ಗಾಯದಿಂದ ಚೇತರಿಸಿ ಅಂತಾರಾಷ್ಟ್ರೀಯ ಮೊದಲ ಚಿನ್ನ ಗೆದ್ದ ಮೀರಾ ಬಾಯಿ!

ನವದೆಹಲಿ, ಫೆಬ್ರವರಿ 7: ವಿಶ್ವ ಚಾಂಪಿಯನ್ ಭಾರತದ ವೇಟ್ ಲಿಫ್ಟರ್ ಮೀರಾ ಬಾಯಿ ಚಾನು ಅವರು ಗುರುವಾರ (ಫೆಬ್ರವರಿ 7) ಥೈಲ್ಯಾಂಡ್‌ನಲ್ಲಿ ನಡೆದ ಎಲೆಕ್ಟ್ರಿಸಿಟಿ ಜನರೇಟಿಂಗ್ ಅಥಾರಿಟಿ ಆಫ್ ಥೈಲ್ಯಾಂಡ್ (ಇಜಿಎಟಿ) ಕಪ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಬಂಗಾರ ಗೆದ್ದಿದ್ದಾರೆ.
ಮಹಿಳಾ 48 ಕೆಜಿ ವಿಭಾಗದಲ್ಲಿ ಪಾಲ್ಗೊಂಡಿದ್ದ ಮೀರಾ ಒಟ್ಟು 192 ಕೆಜಿ ಭಾರತ ಎತ್ತಿ ಬಂಗಾರವನ್ನು ಕೊರಳಿಗೇರಿಸಿಕೊಂಡಿದ್ದಾರೆ. 2020ರ ಟೋಕಿಯೋ ಒಲಿಂಪಿಕ್‌ಗೆ ಅರ್ಹತಾ ಸ್ಪರ್ಧೆಯೂ ಆಗಿದ್ದ ಈ ಟೂರ್ನಿಯಲ್ಲಿ ಮೀರಾ ಬೆಳ್ಳಿ ಗೆಲ್ಲಬಲ್ಲ (192 ಕೆಜಿ) ಸಾಧನೆಯನ್ನು ತೋರಿದ್ದಾರೆ. ಗಾಯದ ಸಮಸ್ಯೆಗೀಡಾಗಿದ್ದ ಚಾನು ಈ ವರ್ಷ ಚೇತರಿಸಿಕೊಂಡ ಬಳಿಕ ಜಯಿಸಿದ ಮೊದಲ ಅಂತಾರಾಷ್ಟ್ರೀಯ ಚಿನ್ನವಿದು.
24ರ ಹರೆಯದ ಮಣಿಪುರ ಕ್ರೀಡಾಪಟು ಚಾನು, ಸ್ನ್ಯಾಚ್ ವಿಭಾಗದಲ್ಲಿ 82 ಕೆಜಿ, ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 110 ಸಾಧನೆಯೊಂದಿಗೆ ಬಂಗಾರ ಜಯಿಸಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೀರಾ ದೇಶಕ್ಕೆ ಬಂಗಾರ ಗೆದ್ದಿದ್ದರು (ಚಾನು ಅವರ ಲಿಫ್ಟಿಂಗ್ ವಿಡಿಯೋ ಮೇಲಿದೆ).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications