ಸುದೀಪ್ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ಕಳುಹಿಸಿಕೊಟ್ಟು ಸರ್‌ಪ್ರೈಸ್ ನೀಡಿದ ರಾಜಸ್ಥಾನ್ ರಾಯಲ್ಸ್

ಸೆಪ್ಟೆಂಬರ್ 2, ಕನ್ನಡ ಚಲನಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಅವರ ಹುಟ್ಟು ಹಬ್ಬ. ಸುದೀಪ್ ಅವರ ಹುಟ್ಟುಹಬ್ಬದ ದಿನವನ್ನು ಅವರ ಅಭಿಮಾನಿಗಳು ಹಬ್ಬದ ರೀತಿ ಆಚರಣೆಯನ್ನು ಮಾಡುತ್ತಾರೆ. ತಮ್ಮ ಉತ್ತಮ ಅಭಿನಯ ಮತ್ತು ಒಳ್ಳೆಯ ಗುಣಗಳಿಂದ ಕರ್ನಾಟಕದಲ್ಲಿ ಅಪಾರವಾದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಕಿಚ್ಚ ಸುದೀಪ್ ಕನ್ನಡ ಹೊರತುಪಡಿಸಿ ಬೇರೆ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿ ದೊಡ್ಡ ಮಟ್ಟದಲ್ಲಿಯೇ ಗುರುತಿಸಿಕೊಂಡಿದ್ದಾರೆ.

ಹೀಗೆ ದೇಶದ ಹಲವಾರು ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿ ಖ್ಯಾತಿಯನ್ನು ಪಡೆದಿರುವ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಇತರೆ ಚಲನಚಿತ್ರರಂಗದ ಕಲಾವಿದರು ಹುಟ್ಟುಹಬ್ಬದ ಶುಭಾಶಯವನ್ನು ಕೋರುವುದು ಸಾಮಾನ್ಯದ ವಿಷಯ. ಆದರೆ ಈ ಬಾರಿ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್‌ನ ಫ್ರಾಂಚೈಸಿಗಳಲ್ಲಿ ಒಂದಾದ ರಾಜಸ್ಥಾನ್ ರಾಯಲ್ಸ್ ತಂಡ ವಿಶೇಷವಾಗಿ ಉಡುಗೊರೆಯನ್ನು ಕಳುಹಿಸಿಕೊಡುವುದರ ಮೂಲಕ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿ ಕಿಚ್ಚ ಸುದೀಪ್ ಅವರಿಗೆ ಸರ್ಪ್ರೈಸ್ ನೀಡಿದೆ.

ಹೌದು, ತಮ್ಮ ಮುಂದಿನ ಸಿನಿಮಾ ವಿಕ್ರಾಂತ್ ರೋಣದ ಚಿತ್ರೀಕರಣದಲ್ಲಿ ನಿರತರಾಗಿದ್ದ ಕಿಚ್ಚ ಸುದೀಪ್ ಅವರಿಗೆ ರಾಜಸ್ಥಾನ್ ರಾಯಲ್ಸ್ ತಂಡದ ಜೆರ್ಸಿಯನ್ನು ಪಾರ್ಸೆಲ್ ಕಳುಹಿಸಿಕೊಡುವುದರ ಮೂಲಕ ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ರಾಜಸ್ತಾನ್ ರಾಯಲ್ಸ್ ಸರ್ಪ್ರೈಸ್ ಉಡುಗೊರೆಯನ್ನು ನೀಡಿದೆ. ಕಿಚ್ಚ ಸುದೀಪ್ ಅವರಿಗೆ ನೀಡಲಾಗಿರುವ ರಾಜಸ್ತಾನ್ ರಾಯಲ್ಸ್ ಜೆರ್ಸಿ ಹಿಂಭಾಗದಲ್ಲಿ ನಂಬರ್ 7 ಎಂದು ಬರೆಯಲಾಗಿದ್ದು ಆ ಅಂಕಿಯ ಕೆಳಗೆ ಕಿಚ್ಚ ಎಂದು ಕೂಡ ಬರೆಯಲಾಗಿದೆ.

ರಾಜಸ್ಥಾನ್ ರಾಯಲ್ಸ್ ಕಳುಹಿಸಿದ ಉಡುಗೊರೆ ನೋಡಿ ಸಂತಸ ವ್ಯಕ್ತಪಡಿಸಿದ ಕಿಚ್ಚ

ರಾಜಸ್ಥಾನ್ ರಾಯಲ್ಸ್ ಕಳುಹಿಸಿದ ಉಡುಗೊರೆ ನೋಡಿ ಸಂತಸ ವ್ಯಕ್ತಪಡಿಸಿದ ಕಿಚ್ಚ

ವಿಕ್ರಾಂತ್ ರೋಣ ಚಿತ್ರೀಕರಣದಲ್ಲಿ ನಿರತರಾಗಿದ್ದ ಕಿಚ್ಚ ಸುದೀಪ್ ಅವರಿಗೆ ರಾಜಸ್ಥಾನ್ ರಾಯಲ್ಸ್ ತಂಡ ಸರ್ ಪ್ರೈಸ್ ಆಗಿ ಕಳುಹಿಸಿದ ಹುಟ್ಟು ಹಬ್ಬದ ಉಡುಗೊರೆಯನ್ನು ನೋಡಿದ ನಟ ಕಿಚ್ಚ ಸುದೀಪ್ ತುಂಬಾ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡ ಕಳುಹಿಸಿದ ಪಾರ್ಸೆಲ್‌ನ್ನು ಸ್ವತಃ ಕಿಚ್ಚ ಸುದೀಪ್ ಅವರೇ ತೆರೆದು ಒಳಗಿರುವ ಜರ್ಸಿಯನ್ನು ಕಂಡು ಆಶ್ಚರ್ಯಕ್ಕೊಳಗಾಗಿ ಚಿತ್ರೀಕರಣದಲ್ಲಿ ಜತೆಗಿದ್ದ ಕಲಾವಿದರಿಗೆ ರಾಜಸ್ಥಾನ್ ರಾಯಲ್ಸ್ ತಂಡ ನನ್ನ ಹುಟ್ಟುಹಬ್ಬಕ್ಕೆ ಯಾವ ಉಡುಗೊರೆ ಕಳುಹಿಸಿದ್ದಾರೆ ನೋಡಿ ಎಂದು ತೋರಿಸುತ್ತಾ ತಮ್ಮ ಸಂತೋಷವನ್ನು ಹೊರಹಾಕಿದರು. ಅದರಲ್ಲಿಯೂ ಜೆರ್ಸಿ ಹಿಂಭಾಗದಲ್ಲಿ ತಮ್ಮ ಹೆಸರನ್ನು ಬರೆದಿರುವುದನ್ನು ಕಂಡು ಕಿಚ್ಚ ಸುದೀಪ್ ಮತ್ತಷ್ಟು ಸಂತಸವನ್ನು ವ್ಯಕ್ತಪಡಿಸಿದರು.

ಸುದೀಪ್ ಸಂತಸದ ವಿಡಿಯೋವನ್ನು ಹಂಚಿಕೊಂಡ ರಾಜಸ್ಥಾನ್ ರಾಯಲ್ಸ್

ಸುದೀಪ್ ಸಂತಸದ ವಿಡಿಯೋವನ್ನು ಹಂಚಿಕೊಂಡ ರಾಜಸ್ಥಾನ್ ರಾಯಲ್ಸ್

ಹೀಗೆ ರಾಜಸ್ಥಾನ್ ರಾಯಲ್ಸ್ ತನ್ನ ಹುಟ್ಟುಹಬ್ಬಕ್ಕೆ ಕಳುಹಿಸಿಕೊಟ್ಟ ವಿಶೇಷ ಉಡುಗೊರೆಯನ್ನು ಸ್ವತಃ ಕಿಚ್ಚ ಸುದೀಪ್ ಅವರೇ ತೆರೆದು ಸಂತಸಪಟ್ಟ ವಿಡಿಯೋವನ್ನು ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದೆ. 'ವಿಶೇಷವಾದ ಮೈಲಿಗಲ್ಲನ್ನು ಆಚರಿಸಲು ವಿಶೇಷವಾದ ಉಡುಗೊರೆ, ಕಿಚ್ಚ ಸುದೀಪ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು, ಈ ಕೆಲಸಕ್ಕೆ ಸಹಾಯ ಮಾಡಿದ ಕರಿಯಪ್ಪ ಅವರಿಗೆ ಕೃತಜ್ಞತೆಗಳು' ಎಂದು ಬರೆದುಕೊಳ್ಳುವುದರ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ ನಟ ಕಿಚ್ಚ ಸುದೀಪ್ ಅವರ ವಿಡಿಯೋವನ್ನು ಹಂಚಿಕೊಂಡು ಹುಟ್ಟುಹಬ್ಬದ ಶುಭಾಶಯವನ್ನು ವಿಶೇಷವಾಗಿ ಕೋರಿದೆ.

ಈ ಹಿಂದೆ ಮಲಯಾಳಂ ಕಲಾವಿದರಿಗೆ ಜೆರ್ಸಿ ಹಂಚಿದ್ದ ರಾಜಸ್ಥಾನ್ ರಾಯಲ್ಸ್

ಈ ಹಿಂದೆ ಮಲಯಾಳಂ ಕಲಾವಿದರಿಗೆ ಜೆರ್ಸಿ ಹಂಚಿದ್ದ ರಾಜಸ್ಥಾನ್ ರಾಯಲ್ಸ್

ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ವಿಶೇಷವಾಗಿ ರಾಜಸ್ಥಾನ್ ರಾಯಲ್ಸ್ ತಂಡದ ಜೆರ್ಸಿಯನ್ನು ಉಡುಗೊರೆಯಾಗಿ ನೀಡುವುದರ ಮೂಲಕ ಸರ್ಪ್ರೈಸ್ ನೀಡಿದೆ. ಇದಕ್ಕೂ ಮುನ್ನ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭದ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ತನ್ನ ರಾಜ್ಯದ ವಿವಿಧ ಕಲಾವಿದರಿಗೆ ರಾಜಸ್ತಾನ್ ರಾಯಲ್ಸ್ ತಂಡದ ವಿಶೇಷ ಜೆರ್ಸಿಗಳನ್ನು ಕಳುಹಿಸಿಕೊಟ್ಟಿದ್ದರು. ಹೀಗೆ ಸಂಜು ಸ್ಯಾಮ್ಸನ್ ಕಳುಹಿಸಿಕೊಟ್ಟ ರಾಜಸ್ಥಾನ್ ರಾಯಲ್ಸ್ ತಂಡದ ವಿಶೇಷ ಜೆರ್ಸಿಗಳನ್ನು ನೋಡಿ ಮಲಯಾಳಂ ಕಲಾವಿದರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಸಂಭ್ರಮಪಟ್ಟು ರಾಜಸ್ತಾನ್ ರಾಯಲ್ಸ್ ತಂಡಕ್ಕೆ ಶುಭವನ್ನು ಕೋರಿದ್ದರು.

For Quick Alerts
ALLOW NOTIFICATIONS
For Daily Alerts
Story first published: Thursday, September 2, 2021, 11:51 [IST]
Other articles published on Sep 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X