For Quick Alerts
ALLOW NOTIFICATIONS  
For Daily Alerts

ಸೆಪ್ಟೆಂಬರ್ 10: ಭಾರತ ಪಾಕ್ ಪಂದ್ಯಕ್ಕೆ ಮಳೆ ಕಾಟ; ಯುಎಸ್ ಓಪನ್ ಗೆದ್ದ ಕೊಕೊ ಗೌಫ್ : ಕ್ರೀಡಾ ಲೋಕದ ಇಂದಿನ ಸುದ್ದಿ

* ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಅರಿನಾ ಸಬಲೆಂಕಾ ವಿರುದ್ಧ ರೋಚಕ ಕಾದಾಟದಲ್ಲಿ ಗೆದ್ದು ಕೊಕೊ ಗೌಫ್ ಚೊಚಚಲ ಬಾರಿಗೆ ಯುಎಸ್ ಓಪನ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿಕೊಂಡಿದ್ದಾರೆ. ಇದು ಅಮೆರಿಕಾದ ಟೆನಿಸ್ ಆಟಗಾರ್ತಿಯ ಚೊಚ್ಚಲ ಗ್ರ್ಯಾಂಡ್‌ಸ್ಲ್ಯಾಮ್‌ ಕೂಡ ಹೌದು ಎನ್ನುವುದು ಗಮನಾರ್ಹ. 2 ಗಂಟೆ 6 ನಿಮಿಷಗಳ ಕಾಲ ನಡೆದ ಈ ರೋಚಕ ಕಾದಾಟದಲ್ಲಿ 2-6, 6-3, 6-2 ಅಂತರದಿಂದ ಕೊಕೊ ಗೌಫ್ ಪಂದ್ಯವನ್ನು ತಮ್ಮದಾಗಿಸಿಕೊಂಡರು.

* ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ರೋಚಕ ಸೆಣೆಸಾಟಕ್ಕೆ ನಿರೀಕ್ಷೆಯಂತೆಯೇ ಮಳೆ ಅಡ್ಡಿಯುಂಟು ಮಾಡಿದೆ. ಭರ್ಜರಿ ಆರಂಭವನ್ನು ಪಡೆದ ಟೀಮ್ ಇಂಡಿಯಾ ಒಂದು ಹಂತದಲ್ಲಿ ಪಂದ್ಯದಲ್ಲಿ ಸಂಪೂರ್ಣ ಹಿಡಿತವನ್ನು ಸಾಧಿಸಿತ್ತು. ಶತಕದ ಜೊತೆಯಾಟದ ಈ ಇಬ್ಬರು ಆಟಗಾರರು ಕೂಡ ವಿಕೆಟ್ ಕಳೆದುಕೊಂಡ ನಂತರ ಇನ್ನಿಂಗ್ಸ್ ಕಟ್ಟುವ ಜವಾಬ್ಧಾರಿಯನ್ನು ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ವಹಿಸಿಕೊಂಡಿದ್ದರು. ಇಬ್ಬರು ಅನುಭವಿ ಆಟಗಾರರು ಉತ್ತಮವಾಗಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾ ಮತ್ತೊಂದು ಉತ್ತಮ ಜೊತೆಯಾಟದತ್ತ ಹೆಜ್ಜೆಯಿಡಲು ಆರಂಭಿಸಿದಾಗ ಭರ್ಜರಿ ಮಳೆ ಸುರಿಯಲು ಆರಂಭಿಸಿತು.

September 10, what happened in sports World: Todays Top sports news and headlines

* ಐಸಿಸಿ ವಿಶ್ವಕಪ್ ಗೆ 16 ಅಂಪೈರುಗಳು ಮತ್ತು ನಾಲ್ಕು ಮ್ಯಾಚ್ ರೆಫರಿಗಳನ್ನು ಒಳಗೊಂಡ ತಂಡವನ್ನು ಪ್ರಕಟಿಸಿದೆ. ಐಸಿಸಿ ಬಿಡುಗಡೆ ಮಾಡಿರುವ ಮ್ಯಾಚ್ ರೆಫರಿ ಮತ್ತು ಅಂಪೈರ್ ಗಳ ಪಟ್ಟಿಯಲ್ಲಿ ನಿತಿನ್ ಮೆನನ್ ಸ್ಥಾನ ಪಡೆದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಅವರನ್ನು ಮ್ಯಾಚ್ ರೆಫರಿಯಾಗಿ ಸೇರಿಸಿಕೊಳ್ಳಲಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಶ್ರೀಲಂಕಾದ ಕುಮಾರ್ ಧರ್ಮಸೇನಾ ಮತ್ತು ನಿತಿನ್ ಮೆನನ್ ಅಂಪೈರ್ ಆಗಿ ಅಂಗಳವನ್ನು ಪ್ರವೇಶಿಸಲಿದ್ದಾರೆ.

* ODIಗಳಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದವರ ಪಟ್ಟಿಯಲ್ಲಿ ವಾರ್ನರ್, ಬಾಬರ್ ಅಜಮ್ ಅವರನ್ನು ಹಿಂದಿಕ್ಕಿದ್ದಾರೆ. ಅವರ ಹೆಸರಿನಲ್ಲಿ ಏಕದಿನದಲ್ಲಿ 20 ಶತಕಗಳಿವೆ. ಈ ಮೂಲಕ ಅತಿ ಹೆಚ್ಚು ಶತಕ ಸಿಡಿಸಿದ ವಿಶ್ವದ 14ನೇ ಬ್ಯಾಟ್ಸಮ್ಯಾನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರೊಂದಿಗೆ, ಅವರು ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ವಿಷಯದಲ್ಲಿ ಇಂಗ್ಲಿಷ್ ಬ್ಯಾಟ್ಸಮ್ಯಾನ್ ಜೋ ರೂಟ್ ಅವರನ್ನು ಸರಿಗಟ್ಟಿದರು.

* ಕೊಲಂಬೋದಲ್ಲಿ ಕಳೆದ ಮೂರು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಆಡಿದ್ದಾಗ ಅಕ್ಷರಶಃ ರೌದ್ರಾವತಾರ ತಾಳಿದ್ದಾರೆ. ಕೊನೆಯ ಮೂರು ಪಂದ್ಯಗಳಲ್ಲಿ ಕೊಹ್ಲಿ ಸತತವಾಗಿ ಇಲ್ಲಿ ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. 2012ರಲ್ಲಿ ಶ್ರೀಲಂಕಾ ವಿರುದ್ಧ ಇಲ್ಲಿ ಮೊದಲ ಬಾರಿಗೆ ಆಡಿದ್ದಾಗ ಕೊಹ್ಲಿ 112 ಎಸೆತಗಳಲ್ಲಿ ಔಟಾಗದೆ 128 ರನ್‌ಗಳನ್ನು ಬಾರಿಸಿದ್ದರು. ಅದಾದ ಬಳಿಕ ಕೊಹ್ಲಿ ಈ ಕ್ರೀಡಾಂಗಣದಲ್ಲಿ ಆಡಿದ್ದು 2017ರಲ್ಲಿ. 96 ಎಸೆತಗಳಲ್ಲಿ 131 ರನ್‌ಗಳನ್ನು ಬಾರಿಸಿದ ವಿರಾಟ್ ಕೊಹ್ಲಿ ಕೊಲಂಬೋ ತನ್ನ ನೆಚ್ಚಿನ ಅಂಗಳ ಎನ್ನುವುದನ್ನು ಮತ್ತೊಮ್ಮೆ ಸಾರಿದ್ದರು. ಇನ್ನು 2017ರಲ್ಲಿಯೇ ಕೊಹ್ಲಿ ಮತ್ತೊಮ್ಮೆ ಇಲ್ಲಿ ಆಡಿದ್ದಾಗಲೂ ಶತಕ ಬಾರಿಸಿದ್ದಾರೆ. ಕೊನೆಯ ಬಾರಿ ಇಲ್ಲಿ ಆಡಿದ್ದಾಗ 116 ಎಸೆತಗಳಲ್ಲಿ 110 ರನ್‌ಗಳನ್ನು ಬಾರಿಸಿದ್ದಾರೆ.

* ಭಾರತ vs ಪಾಕಿಸ್ತಾನ ಪಂದ್ಯದಲ್ಲಿ ಟಾಸ್ ಸಂದರ್ಭದಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಂ ಬೌಲಿಂಗ್ ನಿರ್ಧಾರ ತೆಗೆದುಕೊಂಡ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ ನಮ್ಮ ಆಯ್ಕೆ ಮೊದಲಿಗೆ ಬ್ಯಾಟಿಂಗ್ ನಡೆಸುವುದೇ ಆಗಿತ್ತು ಎಂದಿದ್ದಾರೆ. ಈ ಮೂಲಕ ಟಾಸ್ ಸೋತಿರುವುದು ತಂಡಕ್ಕೆ ಯಾವುದೇ ಹಿನ್ನಡೆಯಾಗುವುದಿಲ್ಲ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ ರೋಹಿತ್ ಶರ್ಮಾ.

* ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಸೂಪರ್ 4 ಹಂತದ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನದ ವಿರುದ್ಧ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದೆ. ಟೀಮ್ ಇಂಡಿಯಾದ ಆರಂಭಿಕ ಆಟಗಾರರು ಪಾಕ್ ಬೌಲರ್‌ಗಳನ್ನು ನಿರ್ದಯವಾಗಿ ಬಾರಿಸುತ್ತಿದ್ದಾರೆ. ಅದರಲ್ಲೂ ಯುವ ಆಟಗಾರ ಶೂಬ್ಮನ್ ಗಿಲ್ ಪಾಕಿಸ್ತಾನದ ಪ್ರಮುಖ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿಯನ್ನು ಗುರಿಯಾಗಿಸಿ ಬಾರಿಸಿದ ರೀತಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿದೆ.

* ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ತಂಡದ ನಾಯಕ ರೋಹಿತ್ ಶರ್ಮಾ ಪ್ರದರ್ಶನದ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ. ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಒಂದೇ ಒಂದು ಕಳಪೆ ಎಸೆತವನ್ನು ಬಿಡಲಿಲ್ಲ. ಕೆಟ್ಟ ಎಸೆತಗಳನ್ನು ಸಂಪೂರ್ಣವಾಗಿ ದಂಡಿಸಿದರು ಎಂದು ರವಿ ಶಾಸ್ತ್ರಿ ನಾಯಕನ ಆಟದ ಬಗ್ಗೆ ಮೆಚ್ಚಿಗೆ ಸೂಚಿಸಿದ್ದಾರೆ. "ಆರಂಭದಲ್ಲಿ ನಸೀಮ್ ಶಾ ಎಸೆದ ಹತ್ತು ಎಸೆತಗಳಲ್ಲಿ ರೋಹಿತ್ ಶರ್ಮಾ ಅವರನ್ನು ವಂಚಿಸಿತು. ಚೆಂಡಿಗೆ ಬಾರಿಸಲು ಅವರು ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ. ಅದಾದ ಬಳಿಕ ಅವರಿಗೆ ದೊರೆತ ಎಲ್ಲಾ ಕಳಪೆ ಎಸೆತಗಳನ್ನು ಕೂಡ ಸರಿಯಾಗಿ ದಂಡಿಸಿದ್ದಾರೆ. ಅವೆಲ್ಲವನ್ನೂ ಅವರು ಬೌಂಡಿರಿ ಮೇಲಿನಿಂದ ಅಥವಾ ಬೌಂಡರಿಗೆ ಬಾರಿಸಿದ್ದಾರೆ" ಎಂದು ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ಮಾತನಾಡುತ್ತಾ ಹೇಳಿದ್ದಾರೆ ರವಿ ಶಾಸ್ತ್ರಿ.

Story first published: Sunday, September 10, 2023, 19:52 [IST]
Other articles published on Sep 10, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+