Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೆಪ್ಟೆಂಬರ್ 2: ಬಹುನಿರೀಕ್ಷಿತ ಪಂದ್ಯಕ್ಕೆ ವಿಲನ್ ಆದ ಮಳೆ; ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಇಶಾನ್, ಪಾಂಡ್ಯ: ಕ್ರೀಡಾ ಲೋಕದ ಇಂದಿನ

* ಏಷ್ಯಾಕಪ್ ಟೂರ್ನಿಯ ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ನೀರಸವಾಗಿ ಅಂತ್ಯ ಕಾಣುವಂತಾಗಿದೆ. ಟೀಮ್ ಇಂಡಿಯಾದ ಬ್ಯಾಟಿಂಗ್ ಮುಕ್ತಾಯದ ಬಳಿಕ ಆಗಮಿಸಿದ ಮಳೆ ಪಂದ್ಯ ಮುಂದುವರಿಯಲು ಅವಕಾಶವನ್ನೇ ನೀಡಲಿಲ್ಲ. ಹೀಗಾಗಿ ಪಂದ್ಯವನ್ನು ಫಲಿತಾಂಶವಿಲ್ಲದೆ ರದ್ದುಗೊಳಿಸಲಾಗಿದೆ.

* ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭದಲ್ಲಿ ಅಗ್ರ ಕ್ರಮಾಂಕದ ಆಟಗಾರರು ಹೀನಾಯ ಪ್ರದರ್ಶನ ನೀಡಿ ಸಂಕಷ್ಟದಲ್ಲಿದ್ದರೂ ಬಳಿಕ ಇಶಾನ್ ಕೀಶನ್ ಹಾಗೂ ಹಾರ್ದಿಕ್ಪಾಂಡ್ಯ ಟೀಮ್ ಇಂಡಿಯಾಗೆ ಆಸರೆಯಾಗಿದ್ದಾರೆ. ಬೃಹತ್ ಶತಕದ ಜೊತಯಾಟ ನೀಡಿದ ಈ ಜೋಡಿ ಭಾರತ 267 ರನ್‌ಗಳ ಸವಾಲಿನ ಗುರಿ ನೀಡಲು ಕಾರಣವಾದರು. 66 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದಾಗ ಜೊತೆಯಾಗಿದ್ದು ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ.

September 2, what happened in sports World: Todays Top sports news and headlines

* ಇವರಿಬ್ಬರು ಭಾರತ ತಂಡವನ್ನು ಸಂಕಷ್ಟದಿಂದ ಪಾರು ಮಾಡುವ ಜವಾಬ್ಧಾರಿಯನ್ನು ವಹಿಸಿಕೊಂಡರು. ಎಚ್ಚರಿಕೆಯಿಂದ ಇನ್ನಿಂಗ್ಸ್‌ಕಟ್ಟಿದ ಈ ಜೋಡಿ 5ನೇ ವಿಕೆಟ್‌ ನಿಡಿದ್ದು 138 ರನ್‌ಗಳ ಭರ್ಜರಿ ಜೊತೆಯಾಟ. ಇಶಾನ್ ಕಿಶನ್ 83 ರನ್‌ಗಳಿಸಿ ಔಟಾಗುವ ಮೂಲಕ ಈ ಜೊತೆಯಾಟ ಬೇರ್ಪಟ್ಟಿತ್ತು. ಆದರೆ ಹಾರ್ದಿಕ್ ಪಾಂಡ್ಯ ತಮ್ಮ ಆಟವನ್ನು ವಿಸ್ತರಿಸಿದರು. 87 ರನ್‌ಗಳಿಸಿದ್ದಾಗ ಹಾರ್ದಿಕ್ ಪಾಂಡ್ಯ ಕೂಡ ತಮ್ಮ ವಿಕೆಟ್ ಕಳೆದುಕೊಂಡರು.

* ಏಷ್ಯಾಕಪ್ ಟೂರ್ನಿಯಲ್ಲಿ ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಸೆಣೆಸಾಟದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಪಂದ್ಯ ಆರಂಭವಾದ ಎರಡನೇ ಎಸೆತದಲ್ಲಿಯೇ ಜೀವದಾನ ದೊರೆಯಿತು. ಪಾಕಿಸ್ತಾನದ ಫಕರ್ ಜಮಾನ್ ಅವರತ್ತ ಬಂದಿದ್ದ ಕ್ಯಾಚನ್ನು ಕೈಚೆಲ್ಲಿದ ಪರಿಣಾಮ ಚೆಂಡು ಬೌಂಡರಿ ಗೆರೆ ದಾಟಿತು.

* ಶನಿವಾರದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕಳಪೆಯಾಗಿ ಔಟಾದ ರೋಹಿತ್ ಶರ್ಮಾ ಅವರು ಕ್ಷಮೆ ಕೇಳಿದರಾ ಎಂದು ಎಲ್ಲರನ್ನೂ ಕಾಡುತ್ತಿದೆ. ರೋಹಿತ್ ಶರ್ಮಾ ಅವರ ಹಳೆಯ ಟ್ವೀಟೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 2010 ಏಪ್ರಿಲ್ 23ರಂದು ರೋಹಿತ್ ಶರ್ಮಾ ಅವರು ಕಳಪೆ ಶಾಟ್‌ಗೆ ಔಟಾಗಿದ್ದಕ್ಕೆ ಕ್ಷಮೆ ಕೇಳಿದ್ದರು. ಇದೀಗ ಅದು ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ.

* ಶನಿವಾರದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕಳಪೆಯಾಗಿ ಔಟಾದ ರೋಹಿತ್ ಶರ್ಮಾ ಅವರು ಕ್ಷಮೆ ಕೇಳಿದರಾ ಎಂದು ಎಲ್ಲರನ್ನೂ ಕಾಡುತ್ತಿದೆ. ರೋಹಿತ್ ಶರ್ಮಾ ಅವರ ಹಳೆಯ ಟ್ವೀಟೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 2010 ಏಪ್ರಿಲ್ 23ರಂದು ರೋಹಿತ್ ಶರ್ಮಾ ಅವರು ಕಳಪೆ ಶಾಟ್‌ಗೆ ಔಟಾಗಿದ್ದಕ್ಕೆ ಕ್ಷಮೆ ಕೇಳಿದ್ದರು. ಇದೀಗ ಅದು ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ.

* ಏಷ್ಯನ್ ಹಾಕಿ ಫೈವ್ಸ್ ವಿಶ್ವಕಪ್ ಅರ್ಹತಾ ಸುತ್ತಿನ ಫೈನಲ್ ಪಂದ್ಯದಲ್ಲಿ ಭಾರತ ಪಾಕಿಸ್ತಾನ ತಂಡವನ್ನು ಎದುರಿಸಿ ಜಯಭೇರಿ ಬಾರಿಸಿದೆ. ಈ ಮೂಲಕ ಏಷ್ಯನ್ ಫೈವ್ಸ್ ಚಾಂಪಿಯನ್‌ಶಿಪ್ ಗೆದ್ದುಕೊಂಡಿದೆ. ಎರಡು ತಂಡಗಳು ಕೂಡ ತಲಾ 4 ಗೋಲುಗಳನ್ನು ಬಾರಿಸಿ ಪಂದ್ಯದ ಮುಕ್ತಾಯದಲ್ಲಿ ಸಮಬಲ ಸಾಧಿಸಿದ್ದ ಕಾರಣ ಪೆನಾಲ್ಟಿ ಶೂಟೌಟ್ ಮೂಲಕ ಫಲಿತಾಂಶ ನಿರ್ಧರಿಸಲಾಗಿದೆ. ಈ ಫೆನಾಲ್ಟಿ ಶೂಟೌಟ್‌ನಲ್ಲಿ ಭಾರತ ಪಾಕಿಸ್ತಾನ ತಂಡವನ್ನು 6-4 ಅಂತರದಿಂದ ಮಣಿಸಿದೆ. ಇದೇ ಮೊದಲ ಬಾರಿಗೆ ಭಾರತ ಹಾಕಿ ಫೈವ್ಸ್ ಮಾದರಿಯಲ್ಲಿ ಮೂರು ಮುಖಾಮುಖಿಯಲ್ಲಿಯೂ ಪಾಕಿಸ್ತಾನ ತಂಡವನ್ನು ಮಣಿಸಿದ ಸಾಧನೆ ಮಾಡಿದೆ. ಆದರೆ ಫೈನಲ್ ಪಂದ್ಯ ಭಾರತಕ್ಕೆ ಸವಾಲಿನಿಂದ ಕೂಡಿತ್ತು ಎನ್ನುವುದು ಕೂಡ ನಿಜ. ಮೊದಲಾರ್ಧ ಮುಕ್ತಾಯದ ಸಂದರ್ಭದಲ್ಲಿ ಭಾರತ 2-4 ಅಂತರದಿಂದ ಹಿನ್ನಡೆಯಲ್ಲಿತ್ತು. ಆದರೆ ಅದಾದ ಬಳಿಕ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿ ಪಂದ್ಯವನ್ನು ಸಮಬಲಕ್ಕೆ ತಂದು ನಿಲ್ಲಿಸುವಲ್ಲಿ ಯಶಸ್ವಿಯಾಗಿತ್ತು.

Story first published: Saturday, September 2, 2023, 23:58 [IST]
Other articles published on Sep 2, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+