ಸೆಪ್ಟೆಂಬರ್ 13: ನಂಬರ್ 1 ಸ್ಥಾನದ ಮೇಲೆ ಟೀಮ್ ಇಂಡಿಯಾ ಕಣ್ಣು: ಪಾಕ್‌ಗೆ ಭಾರೀ ಹಿನ್ನಡೆ
* ಪಾಕಿಸ್ತಾನ ತಂಡದ ವಿರುದ್ಧ ಗೆದ್ದ ಬಳಿಕ ಶ್ರೀಲಂಕಾವನ್ನು ಕೂಡ ಟೀಮ್ ಇಂಡಿಯಾ ಸೋಲಿಸಿದ್ದು ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್ಸ್‌ಗೆ ಪ್ರವೇಶ ಪಡೆದುಕೊಂಡಿದೆ. ಆದರೆ ಈಗ ಮತ್ತೊಂದು ಸ್ಥಾನಕ್ಕೆ ತೀವಬ್ರ ಪೈಪೋಟಿ ಏರ್ಪಟ್ಟಿದೆ. ಸೂಪರ್ 4 ಹಂತದಲ್ಲಿ ಭಾರತವನ್ನು ಹೊರತುಪಡಿಸಿ ಮೂರು ತಂಡಗಳಿದ್ದು ಈ ಪೈಕಿ ಒಂದು ಪಂದ್ಯ ಅತ್ಯಂತ ನಿರ್ಣಾಯಕವಾಗಿದೆ. ಆ ಒಂದು ಪಂದ್ಯವೇ ಫೈನಲ್‌ನ್ಲಲಿ ಸ್ಥಾನ ಪಡೆದುಕೊಳ್ಳುವ ಮತ್ತೊಂದು ತಂಡವನ್ನು ನಿರ್ಧರಿಸಲಿದೆ.
* ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ತಂಡದ ಇಬ್ಬರು ಆಟಗಾರರ ಬಗ್ಗೆ ವಿಶೇಷವಾಗಿ ಮಾತನಾಡಿದ್ದಾರೆ ಒಂದು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ. ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲಿಯೂ ಪರಿಣಾಮಕಾರಿಯಾಗಿರುವ ಹಾರ್ದಿಕ್ ಪಾಂಡ್ಯ ಲಂಕಾ ವಿರುದ್ಧದ ಪಂದ್ಯದಲ್ಲಿ ಗಮನಸೆಳೆಯುವ ಪ್ರದರ್ಶನ ನೀಡಿದ್ದಾರೆ. ಮತ್ತೊಂದೆಡೆ ಟೀಮ್ ಇಂಡಿಯಾದ ಸ್ಪಿನ್ನರ್ ಕುಲ್‌ದೀಪ್ ಯಾದವ್ ಬಗ್ಗೆಯೂ ನಾಯಕ ರೋಹಿತ್ ಶರ್ಆ ಗುಣಗಾನ ಮಾಡಿದ್ದಾರೆ. ಕುಲ್‌ದೀಪ್ ಪಾಕ್ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದ ನಂತರ ಲಂಕಾ ವಿರುದ್ಧದ ಪಂದ್ಯದಲ್ಲಿಯೂ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದು ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

* ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನವನ್ನು ನೀಡುತ್ತಾ ಫೈನಲ್‌ಗೆ ಪ್ರವೇಶ ಪಡೆದಿದೆ. ಸೂಪರ್ 4 ಹಂತದಲ್ಲಿ ಎರಡು ಬಲಿಷ್ಠ ತಂಡಗಳ ವಿರುದ್ಧ ಭಾರತ ತಂಡ ಅಮೋಘ ಗೆಲುವು ಸಾಧಿಸಿದ್ದು ಅರ್ಹವಾಗಿಯೇ ಫೈನಲ್‌ನಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಈ ಮೂಲಕ ಮುಂಬರುವ ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಸಿದ್ಧತೆ ಭರ್ಜರಿಯಾಗಿಯೇ ಇದೆ.
* ಕೇವಲ 24 ಗಂಟೆಗಳ ಅಂತರದಲ್ಲಿ ಭಾರತ ಎರಡು ಬಲಿಷ್ಠ ತಂಡಗಳ ವಿರುದ್ಧ ಅಭೂತಪೂರ್ವ ಗೆಲುವು ದಾಖಲಿಸಿದ್ದು ಏಷ್ಯಾಕಪ್ ಟೂರ್ನಿಯ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಮೊದಲಿಗೆ ಪಾಕಿಸ್ತಾನ ತಂಡವನ್ನು 228 ರನ್‌ಗಳ ಬೃಹತ್ ಅಂತರದಿಂದ ಮಣಿಸಿದ್ದರೆ ನಂತರ ಶ್ರೀಲಂಕಾ ತಂಡವನ್ನು ಲೋ ಸ್ಕೋರಿಂಗ್ ಸೆಣೆಸಾಟದಲ್ಲಿ 41 ರನ್‌ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಏಷ್ಯಾಕಪ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರುವ ಅತ್ಯಂತ ಸನಿಹಕ್ಕೆ ತಲುಪಿದೆ ಭಾರತ.
* ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಏಷ್ಯಾಕಪ್ ಟೂರ್ನಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಮೋಘ ಅರ್ಧ ಶತಕ ಸಿಡಿಸಿದ ಗಿಲ್ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ತನ್ನ ಅತ್ಯುನ್ನತ ಸ್ಥಾನಕ್ಕೇರಿದ್ದು 2ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
* ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಎರಡು ವಿಕೆಟ್ ಪಡೆಯುವ ಮೂಲಕ ರವೀಂದ್ರ ಜಡೇಜಾ ಅವರು ಭಾರತ ತಂಡದ ಮಾಜಿ ವೇಗಿ ಇರ್ಫಾನ್ ಪಠಾಣ್ ಅವರನ್ನು ಹಿಂದಿಕ್ಕಿ, ಏಕದಿನ ಏಷ್ಯಾ ಕಪ್ ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದರು. ಮಂಗಳವಾರ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧದ ಸೂಪರ್ 4 ಹಂತದ ಪಂದ್ಯದಲ್ಲಿ ಎಡಗೈ ಆಲ್‌ರೌಂಡರ್ ರವೀಂದ್ರ ಜಡೇಜಾ ಈ ಮೈಲುಗಲ್ಲು ಸ್ಥಾಪಿಸಿದರು.
* ಬಿಸಿಸಿಐ ಟಿವಿಗೆ ಸೂರ್ಯಕುಮಾರ್ ಯಾದವ್ ಜೊತೆಗೆ ಸಂದರ್ಶನದಲ್ಲಿ ಕಾಣಿಸಿಕೊಂಡಿರುವ ಕುಲ್‌ದೀಪ್ ಪಂದ್ಯಕ್ಕೂ ಮುನ್ನ ಸೂರ್ಯಕುಮಾರ್ ಯಾದವ್ ನೀಡಿದ ಸಲಹೆಯನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೆ ಆ ಸಲಹೆ ಈ ಪಂದ್ಯದಲ್ಲಿ ತನಗೆ ಸಹಾಯವಾಯಿತು ಎನ್ನುವ ವಿಚಾರವನ್ನು ಕೂಡ ಹೇಳಿಕೊಂಡರು. ಸೂರ್ಯಕುಮಾರ್ ಯಾದವ್ ಅವರನ್ನು ಉದ್ದೇಶಿಸಿ ಮಾತನಾಡಿದ ಕುಲ್‌ದೀಪ್ "ಪಂದ್ಯಕ್ಕೂ ಮುನ್ನ ನೀವು ನನಗೆ ಚುಟುಕು ಸಲಹೆಯನ್ನು ನೀಡಿದ್ದಿರಿ. ಪಂದ್ಯದ ಹಿಡಿತವನ್ನು ಕಳೆದುಕೊಳ್ಳಬೇಡ ಎಂದು ತಿಳಿಸಿದ್ದಿರಿ. ಐದು ವಿಕೆಟ್‌ಗಳ ಗೊಂಚಲು ಪಡೆದ ನಂತರ ಬೌಲರ್‌ನ ಬಾಡಿ ಲಾಂಗ್ವೇಜ್ ಬದಲಾಗುತ್ತದೆ. ಹಾಗಾಗಿ ರಿಲ್ಯಾಕ್ಸ್ ಆಗಬಹುದು. ಆದರೂ ಆತ್ಮವಿಶ್ವಾಸ ಉಳಿಸಿಕೊಳ್ಳಬೇಕಾಗುತ್ತದೆ. ಅದು ಬೌಲರ್‌ಗಳಿಗೆ ಸಹಜವಾಗಿಯೇ ಆಗುತ್ತದೆ. ಆ ಸಂದರ್ಭದಲ್ಲಿ ಆ ಎರಡು ನಿಮಿಷಗಳ ಚುಟುಕು ಸಲಹೆ ನನಗೆ ಬಹಳ ಸಹಾಯ ಮಾಡಿದೆ" ಎಂದಿದ್ದಾರೆ ಕುಲ್‌ದೀಪ್ ಯಾದವ್.
* ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸಲು ಹೋರಾಟ ನಡೆಸುತ್ತಿರುವ ಪಾಕಿಸ್ತಾನಕ್ಕೆ ಭಾರೀ ಹಿನ್ನಡೆಯಾಗಿದೆ. ತಂಡದ ಸ್ಟಾರ್ ವೇಗದ ಬೌರಲ್ ನಸೀಮ್ ಶಾ ಏಷ್ಯಾಕಪ್ ಟೂರ್ನಿಯಿಮದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಭಾರತದ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ನಸೀಮ್ ಶಾ ಬ್ಯಾಟಿಂಗ್‌ಗೆ ಇಳಿದಿರಲಿಲ್ಲ. ಇದೀಗ ಉಳಿದ ಪಂದ್ಯಕ್ಕೆ ನಸೀಮ್ ಶಾ ಅಲಭ್ಯವಾಗುವುದು ಅಧಿಕೃತವಾಗಿದೆ.
* 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ಮತ್ತು ನವೀನ್-ಉಲ್-ಹಕ್ ನಡುವಿನ ನಿಕಟ ಪೈಪೋಟಿ ಮತ್ತೆ ಮರುಕಳಿಸಲಿದೆ ಎಂದು ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿದೆ. ವಿಶ್ವಕಪ್‌ನಲ್ಲಿ ಕೆಲವು ರೋಚಕ ದ್ವಂದ್ವಗಳಿಗೆ ವೇದಿಕೆ ಕಲ್ಪಿಸಲಿದೆ. ಈ ಘರ್ಷಣೆಯು "ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕಿಂತ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯ ದೊಡ್ಡದಾಗಿದೆ' ಎಂದು ಭಾವಿಸುತ್ತಿದ್ದಾರೆ. ಏಕೆಂದರೆ ಈ ಇಬ್ಬರು ಬೆಂಕಿಯುಂಡೆಗಳ ನಡುವಿನ ಹಣಾಹಣಿಗಾಗಿ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications