For Quick Alerts
ALLOW NOTIFICATIONS  
For Daily Alerts

ಪಾಕ್ ಶೂಟರ್‌ಗಳಿಗೆ ವೀಸಾ ನೀಡದ ಭಾರತದ ವಿರುದ್ಧ ಒಲಿಂಪಿಕ್ ಸಮಿತಿ ಕಿಡಿ

Pulwama attack olympic committee suspend events from india declaining visa pakistan shooters

ನವದೆಹಲಿ, ಫೆಬ್ರವರಿ 22: ಪುಲ್ವಾಮಾ ಉಗ್ರರ ದಾಳಿ ಖಂಡಿಸಿ ಭಾರತ, ಪಾಕಿಸ್ತಾನದ ಶೂಟಿಂಗ್ ಕ್ರೀಡಾಪಟುಗಳಿಗೆ ವೀಸಾ ಕೊಡದೆ ಇರುವುದು ಭಾರತದ ಕ್ರೀಡೆಗೇ ಮುಳುವಾಗುವ ಸೂಚನೆ ನೀಡಿದೆ.

ನವದೆಹಲಿಯಲ್ಲಿ ನಡೆಯಲಿರುವ ಶೂಟಿಂಗ್ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಿ ಶೂಟರ್‌ಗಳಿಗೆ ವೀಸಾ ನೀಡದೆ ಇರುವುದರಿಂದ ಒಲಿಂಪಿಕ್್ಗೆ ಸಂಬಂಧಿಸಿದಂತೆ ಯಾವುದೇ ಜಾಗತಿಕ ಕ್ರೀಡಾಕೂಟಗಳನ್ನು ನಡೆಸುವ ವಿಚಾರವಾಗಿ ಭಾರತದೊಂದಿಗೆ ಎಲ್ಲ ಮಾತುಕತೆಗಳನ್ನೂ ಸ್ಥಗಿತಗೊಳಿಸಲು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಓಸಿ) ನಿರ್ಧರಿಸಿದೆ.

ಪುಲ್ವಾಮಾ ದಾಳಿಯಿಂದ ಆಘಾತಗೊಂಡಿರುವ ಭಾರತ, ಪಾಕಿಸ್ತಾನದ ಕೈವಾಡವನ್ನು ಖಂಡಿಸಲು ಕ್ರೀಡಾಪಟುಗಳಿಗೆ ವೀಸಾ ನೀಡಿರಲಿಲ್ಲ. ಇದರಿಂದ ಭಾರತದ ಕ್ರೀಡಾ ವಲಯಕ್ಕೇ ಸಂಕಷ್ಟ ತಂದೊಡ್ಡುವ ನಿರ್ಧಾರವನ್ನು ಐಓಸಿ ಪ್ರಕಟಿಸಿದೆ.

ಅಲ್ಲದೆ, ನವದೆಹಲಿಯಲ್ಲಿ ನಡೆಯಬೇಕಿದ್ದ ಪುರುಷರ 25 ಮೀಟರ್ ರಾಪಿಡ್ ಫೈರ್ ಒಲಿಂಪಿಕ್ ಅರ್ಹತಾ ಸುತ್ತಿನ ಸ್ಪರ್ಧೆಯನ್ನು ಸಹ ಐಓಸಿ ರದ್ದುಗೊಳಿಸಿದೆ.

ಸರ್ಕಾರದಿಂದ ಲಿಖಿತ ಭರವಸೆಗಳನ್ನು ಪಡೆದುಕೊಳ್ಳುವವರೆಗೂ ಯಾವುದೇ ಒಲಿಂಪಿಕ್ ಸಂಬಂಧಿತ ಕ್ರೀಡೆಗಳನ್ನು ಭವಿಷ್ಯದಲ್ಲಿ ಆಯೋಜಿಸಲು ಭಾರತಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಹ ಅದು ತಿಳಿಸಿದೆ.

ಭಾರತದಲ್ಲಿ ಉಗ್ರರ ದಾಳಿ ನಡೆದ ಬೆನ್ನಲ್ಲೇ ಪಾಕಿಸ್ತಾನದ ಕ್ರೀಡಾಪಟುಗಳಿಗೆ ವೀಸಾ ನಿರಾಕರಣೆ ಮಾಡಿರುವುದರಿಂದ ಅಲ್ಲಿನ ಇಬ್ಬರು ಶೂಟರ್‌ಗಳು ಅರ್ಹತಾ ಸುತ್ತಿನ ಪಂದ್ಯದಲ್ಲಿ ಪಾಲ್ಗೊಳ್ಳುವುದು ಅನುಮಾನವಾಗಿತ್ತು.

ಈ ವಿವಾದದ ಬಗ್ಗೆ ತಿಳಿದ ಕೂಡಲೇ ಐಓಸಿ, ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಸಂಸ್ಥೆ (ಐಎಸ್‌ಎಸ್‌ಎಫ್) ಮತ್ತು ಭಾರತದ ರಾಷ್ಟ್ರೀಯ ಒಲಿಂಪಿಕ್ ಸಮಿತಿ (ಎನ್‌ಓಸಿ) ಕೊನೆಯ ನಿಮಿಷದವರೆಗೂ ಪ್ರಯತ್ನ ನಡೆಸಿ ಭಾರತೀಯ ಸರ್ಕಾರದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದವು. ಆದರೆ, ಪಾಕಿಸ್ತಾನದ ಕ್ರೀಡಾಪಟುಗಳಿಗೆ ಭಾರತಕ್ಕೆ ಬರಲು ಅವಕಾಶ ನೀಡುವ ವಿಚಾರವಾಗಿ ಪರಿಹಾರ ದೊಕರಲಿಲ್ಲ ಎಂದು ಐಓಸಿ ತನ್ನ ಕಾರ್ಯಕಾರಿ ಮಂಡಳಿ ಸಭೆ ಬಳಿಕ ಹೇಳಿಕೆ ನೀಡಿದೆ.

ಒಲಿಂಪಿಕ್ ನಿಯಮಾವಳಿಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವುದಕ್ಕೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಭಾರತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಇದು ಒಲಿಂಪಿಕ್‌ನ ಮೂಲಭೂತ ತತ್ವಗಳಿಗೆ, ಅದರಲ್ಲಿಯೂ ತಾರತಮ್ಯರಹಿತ ನೀತಿಯ ವಿರುದ್ಧವಿದೆ. ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಎಲ್ಲ ಕ್ರೀಡಾಪಟುಗಳಿಗೂ ಸಮಾನ ಆತಿಥ್ಯ ನೀಡಬೇಕು. ಇದರಲ್ಲಿ ಯಾವುದೇ ತಾರತಮ್ಯ ಮತ್ತು ರಾಜಕೀಯ ಹಸ್ತಕ್ಷೇಪ ಇರಬಾರದು ಎಂದು ಅದು ಹೇಳಿದೆ.

Story first published: Friday, February 22, 2019, 11:20 [IST]
Other articles published on Feb 22, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+