ಟೋಕಿಯೋ ಒಲಿಂಪಿಕ್ಸ್‌ನಲ್ಲಿ ರಸ್ಲರ್ ಪ್ರಿಯಾ ಮಲಿಕ್‌ಗೆ ಚಿನ್ನ?!

ಬುಡಾಪೆಸ್ಟ್: ಹಂಗೆರಿಯ ಬುಡಾಪೆಸ್ಟ್‌ನಲ್ಲಿ ನಡೆದ 2021 ವರ್ಲ್ಡ್ ಕ್ಯಾಡೆಟ್ ರಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಹಿಳಾ ರಸ್ಲರ್ ಪ್ರಿಯಾ ಮಲಿಕ್ (73 ಕೆಜಿ) ದೇಶಕ್ಕೆ ಬಂಗಾರದ ಪದಕ ಗೆದ್ದಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ವೇಟ್ ಲಿಫ್ಟರ್ ಮೀರಾಬಾಯ್ ಚಾನು ಬೆಳ್ಳಿ ಪದಕ ಗೆದ್ದ ಮರುದಿನವೇ ಭಾರತಕ್ಕೆ ಮತ್ತೊಂದು ಸಂತೋಷದ ಸಂಗತಿ ಕೇಳಿ ಬಂದಿದೆ.
ಅನೇಕ ಮಂದಿ ಪ್ರಿಯಾ ಮಲಿಕ್ ಅವರು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬಂಗಾರ ಗೆದ್ದಿದ್ದಾರೆ ಎಂದೇ ಭಾವಿಸಿ ವಾಟ್ಸ್ಯಾಪ್, ಫೇಸ್ಬುಕ್ ಮತ್ತು ಟ್ವಿಟರ್‌ನಲ್ಲಿ ಪೋಸ್ಟ್‌ಗಳನ್ನು ಹಾಕಿದ್ದಾರೆ. ಆದರೆ ಮಲಿಕ್ ಪ್ರಶಸ್ತಿ ಗೆದ್ದಿರುವುದು ಹಂಗೆರಿಯ ಬುಡಾಪೆಸ್ಟ್‌ನಲ್ಲಿ ನಡೆದ ಸ್ಪರ್ಧೆ (2021 ವರ್ಲ್ಡ್ ಕ್ಯಾಡೆಟ್ ರಸ್ಲಿಂಗ್ ಚಾಂಪಿಯನ್‌ಶಿಪ್)ನಲ್ಲಿ.
ಪ್ರಿಯಾ ಮಲಿಕ್‌ಗೆ ಶುಭಾಶಯ ಕೋರಿ ಭಾರತೀಯ ಜನಪ್ರಿಯ ತಾರೆಯರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕಿದ್ದಾರೆ. ಬಾಲಿವುಡ್ ನಟರಾದ ಅಭಿಷೇಕ್ ಬಚ್ಚನ್, ಕರೀನಾ ಕಪೂರ್, ಸನ್ನಿ ಡಿಯೋಲ್ ಮೊದಲಾದವರು ಪ್ರಿಯಾಗೆ ಶುಭಾಶಯ ತಿಳಿಸಿದ್ದಾರೆ.
"ನಾನು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದ್ದೇನೆ ಎಂದೇ ಎಲ್ಲರೂ ನನಗೆ ಅಭಿನಂದಿಸುತ್ತಿರುವುದನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ಗಮನಿಸಿದೆ. ಆದರೆ ಇದನ್ನು ನಾನು ಮುಂದಿನ ಫ್ರಾನ್ಸ್ ಒಲಿಂಪಿಕ್ಸ್ 2024ರಲ್ಲಿ ನನಸಾಗಿಸುತ್ತೇನೆ. ಮುಂದಿನ ಒಲಿಂಪಿಕ್ಸ್‌ಗೆ ಆಯ್ಕೆಯಾಗಲು ನಾನು ಶ್ರಮವಹಿಸಿ ಅಭ್ಯಾಸ ನಡೆಸುತ್ತೇನೆ," ಎಂದು ಮಲಿಕ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications