2030 ಏಷ್ಯನ್ ಗೇಮ್ಸ್ ಆತಿಥ್ಯದ ರೇಸ್‌ನಲ್ಲಿ ಸೌದಿ ಅರೇಬಿಯಾ, ಕತಾರ್

ನವದೆಹಲಿ, ಏಪ್ರಿಲ್ 24: ಏಷ್ಯನ್ ಗೇಮ್ಸ್ 2030ರ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಲು ಸೌದಿ ಅರೇಬಿಯಾ ಮತ್ತು ಕತಾರ್ ರಾಷ್ಟ್ರಗಳು ಅಧಿಕೃತವಾಗಿ ಬಿಡ್‌ಗಳನ್ನು ಸಲ್ಲಿಸಿವೆ. ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (ಒಸಿಎ) ಈ ವಿಚಾರವನ್ನು ಗುರುವಾರ (ಏಪ್ರಿಲ್ 23) ಬಹಿರಂಗಪಡಿಸಿದೆ.
ಸೌದಿ ಅರೇಬಿಯಾದ ಕೇಂದ್ರವಾದ ರಿಯಾದ್ ಮತ್ತು ಕತಾರ್‌ನ ಕೇಂದ್ರ ದೋಹಾ, 21ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟ ನಡೆಸಲು ತಮ್ಮ ಅಧಿಕೃತ ಬಿಟ್‌ಗಳನ್ನು ಒಸಿಎಗೆ ಸಲ್ಲಿಸಿವೆ. 2030ರ ಏಷ್ಯಾಡ್ ಗೇಮ್ಸ್ ಆತಿಥ್ಯಕ್ಕೆ ಬಿಡ್ ಸಲ್ಲಿಸಲು 2020ರ ಏಪ್ರಿಲ್ 22 ಕಡೇಯ ದಿನವಾಗಿತ್ತು.
ಏಷ್ಯನ್ ಆತಿಥ್ಯಕ್ಕೆ ಬಿಡ್ ಸಲ್ಲಿಸುವಾಗ ಪ್ರತಿ ದೇಶದ ರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಬಿಡ್ ದಾಖಲೆಯೊಂದಿಗೆ ನಗರ ಮತ್ತು ಆಯಾ ಸರ್ಕಾರಗಳ ಬೆಂಬಲ ಪತ್ರಗಳು ಕೂಡ ಜೊತೆಗಿದ್ದವು. ಬಿಡ್ ಸಲ್ಲಿಸಿರುವ ಎರಡು ರಾಷ್ಟ್ರಗಳಲ್ಲಿ ಸೌದಿ ಒಮ್ಮೆಯೂ ಏಷ್ಯನ್ ಕ್ರೀಡಾಕೂಟ ಆಯೋಜಿಸಿಲ್ಲ, ಆದರೆ ದೋಹಾದಲ್ಲಿ 2006ರಲ್ಲಿ ಈ ಪ್ರತಿಷ್ಠಿತ ಕ್ರೀಡಾಕೂಟ ನಡೆದಿತ್ತು.
'2030ರ ನಮ್ಮ ಏಷ್ಯನ್ ಕ್ರೀಡಾಕೂಟಕ್ಕಾಗಿ ಎರಡು ಬಲವಾದ ಬಿಡ್‌ಗಳನ್ನು ಸ್ವೀಕರಿಸಲು ಒಸಿಎಗೆ ಸಂತೋಷವಾಗಿದೆ. ವಿಶ್ವ ಖ್ಯಾತಿಯ ಕ್ರೀಡಾಕೂಟಗಳನ್ನು ನಡೆಸಲು ಏಷ್ಯನ್ ರಾಷ್ಟ್ರಗಳಲ್ಲಿ ಅಂಥ ನಂಬಿಕೆ ಮತ್ತು ಆತ್ಮವಿಶ್ವಾಸವಿದೆ ಅನ್ನೋದಕ್ಕೆ ಸಾಕ್ಷಿ ಹೇಳುತ್ತವೆ,' ಎಂದು ಒಸಿಎ ಅಧ್ಯಕ್ಷ ಶೇಖ್ ಅಹ್ಮದ್ ಅಲ್-ಫಹಾದ್ ಅಲ್-ಸಬಾ ಹರ್ಷ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications