For Quick Alerts
ALLOW NOTIFICATIONS  
For Daily Alerts

ವಿಶ್ವದಾಖಲೆ: ಶ್ರೀಲಂಕಾದ ಕಿವಿ ಹಿಂಡಿದ ಕಿವೀಸ್ ಜುಗಲ್ ಬಂದಿ

ಬೆಂಗಳೂರು, ಜ. 23: ಏಕದಿನ ಕ್ರಿಕೆಟ್ ನಲ್ಲಿ ಮತ್ತೊಂದು ವಿಶ್ವದಾಖಲೆ ನಿರ್ಮಾಣವಾಗಿದೆ. ಇತ್ತ ದಕ್ಷಿಣ ಆಫ್ರಿಕಾದ ಎಬಿ ಡೆವಿಲಿಯರ್ಸ್ ಅತಿ ಕಡಿಮೆ ಎಸೆತದಲ್ಲಿ ಶತಕ ದಾಖಲು ಮಾಡಿದ್ದರೆ ಅತ್ತ ನ್ಯೂಜಿಲೆಂಡ್ ನ ಆಟಗಾರರಿಬ್ಬರು ಶ್ರೀಲಂಕಾ ವಿರುದ್ಧ 6 ವಿಕೆಟ್ ಗೆ ಮುರಿಯದ 267 ರನ್ ಜೊತೆಯಾಟ ನೀಡಿ ದಾಖಲೆ ಬರೆದಿದ್ದಾರೆ.

ನ್ಯೂಜಿಲೆಂಡ್ ಮಧ್ಯಮ ಕ್ರಮಾಂಕದ ಲುಕ್ ರೊಂಖಿ(170*)ಮತ್ತು ಗ್ರಾಂಟ್ ಇಲಿಯಟ್(104*) ಆಟ 93 ರನ್ ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡವನ್ನು 360 ರನ್ ವರೆಗೆ ಕೊಂಡೊಯ್ಯಿತು. ಬೃಹತ್ ಮೊತ್ತ ದಾಖಲಿಸಿದ ನ್ಯೂಜಿಲೆಂಡ್ ಶ್ರೀಲಂಕಾ ವಿರುದ್ಧ ತವರಿನಲ್ಲಿ 108 ರನ್ ಗಳ ಅರ್ಹ ಜಯ ಪಡೆಯಿತು.[ಶತಕ ದಾಖಲಿಸಲು ಡೆವಿಲಿಯರ್ಸ್ ಗೆ 31 ಬಾಲ್ ಸಾಕು!]

cricket

ಸ್ಫೋಟಿಟಸದ ಕೀವಿಸ್ ಆಟಗಾರರು
ರೊಂಖಿ ಮತ್ತು ಇಲಿಯಟ್ ಜೋಡಿ 30 ಓವರ್ ಗಳಲ್ಲಿ 267 ರನ್ ದಾಖಲು ಮಾಡಿತು. ಜುಗಲ್ ಬಂದಿನ್ನು ಮುರಿಯಲು ಶ್ರೀಲಂಕಾದ ಬೌಲರ್ ಗಳಿಗೆ ಸಾಧ್ಯವಾಗಲಿಲ್ಲ. ಏಷ್ಯಾ ಇಲೆವನ್ ಪರ ಆಡಿದ್ದ ಜಯವರ್ಧನೆ ಮತ್ತು ಎಂಎಸ್ ಧೋನಿ ನಡುವಿನ 218 ರನ್ ಗಳ ಜೊತೆಯಾಟ ಹಿಂದಿನ ದಾಖಲೆಯಾಗಿತ್ತು. ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 6 ನೇ ವಿಕೆಟ್ ಜತೆಯಾಟ ಜಿಂಬಾಬ್ವೆಯ ಟೈಬು ಮತ್ತು ಮಸ್ಟಿಕೇನೈರಿ(188) ಹೆಸರಲ್ಲಿತ್ತು.[ಎಬಿಡಿ ಏಕದಿನ ಕ್ರಿಕೆಟ್ ದಾಖಲೆ, ಟ್ವೀಟ್ ಸೆಲ್ಯೂಟ್]

ಶ್ರೀಲಂಕಾ ಪರ ಹೋರಾಟ ನಡೆಸಿದ ತಿಲಕರತ್ನೆ ದಿಲ್ಶಾನ್ ಶತಕ ಸಿಡಿಸಿ ಮಿಂಚಿದರು. ಆದರೆ ಇವರಿಗೆ ಉಳಿದ ಆಟಗಾರರು ಉತ್ತಮ ಸಾಥ್ ನೀಡಲಿಲ್ಲ. 43 ಓವರ್ ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡ ಲಂಕಾ 252 ರನ್ ಸೇರಿಸಿ ಸೋಲೋಪ್ಪಿಕೊಂಡಿತು.

Story first published: Wednesday, January 3, 2018, 10:16 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+