Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದ್ರಾವಿಡ್ ಆಯ್ಕೆ: ವಿಶ್ವಕಪ್ ಗಾಗಿ 15 ಜನರ ಭಾರತ ತಂಡ

ಬೆಂಗಳೂರು, ಜ.6: ಐಸಿಸಿ ವಿಶ್ವಕಪ್ 2015ರಲ್ಲಿ ಆಡುವ 15 ಜನ ಹೆಸರನ್ನು ಬಿಸಿಸಿಐ ಆಯ್ಕೆ ಸಮಿತಿ ಮಂಗಳವಾರ ಪ್ರಕಟಿಸಲಿದೆ. ಇದಕ್ಕೂ ಮುನ್ನ 30 ಜನ ಸಂಭಾವ್ಯ ಆಟಗಾರರಲ್ಲಿ ಅಂತಿಮ 15 ಆಟಗಾರರನ್ನು ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಆಯ್ಕೆ ಮಾಡಿದೆ.

ಜನವರಿ 6 ರಂದು ಮಧ್ಯಾಹ್ನದ ವೇಳೆಗೆ ಸಂದೀಪ್ ಪಾಟೀಲ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ವಿಶ್ವಕಪ್ ಗೆಲ್ಲಿಸಿಕೊಡಬಲ್ಲ 15 ಜನ ಕ್ರಿಕೆಟರ್ ಗಳನ್ನು ಹೆಸರಿಸಲಿದ್ದಾರೆ. ಇದಕ್ಕೂ ಮುನ್ನ ದ್ರಾವಿಡ್ ಅವರು ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡುತ್ತಾ ತಮ್ಮ ಆಯ್ಕೆಯನ್ನು ಪ್ರಕಟಿಸಿದ್ದಾರೆ. [ವಿಶ್ವಕಪ್ ಗೆ 15 ಆಟಗಾರರ ಭಾರತ ತಂಡ - ನಮ್ಮ ಆಯ್ಕೆ]

India's World Cup squad: Here is Rahul Dravid's 15

ಹಾಲಿ ವಿಶ್ವ ಕಪ್ ವಿಜೇತ ತಂಡವಾದ ಟೀಂ ಇಂಡಿಯಾ ತನ್ನ ವಿಶ್ವಕಪ್ 2015 ಟೂರ್ನಿಯನ್ನು ಸಾಂಪ್ರದಾಯಿಕ ಎದುರಾಳಿಗಳಾದ ಪಾಕಿಸ್ತಾನ ವಿರುದ್ಧ ಅಡಿಲೇಡ್ ನಲ್ಲಿ ಫೆ.15ರಂದು ಎದುರಿಸಲಿದೆ. [15 ಸದಸ್ಯರ ತಂಡ ಪ್ರಕಟ, ಸ್ಟುವರ್ಟ್ ಬಿನ್ನಿಗೆ ಸ್ಥಾನ ]

ಫೆ.14ರಿಂದ ಮಾರ್ಚ್ 29ರ ತನಕ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ. [30 ಮಂದಿ ಟೀಂ ಇಂಡಿಯಾ ಪ್ರಕಟ]

ರಾಹುಲ್ ದ್ರಾವಿಡ್ ಆಯ್ಕೆ ಮಾಡಿರುವ ತಂಡ ಇಂತಿದೆ:

ಆರಂಭಿಕ ಆಟಗಾರರು
1. ಅಜಿಂಕ್ಯ ರಹಾನೆ
2. ಶಿಖರ್ ಧವನ್

ಮಧ್ಯಮ ಕ್ರಮಾಂಕ
3. ವಿರಾಟ್ ಕೊಹ್ಲಿ
4. ಸುರೇಶ್ ರೈನಾ
5. ರೋಹಿತ್ ಶರ್ಮ
6. ಎಂಎಸ್ ಧೋನಿ(ವಿಕೆಟ್ ಕೀಪರ್)
7. ಅಂಬಟಿ ರಾಯುಡು (ವಿಕೆಟ್ ಕೀಪರ್)

ಸ್ಪಿನ್ನರ್
8. ರವೀಂದ್ರ ಜಡೇಜ
9. ಆರ್ ಅಶ್ವಿನ್
10. ಅಕ್ಷರ್ ಪಟೇಲ್

ಆಲ್ ರೌಂಡರ್
11. ಸ್ಟುವರ್ಟ್ ಬಿನ್ನಿ

ವೇಗಿಗಳು
12. ಭುವನೇಶ್ವರ್ ಕುಮಾರ್
13. ಮಹಮ್ಮದ್ ಶಮಿ
14. ಉಮೇಶ್ ಯಾದವ್
15. ಇಶಾಂತ್ ಶರ್ಮ

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+