Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ - ದಕ್ಷಿಣ ಆಫ್ರಿಕಾ ಪಂದ್ಯ: ಬಲಾಬಲ ಪರೀಕ್ಷೆ

ಮೆಲ್ಬೋರ್ನ್, ಫೆ.21: ಆಫ್ರಿಕಾದ ಹರಿಣಗಳ ಮೇಲೆ ಭಾರತದ ಹುಲಿಗಳು ಸವಾರಿ ಮಾಡಬಲ್ಲರೇ? ವಿರಾಟ್ ಕೊಹ್ಲಿ ಶತಕ ಸಿಡಿಸುವರೇ? ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಮೊದಲ ಜಯ ದಾಖಲಿಸುವುದೇ? ಎಂಬೆಲ್ಲಾ ಪ್ರಶ್ನೆಗಳಿಗೆ ನಾಳೆ ಈ ಸಮಯಕ್ಕೆ ಉತ್ತರ ಸಿಕ್ಕಿರುತ್ತದೆ. ಅದರೆ, ಸದ್ಯಕ್ಕೆ ಉಭಯ ತಂಡಗಳ ಬಲಾಬಲ ಪರೀಕ್ಷೆ ಇಲ್ಲಿ ಓದಿ...

ವಿಶ್ವಕಪ್ ಸಮರದಲ್ಲಿ ಭಾರತದ ವಿರುದ್ಧ ಗೆಲುವಿನ ರುಚಿ ನೋಡಲು ಪಾಕಿಸ್ತಾನ ಪರದಾಟ ಪಟ್ಟಂತೆ, ಟೀಂ ಇಂಡಿಯಾ ಕೂಡಾ ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲಲು ಸಾಧ್ಯವಾಗಿಲ್ಲ. 1992,1999 ಹಾಗೂ 2011 ವಿಶ್ವಕಪ್ ಪಂದ್ಯಗಳಲ್ಲಿ ಭಾರತಕ್ಕೆ ಸೋಲುಣಿಸಿದ ದಕ್ಷಿಣ ಆಫ್ರಿಕಾ ಮತ್ತೊಮ್ಮೆ ಗೆಲ್ಲುವ ನೆಚ್ಚಿನ ಕುದುರೆ ಎನಿಸಿದೆ. [ಕೊಹ್ಲಿ ಶತಕ ಸಿಡಿಸುವರೆ?]

Preview: World Cup Match 13: India Vs South Africa at MCG

ಕಳೆದ ಮೂರು ಬಾರಿ ಸೋಲು ಕಂಡಾಗಲೂ ಭಾರತ ಮೊದಲು ಬ್ಯಾಟಿಂಗ್ ಮಾಡಿತ್ತು. ಈ ಬಾರಿ ಧೋನಿ ಟಾಸ್ ಗೆದ್ದರೆ ಏನು ಆಯ್ಕೆ ಮಾಡುತ್ತಾರೋ ಗೊತ್ತಿಲ್ಲ.

ಮುಖ್ಯಾಂಶವೇನು? : ವಿರಾಟ್ ಕೊಹ್ಲಿ ಹಾಗೂ ಸುರೇಶ್ ರೈನಾ ಉತ್ತಮ ಲಯದಲ್ಲಿದ್ದಾರೆ. ಶಿಖರ್ ಧವನ್ ಕೂಡಾ ಲಯಕ್ಕೆ ಮರಳಿದ್ದಾರೆ. ಎಂಎಸ್ ಧೋನಿ ಯಾವಾಗ ಬೇಕಾದರೂ ಸಿಡಿಸುವ ಬ್ಯಾಟಿಂಗ್ ಶಕ್ತಿ ಹೊಂದಿದ್ದಾರೆ.

ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ

ರೋಹಿತ್ ಶರ್ಮ, ಅಜಿಂಕ್ಯ ರಹಾನೆ ಸೇರಿದಂತೆ ಬ್ಯಾಟಿಂಗ್ ಸಬಲವಾಗೇ ಇದೆ. ಅದರೆ, ಬೌಲಿಂಗ್ ನಲ್ಲಿ ಸ್ವಲ್ಪ ಜಾಸ್ತಿನೇ ವೀಕ್ ಆಗಿದೆ. ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜ ಅವರು ಹೇಗೆ ಬೌಲಿಂಗ್ ಮಾಡುತ್ತಾರೆ ಎಂಬುದು ಪಂದ್ಯದ ಗತಿ ನಿರ್ಧರಿಸಲಿದೆ.

Virat Kohli

ದಕ್ಷಿಣ ಆಫ್ರಿಕಾ ಪರ ಎಬಿ ಡಿ ವಿಲೆಯರ್ಸ್, ಹಾಶೀಂ ಅಮ್ಲಾ, ಫಾಫ್ ಡು ಪ್ಲೆಸಿಸ್, ಡೇವಿಡ್ ಮಿಲ್ಲರ್, ಜೆಪಿ ಡುಮಿನಿ ಉತ್ತಮ ಲಯದಲ್ಲಿದ್ದಾರೆ. ಬೌಲಿಂಗ್ ನಲ್ಲಿ ಫಿಲ್ಯಾಂಡರ್, ಮಾರ್ನೆ ಮಾರ್ಕೆಲ್, ಡೇಲ್ ಸ್ಟೇನ್ ಸಮರ್ಥ ಬೌಲಿಂಗ್ ಹೊಂದಿದೆ.

ದಕ್ಷಿಣ ಆಫ್ರಿಕಾ : ಎಬಿ ಡಿ ವಿಲ್ಲೆಯರ್ಸ್(ನಾಯಕ), ಹಶೀಂ ಆಮ್ಲಾ(ಉಪ ನಾಯಕ), ಕೈಲೆ ಅಬಾಟ್, ಫರ್ಹಾನ್ ಬೆಹರ್ದೀನ್, ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ಜೆಪಿ ಡುಮುನಿ, ಫಾಫ್ ಡು ಪ್ಲೆಸಿಸ್, ಇಮ್ರಾನ್ ತಾಹೀರ್, ಡೇವಿಡ್ ಮಿಲ್ಲರ್, ಮಾರ್ನೆ ಮಾರ್ಕೆಲ್, ವಾಯ್ನೆ ಪಾರ್ನೆಲ್, ಅರೋನ್ ಫಂಗಿಸೋ, ವೆರ್ನಾನ್ ಫಿಲಾಂಡರ್, ರಿಲೇ ರೊಸ್ಸೊ, ಡೆಲ್ ಸ್ಟೇನ್.

ಭಾರತ: ಎಂಎಸ್ ಧೋನಿ(ನಾಯಕ, ವಿಕೆಟ್ ಕೀಪರ್) ಅಜಿಂಕ್ಯ ರಹಾನೆ, ಶಿಖರ್ ಧವನ್,ವಿರಾಟ್ ಕೊಹ್ಲಿ, ಸುರೇಶ್ ರೈನಾ,ರೋಹಿತ್ ಶರ್ಮ,ಅಂಬಟಿ ರಾಯುಡು ಆರ್ ಅಶ್ವಿನ್, ಅಕ್ಷರ್ ಪಟೇಲ್, ರವೀಂದ್ರ ಜಡೇಜ,ಸ್ಟುವರ್ಟ್ ಬಿನ್ನಿ, ಭುವನೇಶ್ವರ್ ಕುಮಾರ್, ಮಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮ. [ಟೀಂ ಇಂಡಿಯಾ ಬಗ್ಗೆ ಪೂರ್ಣ ಗೈಡ್]

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+