* ಇತ್ತ ಟೀಮ್ ಇಂಡಿಯಾ ಏಷ್ಯಾಕಪ್ ಟೂರ್ನಿಯಲ್ಲಿ ಆಡುತ್ತಿದ್ದರೆ ಅತ್ತ ಇಂಗ್ಲೆಂಡ್‌ನ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಆಡುತ್ತಿರುವ ಭಾರತದ ವೇಗದ ಬೌಲರ್ ಜಯ್‌ದೇವ್ ಉನಾದ್ಕಟ್ ಅಬ್ಬರದ ಪ್ರದರ್ಶನ ನೀಡಿ ಗಮನಸೆಳೆದಿದ್ದಾರೆ. ಎಡಗೈ ವೇಗದ ಬೌಲರ್ ಜಯ್‌ದೇವ್ ಉನಾದ್ಕಟ್ ಸಸ್ಸೆಕ್ಸ್ ಪರವಾಗಿ ಕಣಕ್ಕಿಳಿಯುತ್ತಿದ್ದು 6 ವಿಕೆಟ್‌ಗಳ ಗೊಂಚಲಿನ ಜೊತೆಗೆ 9 ವಿಕೆಟ್ ಕಬಳಿಸಿ ಅಬ್ಬರಿಸಿದ್ದಾರೆ. ಕೌಂಟಿ ಚಾಂಪಿಯನ್‌ಶಿಪ್‌ನ ಡಿವಿಶನ್ 2ನ ಲುಸೆಸ್ಟರ್ಶೈರ್ ವಿರುದ್ಧ ರೋಚಕವಾಗಿ ಅಂತ್ಯವಾದ ಪಂದ್ಯದಲ್ಲಿ ಭಾರತದ ಈ ವೃಗದ ಬೌಲರ್ ಮಿಂಚಿನ ಪ್ರದರ್ಶನ ನೀಡಿದ್ದಾರೆ. ಭಾರತದ ಹಿರಿಯ ಆಟಗಾರ ಚೇತೇಶ್ವರ್ ಪೂಜಾರ ನಾಯಕತ್ವದ ಸಸ್ಸೆಕ್ಸ್ ತಂಡದ ಪರವಾಗಿ ಪದಾರ್ಪಣಾ ಪಂದ್ಯದಲ್ಲಿಯೇ ಈ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿ ಅಬ್ಬರಿಸಿದ್ದಾರೆ ಉನಾದ್ಕಟ್.
* ಏಷ್ಯಾಕಪ್ ಟೂರ್ನಿಯ ಇತಿಹಾಸವನ್ನು ಉಲ್ಲೇಖಿಸಿರುವ ಆಕಾಶ್ ಚೋಪ್ರ ಈವರೆಗೆ ಈ ಟೂರ್ನಿಯ ಫೈನಲ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿಲ್ಲ ಎನ್ನುವುದನ್ನು ಬೊಟ್ಟುಮಾಡಿದರು. ಎರಡು ಬಲುಷ್ಠ ತಂಡಗಳಾಗಿದ್ದರೂ ಏಷ್ಯಾಕಪ್‌ನ ಚಾಂಪಿಯನ್ ಪಟ್ಟಕ್ಕಾಗಿ ಈ ಎರಡು ತಡಗಳ ನಡುವಿಗೆ ಈವರೆಗೆ ಕಾದಾಟ ನಡೆದಿಲ್ಲ ಎಂದಿದ್ದಾರೆ ಆಕಾಶ್ ಚೋಪ್ರ.

* ಭಾರತ ಮತ್ತು ಪಾಕಿಸ್ತಾನ ನಡುವಿನ 2023ರ ಏಷ್ಯಾ ಕಪ್ ಸೂಪರ್ 4 ಪಂದ್ಯಕ್ಕೆ ಮೀಸಲು ದಿನವನ್ನು ನೀಡಿದ್ದಕ್ಕಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅನ್ನು ಶ್ರೀಲಂಕಾ ಮಾಜಿ ಕ್ರಿಕೆಟಿಗ ಚರಿತ್ ಸೇನಾನಾಯಕೆ ಟೀಕಿಸಿದ್ದಾರೆ. 2022ರ ಏಷ್ಯಾ ಕಪ್‌ನ ತಾಂತ್ರಿಕ ಸಮಿತಿಯ ಅಧ್ಯಕ್ಷರಾಗಿದ್ದ ಚರಿತ್ ಸೇನಾನಾಯಕೆ, ಎಲ್ಲಾ ತಂಡಗಳು ಇದನ್ನು ಒಪ್ಪಿದರೆ ನಿಯಮಗಳನ್ನು ಬದಲಾಯಿಸಬಹುದು ಎಂದು ಕೂಡ ಹೇಳಿದ್ದಾರೆ.
* ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಶ್ರೇಯಸ್ ಐಯ್ಯರ್ ಸೂಪರ್ 4 ಹಂತದ ಮೊದಲ ಎರಡು ಪಂದ್ಯಗಳಿಗೆ ಗಾಯದ ಕಾರಣದಿಂದಾಗಿ ಅಲಭ್ಯವಾಗಿದ್ದರು. ಹೀಗಾಗಿ ಕೆಎಲ್ ರಾಹುಲ್ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ಗಾಯಗೊಂಡಿರುವ ಶ್ರೇಯಸ್ ಐಯ್ಯರ್ ಚೇತರಿಸಿಕೊಂಡಿದ್ದು ಅಭ್ಯಾಸಕ್ಕೆ ಹಾಜರಾಗಿದ್ದಾರೆ. ಸೂಪರ್ 4 ಹಂತದಲ್ಲಿ ಶ್ರೇಯಸ್ ಐಯ್ಯರ್ ಬದಲಿಗೆ 3ನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಕಣಕ್ಕಿಳಿದಿದ್ದು ಅದ್ಭುತ ಯಶಸ್ಸು ಸಾಧಿಸಿದರು. ಪಾಕಿಸ್ತಾನದ ವಿರುದ್ಧ ಮ್ಯಾಚ್ ವಿನ್ನಿಂಗ್ ಶತಕ ಬಾರಿಸಿದ ಅವರು ಶ್ರೀಲಂಕಾ ವಿರುದ್ಧವೂ 39 ರನ್‌ಗಳ ಕೊಡುಗೆ ನೀಡಿ ಗಮನಸೆಳೆದಿದ್ದಾರೆ.
* ತವರಿನಲ್ಲಿ ನಡೆಯುವ ಆಸ್ಟ್ರೇಲಿಯಾ ತಂಡದ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ ಆತಿಥ್ಯ ವಹಿಸಲಿದೆ. ಅಕ್ಟೋಬರ್ 22ರಿಂದ ಏಕದಿನ ಸರಣಿ ಆರಂಭವಾಗಲಿದೆ. ಇನ್ನು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯನ್ನು ಭಾರತೀಯ ಮಾಧ್ಯಮ ಸಂಸ್ಥೆ Viacom18 ಮೀಡಿಯಾ ಪ್ರೈವೇಟ್ ಲಿಮಿಟೆಡ್ ಮಾಲೀಕತ್ವದ JioCinema ದಲ್ಲಿ ಉಚಿತವಾಗಿ ಲೈವ್-ಸ್ಟ್ರೀಮಿಂಗ್ ಮಾಡಲಾಗುತ್ತದೆ. ಮಾಧ್ಯಮ ಹಕ್ಕುಗಳ ಋತುವಿನಲ್ಲಿ, ಇದು ಅಂತಾರಾಷ್ಟ್ರೀಯ ಸರಣಿಯ ಮೊದಲ ಕವರೇಜ್ ಆಗಿರಲಿದೆ.
* 2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್ ಶ್ರೀಲಂಕಾ ತಂಡ ಯುವ ಆಟಗಾರರಿಂದ ತುಂಬಿದೆ. ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಕೆಲವು ಗಾಯಾಳು ಆಟಗಾರರ ಅಲಭ್ಯತೆಯಿಂದಾಗಿ ಯುವ ಆಟಗಾರರಿಗೆ ಮಣೆ ಹಾಕಿತು. ಇದೀಗ ಭಾರತದ ಮಾಜಿ ಆಲ್‌ರೌಂಡರ್ ಸುನಿಲ್ ಜೋಶಿ ಅವರು ಶ್ರೀಲಂಕಾ ತಂಡದ ಯುವ ಸ್ಪಿನ್ ಆಲ್‌ರೌಂಡರ್ ದುನಿತ್ ವೆಲ್ಲಾಲಗೆ ಅವರನ್ನು ಹಾಡಿ ಹೊಗಳಿದ್ದಾರೆ. ಇದೇ ವೇಳೆ ಭವಿಷ್ಯದ ಸನತ್ ಜಯಸೂರ್ಯ ಆಗುವ ಎಲ್ಲಾ ಗುಣಗಳನ್ನು ಹೊಂದಿದ್ದಾರೆ ಎಂದು ಶ್ಲಾಘಿಸಿದ್ದಾರೆ.
* ಟೀಮ್ ಇಂಡಿಯಾದ ಆಯ್ಕೆ ಮಂಡಳಿ ಈ ಬಾರಿಯ ವಿಶ್ವಕಪ್ ತಂಡದಲ್ಲಿ ಮೂವರು ಎಡಗೈ ಸ್ಪಿನ್ನರ್‌ಗಳಿಗೆ ಮಣೆಹಾಕಿದೆ. ಹೀಗಾಗಿ ಆರ್ ಅಶ್ವಿನ್ ಅವರನ್ನು ವಿಶ್ವಕಪ್‌ನ ಪ್ರಾಥಮಿಕ ತಂಡಕ್ಕೆ ಪರಿಗಣಿಸಲಾಗಿಲ್ಲ. ಇಂಥಾ ಸಮದರ್ಭದಲ್ಲಿ ಅನುಭವಿ ಆಟಗಾರ ಆರ್ ಅಶ್ವಿನ್ ತಮ್ಮ ಯೂಟ್ಯೂ್ ಚಾನೆಲ್‌ನಲ್ಲಿ ತಮ್ಮ ವೃತ್ತಿ ಬದುಕಿನ ಏರಿಳಿತಗಳ ಬಗ್ಗೆ ಮಾತನಾಡುತ್ತಾ ಕ್ರಿಕೆಟ್‌ನ ಮೇಲೆ ತನ್ನ ಬದ್ಧತೆಯನ್ನು ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಆರ್ ಅಶ್ವಿನ್ ತಂಡಕ್ಕೆ ಯಾವಾಗ ನನ್ನ ಅಗತ್ಯವಿದೆಯೋ ಆಗ ತನ್ನಿಂದಾಗುವ ಎಲ್ಲವನ್ನೂ ನಿಡಲು ತಾನು ಸಿದ್ಧನಿದ್ದೇನೆ ಎನ್ನುವ ಮಾತು ಹೇಳಿದ್ದಾರೆ.