For Quick Alerts
ALLOW NOTIFICATIONS  
For Daily Alerts

ಸೆಪ್ಟೆಂಬರ್ 16: ಏಷ್ಯಾಕಪ್ ಫೈನಲ್‌ಗೆ ಕ್ಷಣಗಣನೆ; ಅಕ್ಷರ್ ಪಟೇಲ್ ಅಲಭ್ಯ: ಕ್ರೀಡಾ ಲೋಕದ ಇಂದಿನ ಸುದ್ದಿ

* ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆಕ್ಷಣಗಣನೆ ಆರಂಭವಾಗಿದೆ. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡಕ್ಕೆ ಆತಿಥೇಯ ಶ್ರೀಲಂಕಾ ಫೈನಲ್‌ನಲ್ಲಿ ಸವಾಲೊಡ್ಡಲಿದ್ದು ತೀವ್ರ ಕುತೂಹಲ ಮೂಡಿಸಿದೆ. ಭಾರತ ಹಾಗೂ ಶ್ರೀಲಂಕಾ ಎರಡು ತಂಡಗಳು ಕೂಡ ಏಷ್ಯಾಕಪ್ ಟೂರ್ನಿಯಲ್ಲಿ ಅತ್ಯಂತ ಹೆಚ್ಚು ಯಶಸ್ಸು ಕಂಡ ತಂಡಗಳೆನಿಸಿದೆ. ಎರಡು ತಮಡಗಳು ಕೂಡ ತಲಾ 7 ಬಾರಿ ಏಷ್ಯಾಕಪ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದು 8ನೇ ಬಾರಿಯ ಚಾಂಪಿಯನ್ ಪಟ್ಟಕ್ಕಾಗಿ ಕಾದಾಟ ನಡೆಸಲಿದೆ.

* ಏಷ್ಯಾ ಕಪ್ 2023ರ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ, ಪ್ರಶಸ್ತಿ ಸುತ್ತಿನ ಕಾದಾಟ ಭಾರತ ಮತ್ತು ಶ್ರೀಲಂಕಾ ನಡುವೆ ಸೆಪ್ಟೆಂಬರ್ 17 ರಂದು ನಡೆಯಲಿದೆ. ಕೊಲಂಬೊದಲ್ಲಿ ಕೆಟ್ಟ ಹವಾಮಾನದ ಕಾರಣ, ಫೈನಲ್‌ಗೆ ಹೆಚ್ಚುವರಿ ದಿನವನ್ನು ನೀಡಲಾಗಿದೆಯಾ ಎಂಬ ಪ್ರಶ್ನೆಗಳು ಮೂಡಿವೆ. ಒಂದು ವೇಳೆ ಫೈನಲ್ ಪಂದ್ಯದಲ್ಲಿ ಮಳೆ ಕಾಟ ನೀಡಿದರೂ ಸಹ, ಪಂದ್ಯವನ್ನು ಮೀಸಲು ದಿನದಂದು ಆಡಿಸಲು ತೀರ್ಮಾನಿಸಲಾಗಿದೆ. ಅಲ್ಲದೆ ಪಂದ್ಯ, ಯಾವ ಹಂತದಲ್ಲಿ ಸ್ಥಗಿತಗೊಂಡಿತ್ತೋ, ಅಲ್ಲಿಂದಲೇ ಮೀಸಲು ದಿನದಂದು ಆಡುವ ತೀರ್ಮಾನವನ್ನು ಎಸಿಸಿ ತೆಗೆದುಕೊಂಡಿದೆ.

September 16, what happened in sports World: Todays Top sports news and headlines

* ಕ್ರಿಕ್ ಬಜ್‌ ಸಂವಾದದಲ್ಲಿ ಭಾಗಿಯಾಗಿದ್ದ ಡಿಕೆ "ಶುಬ್ಮನ್ ಗಿಲ್ ಪಂದ್ಯವನ್ನು ಮುಗಿಸಬೇಕೆನ್ನುವ ಧಾವಂತದಲ್ಲಿಯೇ ಇದ್ದರು. ಆದರೆ ಅವರು ಔಟಾಗಿದ್ದು ಕೆಟ್ಟ ಹೊಡೆತದಿಂದ ಅಲ್ಲ ಎಂದು ನಾನು ಪರಿಗಣಿಸುತ್ತೇನೆ. ಆದರೆ ಇಂಥಾ ಪಿಚ್‌ನಲ್ಲಿ ಆ ರೀತಿಯ ಹೊಡೆಗಳನ್ನು ಸತತವಾಗಿ ಬಾರಿಸುತ್ತಾ ಇರುವುದು ಸವಾಲಿನ ಕೆಲಸ" ಎಂದಿದ್ದಾರೆ ದಿನೇಶ್ ಕಾರ್ತಿಕ್. ಮುಂದುವರಿದು ದಿನೇಶ್ ಕಾರ್ತಿಕ್ "ಶುಬ್ಮನ್ ಗಿಲ್ ಮೂರು ಮಾದರಿಯಲ್ಲಿಯೂ ಆಡುವ ಆಟಗಾರನಾಗಿ ಮುಂದೆ ಬರಬೇಕು. ಅಲ್ಲದೆ ಸುದೀರ್ಘ ವರ್ಷಗಳಿಂದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಂತೆ ಪಂದ್ಯಗಳನ್ನು ಗೆಲ್ಲಿಸಿಕೊಡುವ ಜವಾಬ್ಧಾರಿ ವಹಿಸಿಕೊಳ್ಳಬೇಕು. ಆತನಲ್ಲಿ ಅಂಥಾ ಸಾಮರ್ಥ್ಯ ಖಂಡಿತಾ ಇದೆ ಹಾಗೂ ಭಾರತಕ್ಕಾಗಿ ಆತ ಖಂಡಿಯವಾಗಿ ಸಾಕಷ್ಟು ಪಂದ್ಯಗಳನ್ನು ಗೆಲ್ಲಿಸಿಕೊಡಲಿದ್ದಾರೆ" ಎಂದಿದ್ದಾರೆ ದಿನೇಶ್ ಕಾರ್ತಿಕ್.

* ಟೀಮ್ ಇಂಡಿಯಾದ ಎಡಗೈ ಸ್ಪಿನ್ನರ್ ಕುಲ್‌ದೀಪ್ ಯಾದವ್ ಬಗ್ಗೆ ಸುನಿಲ್ ಗವಾಸ್ಕರ್ ವಿಶೇಷವಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಕುಲ್‌ದೀಪ್ ಭಾರತ ತಂಡದ ಪರವಾಘಿ ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್ ಆಗಿದ್ದಾರೆ. ಆಡಿರುವ ಮೂರು ಇನ್ನಿಂಗ್ಸ್‌ಗಳಲ್ಲಿ ಕುಲ್‌ದೀಪ್ 9 ವಿಕೆಟ್ ಸಂಪಾದಿಸಿದ್ದಾರೆ. ಇನ್ನು ಕೊಲಂಬೋದಲ್ಲಿಯೇ ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಕುಲ್‌ದೀಪ್ ಯಾದವ್ ಐದು ವಿಕೆಟ್‌ಗಳ ಗೊಂಚಲನ್ನು ಕೂಡ ಪಡೆದಿದ್ದಾರೆ ಎನ್ನುವುದು ಗಮನಾರ್ಹ.

ಈ ಬಗ್ಗೆ ಮಾತನಾಡುತ್ತಾ ಸುನಿಲ್ ಗವಾಸ್ಕರ್, "ಕುಲ್‌ದೀಪ್ ಯಾದವ್ ಎಲ್ಲರಿಗೂ ತನ್ನ ತಾಕತ್ತು ಏನು ಎನ್ನುವುದನ್ನು ತೋರಿಸಿದ್ದಾರೆ. ಬಲಗೈ ಆಗಿರಲಿ ಅಥವಾ ಎಡಗೈ ಆಗಿರಲಿ ರಿಸ್ಟ್ ಸ್ಪಿನ್ ಆಗಿದ್ದರೆ ವಿಕೆಟ್ ಪಡೆಯುತ್ತೀರಿ. ವಿಕೆಟ್ ಎನ್ನುವುದು ವೈಟ್‌ವಾಲ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಡಾಟ್ ಬಾಲ್. ಅಲ್ಲದೆ ಅವರು ಸ್ವಲ್ಪ ಫ್ಲ್ಯಾಟ್ ಆಗಿಯೂ ಬೌಲಿಂಗ್ ನಡೆಸುತ್ತಾರೆ. ಅದು ಚೆಂಡು ಗಾಳಿಯಲ್ಲಿ ಹೆಚ್ಚು ಹೊತ್ತು ಇರುವಂತೆ ಮಾಡುವುದಿಲ್ಲ. ಹಾಗಾಗಿ ಆತನ ಚೆಂಡನ್ನು ಎದುರಿಸುವುದು ಬ್ಯಾಟರ್‌ಗಳಿಗೆ ಹೆಚ್ಚಿನ ಸವಾಲು" ಎಂದಿದ್ದಾರೆ ಗವಾಸ್ಕರ್.

* ಏಷ್ಯಾಕಪ್ ಫೈನಲ್ ಪಂದ್ಯಕ್ಕೆ ಆಲ್‌ರೌಂಡರ್ ಅಕ್ಷರ್ ಪಟೇಲ್ ಅಲಭ್ಯವಾಗಲಿದ್ದಾರೆ ಎಂದು ಬಿಸಿಸಿಐ ಅಧಿಕೃತವಾಗಿ ಘೋಷಣೆ ಮಾಡಿದೆ. ಅಕ್ಷರ್ ಬದಲಿಗೆ ವಾಶಿಂಗ್ಟನ್ ಸುಂದರ್ ಭಾರತ ತಂಡಕ್ಕೆ ಬದಲಿ ಆಟಗಾರನಾಗಿ ಸೇರ್ಪಡೆಯಾಗಿದ್ದಾರೆ. ಭಾನುವಾರ ನಡೆಯಲಿರುವ ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯಕ್ಕೂ ಮುನ್ನ ಬಿಸಿಸಿಐ ಈ ಮಾಹಿತಿ ಹಂಚಿಕೊಂಡಿದೆ. ಶನಿವಾರ ಬೆಳಗ್ಗೆಯೇ ಈ ಬಗ್ಗೆ ವರದಿಗಳು ಹರದಾಡಿದ್ದವು. ವಾಶಿಂಗ್ಟನ್ ಸುಂದರ್ ಆಲ್‌ರೌಮಡರ್ ಅಕ್ಷರ್ ಪಟೇಲ್ ಅವರ ಬದಲಿಗೆ ಕೂಡಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು.

* ಶ್ರೀಲಂಕಾ ವಿರುದ್ಧದ ಸೂಪರ್ 4 ಹಂತದ ಪಂದ್ಯದ ಬಳಿಕ ಪಾಕಿಸ್ತಾನ ತಂಡದ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಇಬ್ಬರು ಸ್ಟಾರ್ ಆಟಗಾರರ ಮಧ್ಯೆ ವಾಗ್ವಾದ ನಡೆದಿದೆ ಎಂದು ವರದಿಯಾಗಿದೆ. ಸ್ವತಃ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಹಾಗೂ ತಂಡದ ಸ್ಟಾರ್ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಮಧ್ಯೆಯೇ ಮಾತಿನ ಚಕಮಕಿ ನಡೆದಿದೆ ಎಂದು ವರದಿಯಾಗಿದ್ದು ವಿಶ್ವಕಪ್‌ಗೂ ಮುನ್ನ ನಡೆದಿರುವ ಈ ಬೆಳವಣಿಗೆ ದೊಡ್ಡ ಆ ತಂಡಕ್ಕೆ ಮತ್ತಷ್ಟು ಹಿನ್ನಡೆಯುಂಟು ಮಾಡುವ ಸಾಧ್ಯತೆಯಿದೆ.

Story first published: Saturday, September 16, 2023, 23:56 [IST]
Other articles published on Sep 16, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+