ಸಚಿನ್ ತೆಂಡೂಲ್ಕರ್ ವಿರುದ್ಧ ರೊಚ್ಚಿಗೆದ್ದ ಜನರು: ಮನೆಯ ಬಳಿ ಭಾರೀ ಪ್ರತಿಭಟನೆ: ಕಾರಣ ಇಲ್ಲಿದೆ!
ಕ್ರಿಕೆಟ್‌ನ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಮನೆಯ ಬಳಿ ಇಂದು ಭಾರೀ ಪ್ರತಿಭಟನೆ ನಡೆಯುತ್ತಿದೆ. ಪಕ್ಷೇತರ ಶಾಸಕ ಬಚ್ಚು ಕಡು ಅವರ ನೇತೃತ್ವದಲ್ಲಿ ನೂರಾರು ಜನರು ಸಚಿನ್ ತೆಂಡೂಲ್ಕರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆಯನ್ನು ನಡೆಸಿದ್ದಾರೆ. ನಂತರ ಬಂದ್ರಾ ಪೊಲೀಸರು ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅಂದಹಾಗೆ ಈ ಪ್ರತಿಭಟನೆಗೆ ಕಾರಣ ಸಚಿನ್ ತೆಂಡೂಲ್ಕರ್ ಅವರು ನೀಡಿರುವ ಒಂದು ಜಾಹೀರಾತು. ಆನ್‌ಲೈನ್ ಗೇಮಿಂಗ್ ಪರವಾಗಿ ಸಚಿನ್ ತೆಂಡೂಲ್ಕರ್ ಜಾಹಿರಾತಿನಲ್ಲಿ ಭಾಗಿಯಾಗಿದ್ದು ಇದನ್ನು ವಿರೋಧಿಸಿ ಈ ಪ್ರತಿಭಟನೆ ನಡೆಸಲಾಗಿದೆ. ಈ ಜಾಹೀರಾತಿನ ವಿಚಾರವಾಗಿ ಸಚಿನ್ ತೆಂಡೂಲ್ಕರ್‌ಗೆ ಮಹಾರಾಷ್ಟ್ರದ ಮಾಜಿ ಸಚಿವರೂ ಆಗಿರುವ ಬಚ್ಚು ಕಡು ಕೋರ್ಟ್ ನೋಟಿಸ್ ನೀಡಿದ ಎರಡು ದಿನಗಳ ಬಳಿಕ ಈ ಪ್ರತಿಭಟನೆ ನಡೆಸಲಾಗಿದೆ.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಮಾತನಾಡಿರುವ ಬಚ್ಚು ಕಡು "ಭಾರತರತ್ನ ಪ್ರಶಸ್ತಿ ಪಡೆದವರು ಅದರ ನೀತಿಸಂಹಿತೆಯನ್ನು ಪಾಲಿಸಲೇಬೇಕು" ಎಂದಿದ್ದಾರೆ. "ನಾವು ಸಚಿನ್ ತೆಂಡೂಲ್ಕರ್ ಅವರಿಗೆ ಆಗಸ್ಟ್ 30ರಂದು ನೋಟಿಸ್ ಕಳುಹಿಸಿದ್ದೇವೆ. 30ನೇ ತಾರಿಕಿನವರೆಗೆ ನಾವು ಅವರಿಗೆ ಸಮಯ ನೀಡಿದ್ದೆವು. ಆದರೆ ಈ ವಿಚಾರವಾಗಿ ಅವರು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈಗ ನಾವು ಲಾಯರ್ ಊಲಕ ನೊಟಿಸ್ ಕಳುಹಿಸಿದ್ದೇವೆ" ಎಂದಿದ್ದಾರೆ.
ಪೇಟಿಎಂ ಫಸ್ಟ್ ಗೇಮ್ ಜಾಹೀರಾತಿನಲ್ಲಿ ಸಚಿನ್ ತೆಂಡೂಲ್ಕರ್ ಕಾಣಿಸಿಕೊಂಡಿದ್ದು ಈ ಜಾಹೀರಾತನ್ನು ಹಿಂಪಡೆಯಬೇಕು ಎಂದು ಮನವಿ ಮಾಡಲಾಗಿತ್ತು. ಆದರೆ ಆ ನೊಟಿಸ್‌ಗೆ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಅವರಿಗೆ ಅನಿವಾರ್ಯವಾಗಿ ಲೀಗಸ್ ನೋಡಿಸ್ ನೀಡಲಾಗಿದೆ ಎಂದು ಬಚ್ಚು ಕಡು ಮಾಹಿತಿ ನೀಡಿದ್ದಾರೆ. ಇನ್ನು ಬಾಲಿವುಡ್ ನಟ ಶಾರೂಖ್ ಖಾನ್ ನಿವಾಸದ ಬಳಿಯೂ ಕಳೆದ ವಾರ ಇದೇ ರೀತಿ ಭಾರೀ ಪ್ರತಿಭಟನೆ ನಡೆದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications