ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ ವಿರುದ್ಧ ಕೊಹ್ಲಿ ದಾಖಲೆ ಮುರಿಯುವರೇ?

By Mahesh

ಮೆಲ್ಬೋರ್ನ್, ಫೆ.19: ಟೀಂ ಇಂಡಿಯಾದ ಉಪ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ ಬೀಸಿದರೆ ಸಾಕು ಎದುರಾಳಿ ತಂಡಕ್ಕೆ ನಡುಕ ಹುಟ್ಟುವಂಥ ಪರಿಸ್ಥಿತಿ ಇದೆ. ವಿಶ್ವಕಪ್ ಟೂರ್ನಿಯ ಟಾಪ್ ಆಟಗಾರರ ಪೈಕಿ ಒಬ್ಬರೆನಿಸಿರುವ ವಿರಾಟ್ ಕೊಹ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಮುಗಿಸದೇ ಬಿಟ್ಟಿರುವ ಒಂದು ಕಾರ್ಯವನ್ನು ಈ ಬಾರಿ ಮುಗಿಸಲು ಕಾತುರರಾಗಿದ್ದಾರಂತೆ.

ವಿಶ್ವಕಪ್ ವಿಶೇಷ ಪುಟ | ಭಾರತ -ದಕ್ಷಿಣ ಆಫ್ರಿಕಾ ಫೈಟ್ ಹಿನ್ನೋಟ

ವಿಶ್ವಕಪ್ ಸಾಮ್ಯತೆ: 2011ರ ವಿಶ್ವಕಪ್ ಆರಂಭದಂತೆ 2015ರ ವಿಶ್ವಕಪ್ ನಲ್ಲೂ ಕೂಡಾ ವಿರಾಟ್ ಕೊಹ್ಲಿ ಭರ್ಜರಿ ಆರಂಭ ಪಡೆದುಕೊಂಡಿದ್ದಾರೆ.2011ರಲ್ಲಿ ಬಾಂಗ್ಲಾದೇಶ ವಿರುದ್ಧ ಶತಕ ಬಾರಿಸಿದ್ದರು. ನಂತರ ಭಾರತ ವಿಶ್ವಕಪ್ ಗೆದ್ದುಕೊಂಡಿದ್ದು ಇತಿಹಾಸ. [ಕೊಹ್ಲಿ ದಾಖಲೆಗಳ ಪಟ್ಟಿ]

ನಾಲ್ಕು ವರ್ಷಗಳ ನಂತರ ವಿರಾಟ್ ಕೊಹ್ಲಿ ಅವರು ಅಡಿಲೇಡ್ ನಲ್ಲಿ ಮೊದಲ ಪಂದ್ಯದಲ್ಲೇ ಪಾಕಿಸ್ತಾನ ವಿರುದ್ಧ 107ರ ನ್ ಹೊಡೆದರು. ಭಾರತ 76 ರನ್ನಿಂದ ಜಯ ಗಳಿಸಿತ್ತು. ಇತಿಹಾಸ ಮರಕಳಿಸುತ್ತಾ? ಕಾದು ನೋಡೋಣ....[ಹರಿಣಗಳ ವಿರುದ್ಧ ಶತಕ ಸಾಧಿಸಿದ್ದು ಸಚಿನ್ ಮಾತ್ರ]

ಈಗ ದಕ್ಷಿಣ ಆಫ್ರಿಕಾ ವಿಷಯಕ್ಕೆ ಬಂದರೆ, ವಿರಾಟ್ ಕೊಹ್ಲಿ ಅವರು ವೈಯಕ್ತಿಕ ರನ್ ಗಳಿಕೆ ಹೆಚ್ಚಿಸಿ ತಂಡಕ್ಕೆ ಜಯ ತಂದು ಕೊಡುವ ಪಣ ತೊಟ್ಟಿದ್ದಾರಂತೆ. ಕೊಹ್ಲಿ 22 ಏಕದಿನ ಶತಕ ಬಾರಿಸಿ ಅತಿ ಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ಸೌರವ್ ಗಂಗೂಲಿ ಜೊತೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಸಚಿನ್ ತೆಂಡೂಲ್ಕರ್ (49), ರಿಕಿ ಪಾಂಟಿಂಗ್ (30) ಹಾಗೂ ಸನತ್ ಜಯಸೂರ್ಯ (28) ಮುಂದಿದ್ದಾರೆ.

World Cup: Virat Kohli has unfinished work against South Africa

ಅದರೆ, ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ ಯಾವುದೇ ಶತಕ ಬಾರಿಸಿಲ್ಲ. 26 ವರ್ಷ ವಯಸ್ಸಿನ ವಿರಾಟ್ ಕೊಹ್ಲಿ ಅವರು ಎಂಸಿಜಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಶತಕ ಬಾರಿಸುವ ತವಕದಲ್ಲಿದ್ದಾರೆ. ಇದುವರೆವಿಗೂ 13 ಬಾರಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿರುವ ಕೊಹ್ಲಿ 87 ನಾಟೌಟ್ (2011) ಅತ್ಯಧಿಕ ಮೊತ್ತವಾಗಿದೆ.

ಕೊಹ್ಲಿ ವಿಶ್ವಕಪ್ ಪರಾಕ್ರಮ
* ಪಂದ್ಯ 13 (11 ಇನ್ನಿಂಗ್ಸ್ ), 1 ನಾಟೌಟ್
* ರನ್ : 344, ಅತ್ಯಧಿಕ : 87*
* ಶತಕ: ೦, ಅರ್ಧಶತಕ : 3.
* ರನ್ ಸರಾಸರಿ : 34.40, ಸ್ಟ್ರೈಕ್ ರೇಟ್: 74.77

ಕೊಹ್ಲಿ 22 ಶತಕ (8 ಮೊದಲು ಬ್ಯಾಟಿಂಗ್, 14 ರನ್ ಚೇಸಿಂಗ್)
* 20 ಶತಕ ಗಳು ಭಾರತಕ್ಕೆ ಜಯ ತಂದುಕೊಟ್ಟಿವೆ.
* ವಿಶ್ವಕಪ್ ಶತಕಗಳು -2 (ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ವಿರುದ್ಧ ತಲಾ 1)
* ಶ್ರೀಲಂಕಾ ವಿರುದ್ಧ 6, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ಬಾಂಗ್ಲಾದೇಶ ವಿರುದ್ಧ 3
* ಪಾಕಿಸ್ತಾನ, ಇಂಗ್ಲೆಂಡ್, ನ್ಯೂಜಿಲೆಂಡ್ ವಿರುದ್ಧ 2
* ಜಿಂಬಾಬ್ವೆ ವಿರುದ್ಧ 1

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X