For Quick Alerts
ALLOW NOTIFICATIONS  
For Daily Alerts

ಸೆಪ್ಟೆಂಬರ್ 17: ನೀರಜ್ ಚೋಪ್ರಗೆ ತಪ್ಪಿದ ಚಿನ್ನದ ಪದಕ; ಏಷ್ಯಾಕಪ್‌ನಲ್ಲಿ ಭಾರತ ಚಾಂಪಿಯನ್: ಕ್ರೀಡಾ ಲೋಕದ ಇಂದಿನ ಸುದ್ದಿ

* ಶನಿವಾರ, ಸೆಪ್ಟೆಂಬರ್ 16ರಂದು ನಡೆದ 2023ರ ಯುಜೀನ್ ಡೈಮಂಡ್ ಲೀಗ್ ಫೈನಲ್‌ನಲ್ಲಿ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ತಮ್ಮ ಡೈಮಂಡ್ ಟ್ರೋಫಿಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ 6 ಜನರ ಫೈನಲ್‌ನಲ್ಲಿ 83.80 ಮೀಟರ್‌ಗಳ ಅತ್ಯುತ್ತಮ ಪ್ರಯತ್ನದೊಂದಿಗೆ ಎರಡನೇ ಸ್ಥಾನ ಪಡೆದು ರನ್ನರ್-ಅಪ್ ಆದರು.

* ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಗೆಲುವು ಸಾಧಿಸಿದೆ. ಶ್ರೀಲಂಕಾ ವಿರುದ್ಧದ ನಡೆದ ಫೈನಲ್ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಆರ್ಭಟಿಸಿದ ಭಾರತ ಶ್ರೀಲಂಕಾ ತಂಡವನ್ನು ಕೇವಲ 50 ರನ್‌ಗಳಿಗೆ ಆಲೌಟ್ ಮಾಡಿತ್ತು. ಅದಾದ ಬಳಿಕ ಈ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ ದಾಖಲೆಯ ಗೆಲುವು ಸಾಧಿಸಿದೆ. ಟೀಮ್ ಇಂಡಿಯಾ ಪರವಾಗಿ ವೇಗಿ ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ನೀಡಿದ ಆಕ್ರಮಣಕಾರಿ ಪ್ರದರ್ಶನ ಲಂಕಾಗೆ ಸಣ್ಣ ಅವಕಾಶವನ್ನೂ ಇಲ್ಲದಂತೆ ಮಾಡಿತು.

September 17, what happened in sports World: Todays Top sports news and headlines

* ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಬೌಲಿಂಗ್‌ಗೆ ಶ್ರೀಲಂಕಾ ಅಕ್ಷರಶಃ ತತ್ತರಿಸಿ ಹೋಗಿದೆ. ಟೀಮ್ ಇಂಡಿಯಾದ ಆರಂಭಿಕ ಬೌಲಿಂಗ್ ಜೋಡಿಯಾದ ಜಸ್ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಶ್ರೀಲಂಕಾ ತಂಡಕ್ಕೆ ಯಾರೂ ನಿರೀಕ್ಷೆ ಮಾಡದ ಆಘಾತ ನೀಡಿದ್ದಾರೆ. ತಾನು ಎಸೆದ ನಾಲ್ಕನೇ ಓವರ್‌ನಲ್ಲಿ ಸಿರಾಜ್ ಒಂದಲ್ಲ ಎರಡಲ್ಲ ಬರೊಬ್ಬರಿ 4 ವಿಕೆಟ್ ಕಬಳಿಸಿ ಭಾರೀ ಆಘಾತ ನೀಡಿದ್ದಾರೆ. ಈ ಪಂದ್ಯದಲ್ಲಿ ಸಿರಾಜ್ ಒಟ್ಟು 6 ವಿಕೆಟ್ ಕಬಳಿಸಿದರು.

* ರೋಹಿತ್ ಶರ್ಮಾ 2 ಏಷ್ಯಾ ಕಪ್ ಪ್ರಶಸ್ತಿಗಳನ್ನು ಗೆದ್ದ ಮೂರನೇ ಭಾರತೀಯ ನಾಯಕರೆನಿಸಿದರು. ಈ ಹಿಂದೆ ಎಂಎಸ್ ಧೋನಿ ಮತ್ತು ಮೊಹಮ್ಮದ್ ಅಜರುದ್ದೀನ್ ಏಷ್ಯಾ ಕಪ್‌ನಲ್ಲಿ 2 ಬಾರಿ ಪ್ರಶಸ್ತಿಗಳನ್ನು ಗೆದ್ದಿರುವ ಇತರ ಇಬ್ಬರು ಭಾರತೀಯ ನಾಯಕರಾಗಿದ್ದಾರೆ.
ಎಂಎಸ್ ಧೋನಿ - 3 ಫೈನಲ್‌ - 2 ಗೆಲುವು- 2010 ಮತ್ತು 2016
ಮೊಹಮ್ಮದ್ ಅಜರುದ್ದೀನ್ - 2 ಫೈನಲ್‌ 2 ಗೆಲುವು - 1991 ಮತ್ತು 1995
ರೋಹಿತ್ ಶರ್ಮಾ - 2 ಫೈನಲ್‌ - 2 ಗೆಲುವು - 2018 ಮತ್ತು 2023
ದಿಲೀಪ್ ವೆಂಗ್‌ಸರ್ಕರ್ - 1 ಫೈನಲ್‌ - 1 ಗೆಲುವು - 1988
ಸುನಿಲ್ ಗವಾಸ್ಕರ್ - 1 ಫೈನಲ್‌ - 1 ಗೆಲುವು - 1984

* ದಕ್ಷಿಣ ಆಫ್ರಿಕಾದ ಲೆಜೆಂಡರಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅವರು ವಿಶ್ವದ ಅತ್ಯುತ್ತಮ ಫಿನಿಶರ್ ಯಾರೆಂಬುದನ್ನು ಬಹಿರಂಗಪಡಿಸಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ಈ ವಿಷಯದ ಬಗ್ಗೆ ಸುದೀರ್ಘ ಚರ್ಚೆಯನ್ನು ನಡೆಸುತ್ತಿದ್ದಾರೆ ಮತ್ತು ಎರಡು ಹೆಸರುಗಳು ಯಾವಾಗಲೂ ಎದ್ದು ಕಾಣುತ್ತವೆ. ಅವರೆಂದರೆ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಮತ್ತು ಭಾರತದ ಎಂಎಸ್ ಧೋನಿ. ಆದರೆ, ಸ್ವತಃ ಎಬಿ ಡಿವಿಲಿಯರ್ಸ್ ಅವರ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಫಿನಿಶರ್ ಎಂದು ಹೆಸರಿಸಿದ್ದಾರೆ.

* ಭಾರತದ ಭರವಸೆಯ ಶೂಟರ್ ಎಲವೆನಿಲ್ ವಲರಿವನ್ ರಿಯೊದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಸೊಗಸಾದ ಪ್ರದರ್ಶನ ನೀಡುವ ಮೂಲಕ ಮಹಿಳಾ ವಿಭಾಗದಲ್ಲಿ ಚಿನ್ನಕ್ಕೆ ಕೊರಳು ಒಡ್ಡಿದ್ದಾರೆ. ಭಾರತದ ಎಲವೆನಿಲ್ ವಲರಿವನ್ 10 ಮೀಟರ್ ಏರ್ ರೈಫಲ್‌ನಲ್ಲಿ ಚಿನ್ನ ಗೆದ್ದಿದ್ದಾರೆ. ಫೈನಲ್‌ನಲ್ಲಿ 252.2 ಅಂಕ ಗಳಿಸಿ ಮೊದಲ ಸ್ಥಾನ ಪಡೆದರು. ಅವರು ಫೈನಲ್‌ನಲ್ಲಿ 24 ಶೂಟ್ ಗಳಲ್ಲಿ 10.1 ಕ್ಕಿಂತ ಕಡಿಮೆ ಸ್ಕೋರ್ ಮಾಡಲಿಲ್ಲ. ಫ್ರಾನ್ಸ್‌ನ ಒಸಿಯಾನ್ನೆ ಮುಲ್ಲರ್ 251.9 ಅಂಕಗಳೊಂದಿಗೆ ಬೆಳ್ಳಿ ಗೆದ್ದರು. ಚೀನಾದ ಜಾಂಗ್ ಜಿಯಾಲೆ ಕಂಚಿನ ಪದಕ ಪಡೆದರು.

* ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಬಾಂಗ್ಲಾದೇಶ ವಿರುದ್ಧ ಗಾಯಕ್ಕೆ ತುತ್ತಾಗಿರುವ ಅಕ್ಷರ್ ಪಟೇಲ್ ಟೂರ್ನಿಯ ಫೈನಲ್ ಪಂದ್ಯದಿಂದ ಹೊರಬಿದ್ದಿದ್ದರು. ಇದೀಗ ಫೈನಲ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಅಕ್ಷರ್ ಗಾಯದ ವಿಚಾರವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಅಕ್ಷರ್ ಪಟೇಲ್ ಪಟೇಲ್ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಅಲಭ್ಯವಾಗುವ ಸಾಧ್ಯತೆಯಿದೆ. ಈ ಬಗ್ಗೆ ಸ್ವತಃ ನಾಯಕ ರೋಹಿತ್ ಶರ್ಮಾ ಹೇಳಿಕೆ ನೀಡಿದ್ದಾರೆ.

Story first published: Sunday, September 17, 2023, 23:40 [IST]
Other articles published on Sep 17, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+