ರಿಯೋ ಒಲಿಂಪಿಕ್ಸ್ 2016 : ಪತ್ರಕರ್ತರಿದ್ದ ಬಸ್ಸಿನ ಮೇಲೆ ದಾಳಿ
ರಿಯೋ ಡಿ ಜನೈರೋ, ಆಗಸ್ಟ್ 10 : ರಿಯೋ ಒಲಿಂಪಿಕ್ಸ್ 2016ರ ವರದಿಗೆ ತೆರಳಿದ್ದ ಪತ್ರಕರ್ತರಿದ್ದ ಬಸ್ಸಿನ ಮೇಲೆ ದಾಳಿ ನಡೆಸಿದೆ. ರಿಯೋ ನಗರದ ಬಳಿಯ ಹೆದ್ದಾರಿಯಲ್ಲಿ ಬಸ್ಸಿನ ಮೇಲೆ ದಾಳಿ ನಡೆಸಲಾಗಿದೆ.
ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ
ಬಸ್ಸಿನ ಕಿಟಕಿಗಳ ಗಾಜುಗಳು ಜಖಂಗೊಂಡಿದ್ದು, ಇದರಿಂದಾಗಿ ಇಬ್ಬರು ಪತ್ರಕರ್ತರು ಗಾಯಗೊಂಡಿದ್ದಾರೆ. ಬಸ್ಸಿನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆಯೇ? ಅಥವ ಕಲ್ಲು ತೂರಲಾಗಿದೆಯೇ? ಎಂದು ಪರಿಶೀಲನೆ ನಡೆಸಲಾಗುತ್ತಿದೆ.[ಹಾಕಿ: ಅರ್ಜೆಂಟೀನಾ ವಿರುದ್ಧ ಭಾರತಕ್ಕೆ ಜಯ]

ಪತ್ರಕರ್ತರಿದ್ದ ಬಸ್ ಬಾಸ್ಕೆಟ್‌ಬಾಲ್ ಕ್ರೀಡಾಂಗಣದಿಂದ ಒಲಿಂಪಿಕ್ ಪಾರ್ಕ್‌ಗೆ ತೆರಳುವ ವೇಳೆ ಈ ದಾಳಿ ನಡೆಸಿದೆ. ಬಸ್ಸಿನ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.[ರಗ್ಬಿ ಆಟಗಾರ್ತಿಯರ ಮದ್ವೆಗೆ ಸಿಹಿ ಚುಂಬನದ ಮುದ್ರೆ!]
ಗುಂಡಿನ ದಾಳಿಯಿಂದಾಗಿ ಬಸ್ಸಿನ ಗಾಜುಗಳು ಒಡೆದಿದ್ದು, ಅವುಗಳು ಹೊಕ್ಕಿ ಇಬ್ಬರು ಪತ್ರಕರ್ತರು ಗಾಯಗೊಂಡಿದ್ದಾರೆ. ಇದು ಉಗ್ರರ ದಾಳಿಯೇ? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.[ರಿಯೋ 2016: ಮೊದಲ ದಿನವೇ ವಿಶ್ವ ದಾಖಲೆ ಬರೆದ ವೀರ!]
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications