ಇಂಡಿಯನ್ ಒಲಿಂಪಿಕ್ಸ್ ಅಸೊಸಿಯೇಶನ್‌ನ ಅಧ್ಯಕ್ಷೆಯಾಗಿ ಪಿಟಿ ಉಷಾ ಆಯ್ಕೆ

ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ (ಐಒಎ) ಮೊದಲ ಮಹಿಳಾ ಅಧ್ಯಕ್ಷೆಯಾಗಿ ಪಿಟಿ ಉಷಾ ಶನಿವಾರ ಆಯ್ಕೆಯಾಗಿದ್ದಾರೆ. 58 ವರ್ಷ ವಯಸ್ಸಿನ ಪಿಟಿ ಉಷಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಸಾಕಷ್ಟು ಪದಕಗಳನ್ನು ಗೆದ್ದುಕೊಟ್ಟ ಸಾಧನೆ ಮಾಡಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಹಲವು ಚಿನ್ನದ ಪದಕ ಗೆದ್ದುಕೊಂಡಿರುವ ಅವರು 1984 ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ 400 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದರು. ಈಗ ಅವರು ಇಂಡಿಯನ್ ಒಲಿಂಪಿಕ್ಸ್ ಅಸೊಸಿಯೇಶನ್‌ಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂಡಿಯನ್ ಒಲಿಂಪಿಕ್ಸ್ ಅಸೊಸಿಯೇಶನ್‌ನಲ್ಲಿ ಒಳ ರಾಜಕೀಯದಿಂದಾಗಿ ಬಹಳ ಕಾಲದಿಂದ ಚುನಾವಣೆ ನಡೆದಿರಲಿಲ್ಲ. ಈ ವಿಚಾರವ ಆಗಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಎಚ್ಚರಿಕೆಯನ್ನು ಕೂಡ ನೀಡಿತ್ತು. ಈ ತಿಂಗಳಾಂತ್ಯದ ಒಳಗೆ ಚುನಾವಣೆ ನಡೆಸದಿದ್ದರೆ ಐಒಎಯನ್ನು ಅಮಾನತು ಮಾಡುವ ಎಚ್ಚರಿಕೆಯನ್ನು ನೀಡಿತ್ತು. ಇದೀಗ ಪಿಟಿ ಉಷಾ ಐಒಎಗೆ ಅಧ್ಯಕ್ಷರಾಗಿ ನೇಮಕವಾಗುವ ಮೂಲಕ ಈ ಗೊಂದಲಕ್ಕೆ ತೆರೆಬಿದ್ದಿದೆ. 2021ರ ಡಿಸೆಂಬರ್ ತಿಂಗಳಿನಲ್ಲಿ ಈ ಚುನಾವಣೆ ನಡೆಯಬೇಕಾಗಿತ್ತು.
ಉಷಾ 95 ವರ್ಷಗಳ ಇತಿಹಾಸ ಇರುವ ಇಂಡಿಯನ್ ಒಲಿಂಪಿಕ್ಸ್ ಅಸೊಸಿಯೇಶನ್‌ಗೆ ಪಿಟಿ ಉಷಾ ಆಯ್ಕೆಯಾಗುವ ಮೂಲಕ ಹಲವು ವಿಶೇಷಗಳಿಗೂ ಅವರು ಕಾರಣವಾಗಿದ್ದಾರೆ. ಈ ಸ್ಥಾನವನ್ನು ಪಡೆದುಕೊಂಡ ಮೊದಲ ಒಲಿಂಪಿಯನ್ ಮತ್ತು ಅಂತಾರಾಷ್ಟ್ರೀಯ ಪದಕ ಗೆದ್ದ ಮೊದಲಿಗರು ಎನಿಸಿಕೊಂಡಿದ್ದಾರೆ. ಈ ಮೂಲಕ ಪಿಟಿ ಉಷಾ ಅವರ ಸಾಧನೆಗಳ ಕಿರೀಟಕ್ಕೆ ಮತ್ತೊಂದು ಗರಿ ದೊರೆತಿದೆ.
1934ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮಹಾರಾಜ ಯದವೀಂದ್ರ ಸಿಂಗ್ ಬಳಿಕ ಈ ಹುದ್ದೆಯನ್ನೇರಿದ ಮೊದಲ ಅಂತಾರಾಷ್ಟ್ರೀಯ ಕ್ರೀಡಾಪಟು ಎನಿಸಿಕೊಂಡಿದ್ದಾರೆ. ಯದವೇಂದ್ರ ಸಿಂಗ್ 1939ರಿಂದ 1960ರ ವರೆಗೆ ಈ ಹುದ್ದೆಯಲ್ಲಿ ಮುಂದುವರಿದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications