ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

'ಆಟದ ಪಾಠ ಕಡ್ಡಾಯ'ದ ಸಿ.ಬಿ.ಎಸ್.ಇ ನಿರ್ಧಾರಕ್ಕೆ ಸಚಿನ್ ಬೆಂಬಲ

Sachin Tendulkar hails CBSE decision to make physical education mandatory

ನವದೆಹಲಿ, ಮೇ 7: 9ನೇ ತರಗತಿಯಿಂದ 12ನೇ ತರಗತಿಯವರೆಗೆ ದೈಹಿಕ ಶಿಕ್ಷಣ ತರಗತಿಗಳು ಕಡ್ಡಾಯ ಗೊಳಿಸಿರುವ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(ಸಿ.ಬಿ.ಎಸ್.ಇ) ನಿರ್ಧಾರವನ್ನು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಬೆಂಬಲಿದ್ದಾರೆ. ಜೊತೆಗೆ 9ನೇ ತರಗತಿಗಿಂತಲೂ ಸಣ್ಣ ತರಗತಿಗಳಲ್ಲೇ ಮಕ್ಕಳಿಗೆ ಆಟದ ಪಾಠ ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಿಬಿಎಸ್ ಇ ಹೊಸ ನಿರ್ಧಾರದ ಪ್ರಕಾರ 9ರಿಂದ 12ನೇ ತರಗತಿಯ ಎಲ್ಲಾ ಮಕ್ಕಳು ಪ್ರತಿದಿನ ಆರೋಗ್ಯ ಮತ್ತು ದೈಹಿಕ ಶಿಕ್ಷಣ ತರಗತಿಗಳಲ್ಲಿ ಹಾಜರಾಗಬೇಕಿದೆ.

ಸಿಬಿಎಸ್ ಇ ಮುಖ್ಯಸ್ಥೆ ಅನಿತಾ ಕರ್ವಾಲ್ ಅವರಿಗೆ ಪತ್ರ ಬರೆದಿರುವ ತೆಂಡೂಲ್ಕರ್, 'ಕ್ರೀಡಾ ಶಿಕ್ಷಣವನ್ನು ಪಠ್ಯಕ್ರಮದಲ್ಲಿ ಸೇರಿಸಿರುವುದು ವಿದ್ಯಾರ್ಥಿಗಳ ದೈಹಿಕ ಮತ್ತು ಬೌದ್ಧಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ' ಎಂದಿದ್ದಾರೆ.

ಈ ಕ್ರಮ ಮುಂಚಿತವಾಗಿಯೇ ಜಾರಿಯಾಗಿರುತ್ತಿದ್ದರೆ ಒಳ್ಳೆಯದಿತ್ತು. ಆದರೆ ಈಗಲಾದರೂ ಜಾರಿಯಾಗಿದ್ದು ಸಂತೋಷ ಎಂದು ಪತ್ರದಲ್ಲಿ ಸಚಿನ್ ತಿಳಿಸಿದ್ದಾರಲ್ಲದೆ, ಸಣ್ಣ ತರಗತಿಗಳಿಗೂ ದೈಹಿಕ ಶಿಕ್ಷಣ ಕಡ್ಡಾಯಗೊಳಿಸಲು ಅನಿತಾ ಕರ್ವಾಲ್ ಅವರನ್ನು ಒತ್ತಾಯಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿರುವ ಸ್ಥೂಲಕಾಯ ತಡೆಗಟ್ಟುವ ಉದ್ದೇಶದಿಂದ ಸಿ.ಬಿ.ಎಸ್.ಇ ಈ ವರ್ಷದಿಂದ 9ನೇ ತರಗತಿಯಿಂದ 12ನೇ ತರಗತಿಯವರೆಗೆ ಆರೋಗ್ಯ ಮತ್ತು ದೈಹಿಕ ಶಿಕ್ಷಣ ಕಡ್ಡಾಯಗೊಳಿಸಿದೆ. ಇದು ಗ್ರೇಡ್ ಪಡೆಯಲು ಅರ್ಹತಾ ವಿಷಯವಾಗಿದೆ ಮತ್ತು ಹತ್ತನೇ ತರಗತಿ ಹಾಗೂ 12ನೇ ತರಗತಿಯ ಮಂಡಳಿಯ ಪರೀಕ್ಷೆಗೆ ಹಾಜರಾಗಲು ಎಲ್ಲಾ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿದೆ.

Story first published: Monday, May 7, 2018, 17:57 [IST]
Other articles published on May 7, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X