Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಉಕ್ರೇನ್ ಮೇಲೆ ಆಕ್ರಮಣ: ರಷ್ಯಾದಲ್ಲಿ ನಡೆಯಬೇಕಿದ್ದ ಫಾರ್ಮುಲಾ 1 ರೇಸ್ ರದ್ದು

Formula 1

ರಷ್ಯಾದಲ್ಲಿ ನಡೆಯಬೇಕಿದ್ದ 2022ರ ರಷ್ಯನ್ ಗ್ರ್ಯಾಂಡ್ ಪ್ರಿಕ್ಸ್‌ ಅನ್ನು ರದ್ದುಗೊಳಿಸಲಾಗಿದೆ ಎಂದು ಫಾರ್ಮುಲಾ ಒನ್ ದೃಢಪಡಿಸಿದೆ. ಪ್ರಸ್ತುತ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿರುವುದರಿಂದ ಫಾರ್ಮುಲಾ ಒನ್ ರೇಸ್ ರದ್ದುಗೊಂಡಿದೆ.

ಪ್ರಸ್ತುತ ಸಂದರ್ಭದಲ್ಲಿ ರಷ್ಯನ್ ಗ್ರ್ಯಾಂಡ್ ಪ್ರಿಕ್ಸ್‌ ಅನ್ನು ನಡೆಸಲು ಸಾಧ್ಯವಿಲ್ಲ ಎಂದು ಫಾರ್ಮುಲಾ ಒನ್ ಹೇಳಿದೆ. ಇತರೆ ಕ್ರೀಡಾ ಸಂಸ್ಥೆಗಳು ರಷ್ಯಾ ವಿರುದ್ಧ ವಿವಿಧ ಕ್ರಮ ಕೈಗೊಂಡ ಬಳಿಕ ಈ ನಿಧಾರವು ಹೊರಬಂದಿದೆ.

ಇಂದು ಬೆಳಿಗ್ಗೆ, UEFA 2022 ರ ಚಾಂಪಿಯನ್ಸ್ ಲೀಗ್ ಫೈನಲ್ ಅನ್ನು ಸೇಂಟ್ ಪೀಟಸ್‌ಬರ್ಗ್‌ನಿಂದ ಪ್ಯಾರಿಸ್‌ಗೆ ಸ್ಥಳಾಂತರಿಸಲಾಗಿದೆ ಎಂದು ಘೋಷಿಸಿತು. ಇದೇ ಹಿನ್ನಲೆಯಲ್ಲಿ ಫಾರ್ಮುಲಾ ಒನ್ ಪ್ರಸ್ತುತ ಬೆಳವಣಿಗೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದ ಕಾರಣದಿಂದಾಗಿ ಸೋಚಿಯಲ್ಲಿ ಓಟವನ್ನು ರದ್ದುಗೊಳಿಸುವುದರೊಂದಿಗೆ, ಈ ಋತುವಿನಲ್ಲಿ ಇನ್ನು ಮುಂದೆ ರಷ್ಯಾಕ್ಕೆ ಹೋಗುವುದಿಲ್ಲ ಎಂದು ದೃಢಪಡಿಸಿತು.

"ಎಫ್‌ಐಎ ಫಾರ್ಮುಲಾ 1 ವರ್ಲ್ಡ್ ಚಾಂಪಿಯನ್‌ಶಿಪ್ ಜನರನ್ನು ಒಗ್ಗೂಡಿಸಲು, ರಾಷ್ಟ್ರಗಳನ್ನು ಒಟ್ಟುಗೂಡಿಸಲು ಸಕಾರಾತ್ಮಕ ದೃಷ್ಟಿಯೊಂದಿಗೆ ಪ್ರಪಂಚದಾದ್ಯಂತದ ದೇಶಗಳಿಗೆ ಭೇಟಿ ನೀಡುತ್ತದೆ" ಎಂದು ಎಫ್ 1 ಹೇಳಿಕೆಯಲ್ಲಿ ತಿಳಿಸಲಾಗಿದೆ.

"ನಾವು ಉಕ್ರೇನ್‌ನಲ್ಲಿನ ಬೆಳವಣಿಗೆಗಳನ್ನು ದುಃಖ ಮತ್ತು ಆಘಾತದಿಂದ ನೋಡುತ್ತಿದ್ದೇವೆ ಮತ್ತು ಪ್ರಸ್ತುತ ಪರಿಸ್ಥಿತಿಗೆ ತ್ವರಿತ ಮತ್ತು ಶಾಂತಿಯುತ ಪರಿಹಾರಕ್ಕಾಗಿ ಎದುರು ನೋಡುತ್ತಿದ್ದೇವೆ'' ಎಂದು ಫಾರ್ಮುಲಾ ಒನ್ ಹೇಳಿದೆ.

ಈ ಮಹತ್ವದ ನಿರ್ಧಾರ ಹೊರಬರುವುದಕ್ಕೂ ಮುನ್ನ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆಯಬೇಕಿದೆ UEFA 2022 ರ ಚಾಂಪಿಯನ್ಸ್ ಲೀಗ್ ಫೈನಲ್ ಅನ್ನು ಪ್ಯಾರಿಸ್‌ಗೆ ಸ್ಥಳಾಂತರಿಸಲಾಯಿತು.

Story first published: Saturday, February 26, 2022, 9:14 [IST]
Other articles published on Feb 26, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+