#HappyBirthdayDravid 'ವಾಲ್' ದ್ರಾವಿಡ್ ಗೆ ಟ್ವೀಟ್ ಹಾರೈಕೆ
ಬೆಂಗಳೂರು, ಜ.11: ಭಾರತ ಕ್ರಿಕೆಟ್ ತಂಡದ ಪರ ಆಡಿರುವ ಅತ್ಯಂತ ಶ್ರೇಷ್ಠ ಆಟಗಾರರ ಪೈಕಿ ಒಬ್ಬರಾದ ರಾಹುಲ್ ಶರದ್ ದ್ರಾವಿಡ್ ಅವರಿಗೆ ಇಂದು 42ನೇ ಹುಟ್ಟುಹಬ್ಬದ ಸಂಭ್ರಮ. ಸುಮಾರು 16 ವರ್ಷಗಳ ಕಾಲದ ವೃತ್ತಿ ಬದುಕಿನಲ್ಲಿ ಹಲವು ಏಳು ಬೀಳುಗಳನ್ನು ಕಂಡರೂ ಅಭಿಮಾನಿಗಳ ಪಾಲಿಗೆ ಇಂದಿಗೂ ಎಂದೆಂದಿಗೂ ಅಚ್ಚಳಿಯದೆ ಉಳಿದಿರುವ ಮಹಾನ್ 'ಗೋಡೆ' ಯಾಗಿದ್ದಾರೆ.
ಸುಮಾರು 23,000ಕ್ಕೂ ಅಧಿಕ ರನ್ ಗಳಿಸಿರುವ ರಾಹುಲ್ ದ್ರಾವಿಡ್ ಅವರು ಮೈದಾನದ ಒಳಗೂ ಹೊರಗೂ ಎಲ್ಲರಿಂದಲೂ ಮೆಚ್ಚುಗೆ ಪಡೆದ ವಿಶಿಷ್ಟ ಆಟಗಾರ. 1996 ರ ವಿಶ್ವಕಪ್ ನಂತರ ಏಕದಿನ ಕ್ರಿಕೆಟ್ ತಂಡಕ್ಕೆ ವಿನೋದ್ ಕಾಂಬ್ಳಿ ಬದಲಿಗೆ ಆಯ್ಕೆಯಾದರು. [ದ್ರಾವಿಡ್ ಆಯ್ಕೆ: ವಿಶ್ವಕಪ್ ಗಾಗಿ 15 ಜನರ ಭಾರತ ತಂಡ]
ಅದರೆ, ದ್ರಾವಿಡ್ ಲಕ್ ತಿರುಗಿದ್ದು, ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಗಾಯಾಳು ಸಂಜಯ್ ಮಂಜೇಕ್ರರ್ ಬದಲಿಗೆ ಗಂಗೂಲಿ ಜೊತೆ ಕಣಕ್ಕಿಳಿದು ಸತತ 95 ಹಾಗೂ 84ರನ್ ಗಳಿಸಿದ್ದು ಪ್ರತಿಭೆಗೆ ಹಿಡಿದ ಕನ್ನಡಿ. []
ನಂತರ ದಕ್ಷಿಣ ಆಫ್ರಿಕಾ ಸರಣಿಯಲ್ಲಿ 148ರನ್ ಗಳಿಸಿ ಚೊಚ್ಚಲ ಟೆಸ್ಟ್ ಶತಕ ಗಳಿಸಿ ನಂ.3 ಕ್ರಮಾಂಕದಲ್ಲಿ ನಿರಂತರವಾಗಿ ಟೀಂ ಇಂಡಿಯಾ ಗೆಲುವಿಗಾಗಿ ಶ್ರಮಿಸಿದ ದ್ರಾವಿಡ್ ಕೊಡುಗೆ ಅನನ್ಯ.
2003ರಲ್ಲಿ ನಾಗಪುರ ಮೂಲದ ವಿಜೇತ ಪೆಂಧಾರ್ಕರ್ ಅವರನ್ನು ವರಿಸಿದ ರಾಹುಲ್ ಅವರಿಗೆ ಸಮಿತ್, ಅನ್ವಯ್ ಹೆಸರಿನ ಮಕ್ಕಳಿದ್ದಾರೆ. ಬೆಂಗಳೂರು ನೆಲೆಕಂಡ ಊರಾದರೂ ತಮಿಳುನಾಡು, ಮಧ್ಯಪ್ರದೇಶದ ಲಿಂಕ್ ಕೂಡಾ ಹೊಂದಿದ್ದಾರೆ. ಕ್ರಿಕೆಟ್ ನ ವಿವಿಧ ಮಾದರಿಯ ತಂಡಗಳಿಗೆ ನಾಯಕರಾಗಿ ಕಾಣಿಸಿಕೊಂಡ ದ್ರಾವಿಡ್ ಅವರ ಬದುಕು ಸಾಧನೆ ಕುರಿತಂತೆ ವೆಬ್ ಸೈಟ್ ಕೂಡಾ ಲೋಕಾರ್ಪಣೆಯಾಗಿದೆ. ದ್ರಾವಿಡ್ ಬಗ್ಗೆ ಅಭಿಮಾನಿಗಳು ಏನೆಂದು ಟ್ವೀಟಿಸಿದ್ದಾರೆ ನೋಡಿ...

ದ್ರಾವಿಡ್ ಕೋಚ್ ಆಗಬಾರದೇಕೆ?
ಟೆಸ್ಟ್, ಏಕದಿನ, ಟಿ20, ಐಪಿಎಲ್, ರಣಜಿ ಎಲ್ಲಾ ಮಾದರಿಯಲ್ಲೂ ನಾಯಕರಾಗಿ ಯಶಸ್ವಿಯಾಗಿರುವ ರಾಹುಲ್ ದ್ರಾವಿಡ್ ರನ್ನು ಟೀಂ ಇಂಡಿಯಾದ ಕೋಚ್ ಆಗಿ ಕಾಣಲು ಮಾಜಿ ಕ್ರಿಕೆಟರ್ ಸುನಿಲ್ ಗವಾಸ್ಕರ್ ಸೇರಿದಂತೆ ಹಲವರಿಗೆ ಆಸೆಯಿದೆ. ಅದರೆ, ದ್ರಾವಿಡ್ ಅವರು ಮಾತ್ರ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ದ್ರಾವಿಡ್ ಸಾಧನೆಗಳ ಬಗ್ಗೆ ಟ್ವೀಟ್ಸ್
ದ್ರಾವಿಡ್ ಸಾಧನೆಗಳ ಬಗ್ಗೆ ಅಭಿಮಾನಿಗಳಿಂದ ಸತತವಾಗಿ ಟ್ವೀಟ್ಸ್
ದ್ರಾವಿಡ್ ಗೆ ಹುಟ್ಟುಹಬ್ಬದ ಶುಭ ಹಾರೈಕೆಗಳು
ರಾಹುಲ್ ದ್ರಾವಿಡ್ ಗೆ ಹುಟ್ಟುಹಬ್ಬದ ಶುಭ ಹಾರೈಕೆಗಳು
ದ್ರಾವಿಡ್ ಬಗ್ಗೆ ಮ್ಯಾಥ್ಯೂ ಹೇಡನ್ ಹೇಳಿದ್ದು ಹೀಗೆ
ದ್ರಾವಿಡ್ ಬಗ್ಗೆ ಮ್ಯಾಥ್ಯೂ ಹೇಡನ್ ಹೇಳಿದ್ದು ಹೀಗೆ
ದ್ರಾವಿಡ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗುತ್ತಿರುವ ಬಗ್ಗೆ
ದ್ರಾವಿಡ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗುತ್ತಿರುವ ಬಗ್ಗೆ ಮಾಹಿತಿ
ಟೆಸ್ಟ್ ಕ್ರಿಕೆಟ್ ನಲ್ಲಿ ಹೆಚ್ಚು ಪ್ರಶಸ್ತಿಗಳಿಸಿದ ದ್ರಾವಿಡ್
ವಿದೇಶದಲ್ಲಿ ಹೆಚ್ಚು ಮ್ಯಾನ್ ಆಫ್ ದಿ ಮ್ಯಾಚ್ ಗಳಿಸಿದ್ದ ರಾಹುಲ್ ದ್ರಾವಿಡ್
ರಾಹುಲ್ ಬಗ್ಗೆ ನವಜ್ಯೊತ್ ಸಿದ್ದು ಹೇಳಿದ್ದು
ರಾಹುಲ್ ಬಗ್ಗೆ ನವಜ್ಯೊತ್ ಸಿದ್ದು ಹೇಳಿದ್ದು ಇಲ್ಲಿ ಉಲ್ಲೇಖಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications