ರಿಯೋ ಡಿ ಜನೈರೊ, ಆಗಸ್ಟ್ 11: ಭಾರತದ ಭರವಸೆಯ ಕ್ರೀಡಾಪಟುಗಳು ಪ್ರಸಕ್ತ ಒಲಿಂಪಿಕ್ಸ್ನಲ್ಲಿ ನೀರಸ ಪ್ರದರ್ಶನ ನೀಡುವ ಮೂಲಕ ಕೋಟ್ಯಂತರ ಅಭಿಮಾನಿಗಳಿಗೆ ನಿರಾಸೆ ಉಂಟುಮಾಡಿದ್ದಾರೆ. 10 ದಿನಗಳ ಸಹಿ ಕಹಿಗಳ ನಂತರ ಇಂದು ಅ.11 ರಂದು ಬ್ಯಾಡ್ಮಿಟನ್ ಸೇರಿದಂತೆ ಇತರೆ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.
ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ
ಒಲಿಂಪಿಕ್ಸ್ ಇತಿಹಾಸದಲ್ಲಿ ಅತ್ಯಧಿಕವೆನಿಸಿದ 7 ಭಾರತೀಯ ಶಟ್ಲರ್ಗಳು ಈ ಬಾರಿ ಸ್ಪರ್ಧೆಯಲ್ಲಿರುವುದು ವಿಶೇಷ. ಶಟ್ಲರ್ ಸೈನಾ ನೆಹ್ವಾಲ್ ಲಂಡನ್ನಲ್ಲಿ ಕಂಚು ಗೆಲ್ಲುವ ಮೂಲಕ ಸಮಾಧಾನ ಕಂಡಿದ್ದರು. ಆದರೆ, ಈ ಬಾರಿ ಚಿನ್ನ ಪದಕವನ್ನು ಜಯಿಸುವ ವಿಶ್ವಾಸದಲ್ಲಿದ್ದಾರೆ.
ಮಹಿಳಾ ಡಬಲ್ಸ್ನಲ್ಲಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಮೊದಲ ಪಂದ್ಯದಲ್ಲೇ ಅಗ್ರ ಶ್ರೇಯಾಂಕಿತ ಜಪಾನ್ ಜೋಡಿಯನ್ನು ಎದುರಿಸಲಿದ್ದಾರೆ.
ಪುರುಷರ ಡಬಲ್ಸ್ನಲ್ಲಿ ಮನು ಅತ್ರಿ ಹಾಗೂ ಸಮಿತ್ ರೆಡ್ಡಿ ಜೋಡಿಯೂ ಗುರುವಾರ(ಆ.11) ಕಣಕ್ಕಿಳಿಯಲಿದೆ. ಪುರುಷರ ಸಿಂಗಲ್ಸ್ನಲ್ಲಿ 9ನೇ ಶ್ರೇಯಾಂಕ ಕೆ. ಶ್ರೀಕಾಂತ್ ಮೊದಲ ಪಂದ್ಯದಲ್ಲಿ ಮೆಕ್ಸಿಕೋದ ಲಿನೊ ಮುನೋಝ್ ರನ್ನು ಎದುರಿಸಲಿದ್ದಾರೆ.
ಆ.11 ಗುರುವಾರ ಭಾರತ ಆಡಲಿರುವ ಕ್ರೀಡೆಗಳು:
* ಗಾಲ್ಫ್: ಪುರುಷರ ವಿಭಾಗ 1ನೇ ಸುತ್ತು: ಎಸ್ ಎಸ್ ಪಿ ಚೌರಸ್ಯ-(ಸಂಜೆ 4ಕ್ಕೆ).
* ಮಹಿಳಾ ಬ್ಯಾಡ್ಮಿಂಟನ್ ಡಬಲ್ಸ್ ವಿಭಾಗ: ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ(ಭಾರತ) V/S ಜಪಾನ್ -(ಸಂಜೆ 4.30PM).
* ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ ವಿಭಾಗ ಗ್ರೂಪ್ ಡಿ: ಮನು ಅತ್ರಿ ಹಾಗೂ ಸಮಿತ್ ರೆಡ್ಡಿ ಜೋಡಿ (5.30PM)
* ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ಗ್ರೂಪ್ ಜಿ:ಪಿ.ವಿ ಸಿಂಧು V/S ಲಾರಾ ಸರೋಸಿ (7.50PM).
* ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ಗ್ರೂಪ್ ಜಿ: ಸೈನಾ ನೆಹ್ವಾಲ್(ಭಾರತ) V/S ಲೋಹಾಯ್ನನಿ ವಿಸೆಂಟ್(ಬ್ರೆಜಿಲ್) (7.50PM).
* ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ಗ್ರೂಪ್ ಹೆಚ್: ಕೆ. ಶ್ರೀಕಾಂತ್(ಭಾರತ) V/S ಲಿನೊ ಮುನೋಝ್(ಮೆಕ್ಸಿಕೋ), (ಆ.12, 5.35AM)
* ಆರ್ಚರಿ ಮಹಿಳಾ ಸಿಂಗಲ್ಸ್ ಕ್ವಾಟರ್ ಫೈನಲ್: ದೀಪಿಕಾ ಕುಮಾರಿ V/S ಯಾ -ಟಿಂಗ್ ಟಾನ್ ಚೈನೀಸ್ ತೈಪೆ (5.30PM).
* ಆರ್ಚರಿ ಮಹಿಳಾ ಸಿಂಗಲ್ಸ್ ಕ್ವಾಟರ್ ಫೈನಲ್: ಬೊಂಬಾಲ್ಯ ದೇವಿ V/S ಅಲೆಜಾಂದ್ರ ವಾಲೆನ್ಸಿಯಾ(ಮೆಕ್ಸಿಕೋ) (6.06PM).
* ಪುರುಷರ ಹಾಕಿ: ಭಾರತ V/S ನೆದರ್ ಲ್ಯಾಂಡ್ ( 7.30PM)
* ಮಹಿಳಾ ಹಾಕಿ: ಭಾರತ V/S ಯುಎಸ್ಎ (ಆ.12, 4AM).
* ಪುರುಷರ ಬಾಕ್ಸಿಂಗ್ 56ಕೆ.ಜಿ ವಿಭಾಗ: ಶಿವ ಥಾಪ V/S ರೋಬೇಯಿಸಿ ರಮಿರೇಜ್ (8PM).
* Artistic ಜಿಮ್ನಾಸ್ಟಿಕ್ಸ್: ಮಹಿಳೆಯರ ವೈಯಕ್ತಿಕ ಆಲ್ ರೌಂಡ್ ಫೈನಲ್ (12:30 AM IST Aug 12)
(ಒನ್ಇಂಡಿಯಾ ಸುದ್ದಿ)