಜ್ ಚೋಪ್ರ ಅವರ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. "ಪ್ರತಿಭಾನ್ವಿತ ಕ್ರೀಡಾಪಟು ನೀರಜ್ ಚೋಪ್ರ ಶ್ರೇಷ್ಠತೆಗೆ ಉದಾಹರಣೆಯಾಗಿದ್ದಾರೆ. ಅವರ ಬದ್ಧತೆ, ಸಮರ್ಪಣಾಭಾವ ಹಾಗೂ ನಿಖರತೆ ಅವರನ್ನು ಅಥ್ಲೆಟಿಕ್ಸ್‌ನಲ್ಲಿ ಕೇವಲ ಚಾಂಪಿಯನ್ ಮಾತ್ರವೇ ಆಡಿಲ್ಲ. ಇಡೀ ಕ್ರೀಡಾ ಜಗತ್ತಿನಲ್ಲಿಯೇ ಸಾಟಿಯಿಲ್ಲದ ಶ್ರೇಷ್ಠ ಕ್ರೀಡಾಪಟು ಎನಿಸಿಕೊಳ್ಳುವಂತೆ ಮಾಡಿದೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಅವರಿಗೆ ಅಭಿನಂದನೆಗಳು" ಎಂದಿದ್ದಾರೆ ಪ್ರಧಾನಿ ಮೋದಿ.
ಇನ್ನು ಖೇಂದ್ರ ಕ್ರೀಡಾಸಚಿವ ಅನುರಾಗ್ ಠಾಕೂರ್ ಕೂಡ ಟ್ವೀಟ್‌ನಲ್ಲಿ ಸಭಿನಂದನೆ ಸಲ್ಲಿಸಿದ್ದಾರೆ. "ನೀರಜ್ ಚೋಪ್ರಮತ್ತೊಮ್ಮೆ ಇದನ್ನು ಸಾಧಿಸಿದ್ದಾರೆ. ಚಿನ್ನದ ಪದಕಕ್ಕಾಗಿ 88.17 ಮೀಟರ್. ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಗೋಲ್ಡನ್ ಬಾಯ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ನೀರಜ್ ಚೋಪ್ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎನಿಸಿಕೊಂಡಿದ್ದಾರೆ. ನಿಮ್ಮ ಈ ಸಾಧನೆಗೆ ಇಡೀ ದೇಶವೇ ಹೆಮ್ಮೆಪಡುತ್ತಿದೆ. ಈ ಸಂದರ್ಭ ಭಾರತದ ಕ್ರೀಡಾ ಇತಿಹಾಸದಲ್ಲಿ ಶಾಶ್ವತವಾಗಿ ಉಳಿದುಕೊಳ್ಳಲಿದೆ" ಎಂದು ಅನುರಾಗ್ ಠಾಕೂರ್ ಟ್ವೀಟ್ ಮಾಡಿದ್ದಾರೆ.
2022ರಲ್ಲಿಯೂ ಈ ಸಾಧನೆಯ ಸನಿಹಕ್ಕೆ ತಲುಪಿದ್ದ ನೀರಜ್ ಚೋಪ್ರ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಆದರೆ ಅದು ಕೂಡ ಭಾರತದ ಮಟ್ಟಿಗೆ ಶ್ರೇಷ್ಠ ಸಾಧನೆಯಾಗಿತ್ತು. ಯಾಕೆಂದರೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅದು ಭಾರತ ಗೆದ್ದ ಪ್ರಪ್ರಥಮ ಬೆಳ್ಳಿ ಪದಕವಾಗಿತ್ತು. ಇದೀಗ ನೀರಜ್ ಚೋಪ್ರ ಮೂಲಕವೇ ಭಾರತ ಚಿನ್ನದ ಪದಕವನ್ನು ಕೂಡ ಗೆದ್ದಂತಾಗಿದೆ.
ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದ ಎರಡನೇ ಪದಕವಾಗಿದ್ದರೆ ಭಾರತದ ಕೇವಲ ಮೂರನೇ ಇದಕ ಇದಾಗಿದೆ. ಕಳೆದ ವರ್ಷ ಒರೆಗಾನ್‌ನಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರ ಬೆಳ್ಳಿ ಪದಕ ಗೆದ್ದಿದ್ದು ಭಾರತದ ಈವರೆಗಿನ ಅತ್ಯುನ್ನತ ಸಾಧನೆಯಾಗಿತ್ತು. . ಅದಕ್ಕೂ ಮುನ್ನ 2003ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಕ್ರೀಡಾಕೂಟದ ಲಾಂಗ್‌ಜಂಪ್‌ನಲ್ಲಿ ಅಂಜು ಬಾಬಿ ಜಾರ್ಜ್ ಕಂಚಿನ ಪದಕ ಗೆದ್ದಿದ್ದು ಭಾರತದ ಪಾಲಿಗೆ ಮೊಟ್ಟ ಮೊದಲ ಪದಕವಾಗಿತ್ತು. ಹೀಗಾಗಿ ನೀರಜ್ ಚೋಪ್ರ ಅವರು ಈ ವಿಶ್ವ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮಾಡಿರುವ ಸಾಧನೆ ಅತ್ಯಂತ ಮೌಲ್ಯಯುತವಾಗಿದೆ.