ಸಚಿನ್, ಗಂಗೂಲಿ, ಕೊಹ್ಲಿ ಸೇರಿದಂತೆ ಕ್ರೀಡಾಪಟುಗಳೊಂದಿಗೆ ಪ್ರಧಾನಿ ಮಾತು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ವಿರಾಟ್ ಕೊಹ್ಲಿ ಮುಂತಾದ ಪ್ರಖ್ಯಾತ ಕ್ರೀಡಾ ವ್ಯಕ್ತಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದಾರೆ. ಕೊರೊನಾ ವೈರಸ್ ಬಗ್ಗೆ ಪ್ರತಿಯೊಬ್ಬ ನಾಗರೀಕನನ್ನೂ ತಲುಪುವ ದೃಷ್ಟಿಯಿಂದ ಪ್ರಧಾನಿಗಳು ಕ್ರೀಡಾಲೋಕದ ಖ್ಯಾತನಾಮರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಕ್ರಿಕೆಟ್ ಆಟಗಾರರು ಮಾತ್ರವಲ್ಲ ಶಟ್ಲರ್ ಪಿ.ವಿ ಸಿಂಧು ಮತ್ತು ಕ್ರೀಡಾಪಟು ಹಿಮಾ ದಾಸ್ ಕೂಡ ಈ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗಿದ್ದರು. ಮೂಲಗಳ ಪ್ರಕಾರ ಇನ್ನೂ ಹಲವಾರು ಕ್ರೀಡಾ ಲೋಕದ ದಿಗ್ಗಜರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಮಾತುಕತೆಯನ್ನು ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಸಚಿನ್, ವಿರಾಟ್ ಗಂಗೂಲಿ ಮಾತ್ರವಲ್ಲ ಇನ್ನೂ ಹಲವಾರು ಆಟಗಾರರ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರು ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಸಿದೆ. ಕೊರೊನಾದಂತಾ ಸಾಂಕ್ರಾಮಿಕ ರೋಗದೊಂದಿಗೆ ಹೋರಾಡುತ್ತಿರುವ ಈ ಸಂದರ್ಭದಲ್ಲಿ ಎಲ್ಲರೂ ಮನೆಯೊಳಗಡೆಯೇ ಇರಬೇಕೆಂದು ಕ್ರೀಡಾಪಟುಗಳ ಮೂಲಕ ಸಂದೇಶವನ್ನು ರವಾನಿಸುವ ಪ್ರಯತ್ಮ ಪ್ರದಾನಿಗಳು ಮಾಡಿರಬಹುದೆಂದು ಮೂಲಗಳು ಹೇಳಿದೆ.
ಕ್ರಿಕೆಟ್ ಆಟಗಾರರು ಈಗಾಗಲೇ ಹಲವಾರು ಬಾರಿ ಸಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಎಚ್ಚರಿಕೆಯನ್ನು ವಹಿಸಿಕೊಳ್ಳುವಂತೆ ಮನವಿಯನ್ನು ಮಾಡಿಕೊಂಡಿದ್ದಾರೆ. ಹಲವಾರು ಕ್ರೀಡಾಪಟುಗಳು ಕೊರೊನಾ ವೈರಸ್ ವಿರುದ್ದದ ಹೋರಾಟಕ್ಕೆ ಆರ್ಥಿಕವಾಗಿ ಸಹಾಯವನ್ನು ಮಾಡಿದ್ದಾರೆ.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ವಿಶ್ವದ ಎಲ್ಲಾ ಕ್ರೀಡಾಕೂಟಗಳೂ ಸಧ್ಯಕ್ಕೆ ರದ್ಧಾಗಿದೆ. ಐಪಿಎಲ್ ಸೇರಿದಂತೆ ವಿಶ್ವಕಪ್‌ನ ಭವಿಷ್ಯವೂ ಈವಾರಿ ತೂಗುಯ್ಯಾಲೆಯಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications