For Quick Alerts
ALLOW NOTIFICATIONS  
For Daily Alerts

Prithvi Shaw-Sapna Gill Case: ನಿಟ್ಟುಸಿರು ಬಿಟ್ಟ ಪೃಥ್ವಿ ಶಾ; ಸಪ್ನಾ ಗಿಲ್ ಕಿರುಕಳ ಆರೋಪ ಸುಳ್ಳು; ಪೊಲೀಸ್ ವರದಿ

ಕೆಲ ತಿಂಗಳ ಹಿಂದೆ ಮುಂಬೈನ ಉಪನಗರ ಅಂಧೇರಿಯಲ್ಲಿರುವ ಪಬ್‌ನಲ್ಲಿ ಭಾರತ ತಂಡದ ಕ್ರಿಕೆಟಿಗ ಪೃಥ್ವಿ ಶಾ ತನಗೆ ಕಿರುಕುಳ ನೀಡಿದ್ದಾರೆ ಎಂಬ ಸೋಷಿಯಲ್ ಮೀಡಿಯಾ ಸ್ಟಾರ್ ಸಪ್ನಾ ಗಿಲ್ ಅವರ ಆರೋಪ ಸುಳ್ಳು ಮತ್ತು ಆಧಾರ ರಹಿತ ಎಂದು ಪೊಲೀಸರು ಸೋಮವಾರ ಮುಂಬೈನ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಸೋಮವಾರ, ಜೂನ್ 26ರಂದು ಪ್ರಕರಣದ ಉಸ್ತುವಾರಿ ವಹಿಸಿದ್ದ ಮ್ಯಾಜಿಸ್ಟ್ರೇಟ್ ಮುಂದೆ ತನಿಖಾಧಿಕಾರಿ ಹಾಜರಾಗಿ ವರದಿ ಸಲ್ಲಿಸಿದರು.

ಪೊಲೀಸರು ವರದಿಯನ್ನು ಸಲ್ಲಿಸಿದ ನಂತರ, ಸಪ್ನಾ ಗಿಲ್ ಅವರ ವಕೀಲ ಅಲಿ ಕಾಶಿಫ್ ಖಾನ್ ಅವರು ಗಿಲ್ ಅವರ ಸ್ನೇಹಿತ ತಮ್ಮ ಫೋನ್‌ನಲ್ಲಿ ರೆಕಾರ್ಡ್ ಮಾಡಿದ ಜಗಳದ ವಿಡಿಯೋ ತುಣುಕನ್ನು ಪ್ರಸ್ತುತಪಡಿಸಲು ಅವಕಾಶ ನೀಡುವಂತೆ ನ್ಯಾಯಾಲಯವನ್ನು ಕೋರಿದರು ಮತ್ತು ಅದು ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಪಬ್ ಹೊರಗೆ ನಡೆದ ಘಟನೆಯ ಸಿಸಿಟಿವಿ ಒಡೆಯಲು ಸಹ ಅವರು ಪ್ರಯತ್ನಿಸಿದರು.

Prithvi Shaw-Sapna Gill Case

ಇಡೀ ಘಟನೆಯ ದೃಶ್ಯಾವಳಿಗಳನ್ನು ಸಲ್ಲಿಸುವಂತೆ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿತು, ನಂತರ ಜೂನ್ 28ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿತು.

ಸಪ್ನಾ ಗಿಲ್ ಅವರು ಅಂಧೇರಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಐಪಿಸಿ ಸೆಕ್ಷನ್ 354 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲು (ಉದ್ದೇಶಪೂರ್ವಕವಾಗಿ ಮಹಿಳೆಗೆ ಹಲ್ಲೆ ಅಥವಾ ಬಲಾತ್ಕಾರ ಮಾಡುವ ಕ್ರಿಮಿನಲ್ ದೂರು), ಐಪಿಸಿ ಸೆಕ್ಷನ್ 509 (ಹೆಣ್ಣನ್ನು ಅವಮಾನಿಸುವ ಉದ್ದೇಶದಿಂದ ಮಾತು, ಸನ್ನೆ ಅಥವಾ ಕೃತ್ಯ) ಮತ್ತು ಐಪಿಸಿ ಸೆಕ್ಷನ್ 324 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಶಸ್ತ್ರಾಸ್ತ್ರಗಳಿಂದ ಹಲ್ಲೆ ಮಾಡುವುದು).

ಕ್ರಿಕೆಟಿಗ ಪೃಥ್ವಿ ಶಾ ಮತ್ತು ಆತನ ಸ್ನೇಹಿತ ಆಶಿಶ್ ಯಾದವ್ ವಿರುದ್ಧ ಫೆಬ್ರವರಿಯಲ್ಲಿ ಬ್ಯಾಟ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ಸಪ್ನಾ ಗಿಲ್ ದೂರು ಸಲ್ಲಿಸಿದ್ದರು.

Prithvi Shaw-Sapna Gill Case

ನ್ಯಾಯಾಲಯಕ್ಕೆ ತೆರಳುವ ಮುನ್ನ ಸಪ್ನಾ ಗಿಲ್ ಅವರು ಪೃಥ್ವಿ ಶಾ ಮತ್ತು ಆತನ ಸ್ನೇಹಿತನ ವಿರುದ್ಧ ಕಿರುಕುಳ ಪ್ರಕರಣವನ್ನು ದಾಖಲಿಸಲು ಅಂಧೇರಿಯ ವಿಮಾನ ನಿಲ್ದಾಣ ಪೊಲೀಸ್ ಠಾಣೆ ಸಂಪರ್ಕಿಸಿದ್ದರು.

ಸಪ್ನಾ ಗಿಲ್ ಮತ್ತು ಆಕೆಯ ಸ್ನೇಹಿತ ಶೋಬಿತ್ ಠಾಕೂರ್ ಕುಡಿದು ಡ್ಯಾನ್ಸ್ ಮಾಡಿರುವುದು ಪಬ್‌ನ ಸಿಸಿಟಿವಿ ದೃಶ್ಯಾವಳಿಗಳು ಸೂಚಿಸುತ್ತವೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಶೋಬಿತ್ ಠಾಕೂರ್ ತನ್ನ ಮೊಬೈಲ್ ಫೋನ್‌ನಲ್ಲಿ ಪೃಥ್ವಿ ಶಾ ಅವರನ್ನು ರೆಕಾರ್ಡ್ ಮಾಡಲು ಬಯಸಿದ್ದರು. ಆದರೆ ಕ್ರಿಕೆಟಿಗ ವಿಡಿಯೋ ಮಾಡದಂತೆ ತಡೆದರು. ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಪೃಥ್ವಿ ಶಾ ಮತ್ತು ಇತರರು ಸಪ್ನಾ ಗಿಲ್‌ಗೆ ಯಾವುದೇ ರೀತಿಯಲ್ಲಿ ಕಿರುಕುಳ ನೀಡಿರುವುದು ಕಂಡುಬರುತ್ತಿಲ್ಲ ಎಂದು ಪೊಲೀಸರು ವರದಿ ಸಲ್ಲಿಸಿದ್ದಾರೆ.

Prithvi Shaw: ಸಪ್ನಾ ಗಿಲ್ ಪ್ರಕರಣದಲ್ಲಿ ಪೃಥ್ವಿ ಶಾಗೆ ನೋಟೀಸ್ ನೀಡಿದ ಬಾಂಬೆ ಹೈಕೋರ್ಟ್

ಈ ಘಟನೆ ಸಂಭವಿಸಿದ ಪಬ್‌ನಲ್ಲಿ ಹಾಜರಿದ್ದ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದು, ಯಾರೂ ಸಪ್ನಾ ಗಿಲ್ ಅವರನ್ನು ಅನುಚಿತವಾಗಿ ಮುಟ್ಟಿಲ್ಲ ಎಂದಿದ್ದಾರೆ. ಸುತ್ತಮುತ್ತಲಿನ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಟವರ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪೊಲೀಸರು ಪರಿಶೀಲಿಸಿದ್ದಾರೆ.

ಪೃಥ್ವಿ ಶಾ ಅವರ ಕಾರನ್ನು ಸೋಷಿಯಲ್ ಮೀಡಿಯಾ ಸ್ಟಾರ್ ಸಪ್ನಾ ಗಿಲ್ ಅವರು ಕೈಯಲ್ಲಿ ಬೇಸ್‌ಬಾಲ್ ಬ್ಯಾಟ್ ಹಿಡಿದು ಹಿಂಬಾಲಿಸುತ್ತಿರುವುದು ಕಂಡುಬಂದಿದೆ. ಆಕೆ ಕ್ರಿಕೆಟಿಗನ ಕಾರಿನ ಗಾಜು ಒಡೆದಿದ್ದಾಳೆ ಎಂದು ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತವೆ ಎಂದು ನ್ಯಾಯಾಲಯಕ್ಕೆ ಸಾಕ್ಷಿ ಸಮೇತ ಸಲ್ಲಿಸಲಾಗಿದೆ.

ಪೊಲೀಸರು ಸಿಐಎಸ್‌ಎಫ್ ಅಧಿಕಾರಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ಸಪ್ನಾ ಗಿಲ್ ಹೇಳುವಂತಹ ಯಾವುದೇ ಘಟನೆ ನಡೆದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಿಐಎಸ್ಎಫ್ ಅಧಿಕಾರಿಯೊಬ್ಬರ ಪ್ರಕಾರ, ಪಬ್ ಪ್ರದೇಶದಲ್ಲಿ ಜಗಳದ ಬಗ್ಗೆ ಅವರಿಗೆ ಎಚ್ಚರಿಕೆ ನೀಡಲಾಯಿತು. ಆಗ ಸ್ಥಳಕ್ಕೆ ಆಗಮಿಸಿದಾಗ ಕಾರಿನ ಗಾಜು ಜಖಂಗೊಂಡಿರುವುದು ಕಂಡುಬಂತು. ವರದಿಯ ಪ್ರಕಾರ, ಎಫ್ಐಆರ್ ದಾಖಲಿಸಲು ಬಯಸಿದ್ದರು ಎಂದು ಹೇಳಿದರು.

ಒಬ್ಬ ಮಹಿಳೆ ಕೈಯಲ್ಲಿ ಬೇಸ್‌ಬಾಲ್ ಬ್ಯಾಟ್ ಹಿಡಿದಿರುವುದನ್ನು ಅಧಿಕಾರಿ ನೋಡಿದ್ದರು. ಪೊಲೀಸರು ಸ್ಥಳಕ್ಕೆ ಬರುತ್ತಿರುವುದನ್ನು ಕಂಡ ಸಪ್ನಾ ಗಿಲ್ ಸ್ನೇಹಿತ ಆಕೆಯಿಂದ ಬ್ಯಾಟ್ ತೆಗೆದುಕೊಂಡು ಪಕ್ಕಕ್ಕೆ ಎಸೆದಿದ್ದಾನೆ. ಸ್ಥಳದಲ್ಲಿದ್ದ ಯಾವುದೇ ಪುರುಷರು ಮಹಿಳೆಯ ಮೇಲೆ ಹಲ್ಲೆ ನಡೆಸಿಲ್ಲ ಎಂದು ಸಿಐಎಸ್ಎಫ್ ಅಧಿಕಾರಿಯ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಸಲ್ಲಿಸಲಾಗಿದೆ.

ಸಪ್ನಾ ಗಿಲ್ ಅವರ ದೂರಿನ ಅನುಗುಣವಾಗಿ ನಡೆಸಿದ ತನಿಖೆಯಲ್ಲಿ ಪೃಥ್ವಿ ಶಾ ಮತ್ತು ಇತರರ ಮೇಲಿನ ಆರೋಪಗಳು ಸುಳ್ಳು ಮತ್ತು ಆಧಾರರಹಿತವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಬ್‌ಅರ್ಬನ್ ಹೋಟೆಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸುವ ವಿವಾದದ ನಂತರ, ಪೃಥ್ವಿ ಶಾ ಅವರ ಮೇಲೆ ನಡೆದ ಆಪಾದಿತ ದಾಳಿಗೆ ಸಂಬಂಧಿಸಿದಂತೆ ಸಪ್ನಾ ಗಿಲ್ ಅವರನ್ನು ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು.

ಜಾಮೀನು ಪಡೆದ ನಂತರ ಸಪ್ನಾ ಗಿಲ್ ಅವರು ಕಿರುಕುಳ ಮತ್ತು ಹಲ್ಲೆ ಆರೋಪದ ಮೇಲೆ ಪೃಥ್ವಿ ಶಾ ಮತ್ತು ಆತನ ಸ್ನೇಹಿತ ಆಶಿಶ್ ಯಾದವ್ ಮತ್ತು ಇತರರ ವಿರುದ್ಧ ದೂರು ದಾಖಲಿಸಲು ವಿಮಾನ ನಿಲ್ದಾಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಪೊಲೀಸರು ಕ್ರಿಕೆಟಿಗ ಪೃಥ್ವಿ ಶಾ ವಿರುದ್ಧ ಪ್ರಕರಣ ದಾಖಲಿಸದ ಹಿನ್ನೆಲೆಯಲ್ಲಿ ಸಪ್ನಾ ಗಿಲ್ ನಂತರ ನ್ಯಾಯಾಲಯದ ಮೊರೆ ಹೋಗಿದ್ದರು.

Story first published: Tuesday, June 27, 2023, 11:24 [IST]
Other articles published on Jun 27, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+