For Quick Alerts
ALLOW NOTIFICATIONS  
For Daily Alerts

ಸೆಪ್ಟೆಂಬರ್ 26: ಏಷ್ಯಾಡ್‌ನಲ್ಲಿ ಮುಂದುವರಿದ ಪದಕ ಬೇಟೆ: ಅಂತಿಮ ಪಂದ್ಯಕ್ಕೆ ಭಾರತ ಸಜ್ಜು: ಕ್ರೀಡಾ ಲೋಕದ ಇಂದಿನ ಸುದ್ದಿ

* ವಿಶ್ವಕಪ್ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಲು ಸಜ್ಜಾಗಿದ್ದ ಪಾಕಿಸ್ತಾನ ತಂಡಕ್ಕೆ ವೀಸಾ ದೊರೆಯದ ಕಾರಣ ಪ್ರಯಾಣ ತಡವಾಗಿತ್ತು. ಆದರೆ ಸೋಮವಾರ ರಾತ್ರಿ ಪಾಕಿಸ್ತಾನ ಕ್ರಿಕೆಟ್ ತಂಡದ ಸದಸ್ಯರಿಗೆ ಭಾರತ ವೀಸಾ ನೀಡಿದೆ. ಈ ಮೂಲಕ ಈ ವಿಚಾರವಾಗಿದ್ದ ಗೊಂದಲ ಅಂತ್ಯವಾಗಿದೆ. ಎಸ್‌ಪಿಎನ್ ವರದಿಯ ಪ್ರಕಾರ ಪಾಕಿಸ್ತಾನ ತಂಡಕ್ಕೆ ವೀಸಾ ವಿತರಣೆಯಾಗಿರುವ ವಿಚಾರವನ್ನು ಐಸಿಸಿ ಕೂಡ ಖಚಿತಪಡಿಸಿದೆ ಎನ್ನಲಾಗಿದೆ.

* ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಪುರುಷರ ಹಾಕಿ ತಂಡದ ಗೆಲುವಿನ ಓಟ ಮುಂದುವರಿದಿದೆ. ಪೂಲ್ 'ಎ'ಯ ಎರಡನೇ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಭಾರತ ಗೋಲುಗಳ ಸುರಿಮಳೆಗೈದಿದ್ದು ಬರೊಬ್ಬರಿ 16-1 ಗೋಲುಗಳ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿದೆ. ಈ ಮೂಲಕ ಏಷ್ಯನ್ ಗೇಮ್ಸ್‌ನ ಕೇವಲ ಎರಡು ಪಂದ್ಯಗಳಲ್ಲಿಯೇ ಭಾರತ ಹಾಕಿ ತಂಡ ಒಟ್ಟು 32 ಗೋಲುಗಳನ್ನು ಗಳಿಸಿದಂತಾಗಿದೆ.

September 26, what happened in sports World: Todays Top sports news and headlines

* ಟೀಮ್ ಇಂಡಿಯಾ ವಿಶ್ವಕಪ್ ಟೂರ್ನಿಗೆ ಭರ್ಜರಿಯಾಗಿ ಸಿದ್ಧತೆ ನಡೆಸಿದೆ. ಏಷ್ಯಾಕಪ್ ಚಾಂಪಿಯನ್ ಪಟ್ಟಕ್ಕೇರಿರುವ ಭಾರತ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಕೂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮಣಿಸುವಲ್ಲಿ ಯಶಸ್ವಿಯಾಗಿದೆ. ಇದರ ಜೊತೆಗೆ ಟೀಮ್ ಇಂಡಿಯಾ ಏಕದಿನ ಮಾದರಿಯಲ್ಲಿ ನಂಬರ್ 1 ಸ್ಥಾನಕ್ಕೇರಿದ್ದು ವಿಶ್ವಕಪ್‌ ಗೆಲ್ಲುವ ಅತ್ಯಂತ ನೆಚ್ಚಿನ ತಂಡ ಎನಿಸಿಕೊಂಡಿದೆ. ಇಷ್ಟೆಲ್ಲಾ ಸಕಾರಾತ್ಮಕ ವಿಚಾರಗಳ ಹೊರತಾಗಿಯೂ ಭಾರತ ನಿರಾಳವಾಗುವಂತಿಲ್ಲ. ತಂಡದಲ್ಲಿ ಹೊಸದೊಂದು ಚಿಂತೆ ಕಾರಣವಾಗಿದೆ. ಅದುವೇ ವಿಕೆಟ್ ಕೀಪಿಂಗ್. ರಿಷಬ್ ಪಂತ್ ಅಲಭ್ಯತೆಯ ಹಿನ್ನೆಲೆಯಲ್ಲಿ ಕೆಎಲ್ ರಾಹುಲ್ ತಂಡದ ಮೊದಲ ಆದ್ಯತೆಯ ವಿಕೆಟ್ ಕೀಪರ್ ಆಗಿ ಗುರುತಿಸಿಕೊಂಡಿದ್ದಾರೆ. ಬ್ಯಾಟಿಂಗ್‌ನಲ್ಲಿ ತನ್ನ ಉತ್ತಮ ಪ್ರದರ್ಶನವನ್ನು ರಾಹುಲ್ ನೀಡುವ ಮೂಲಕ ತಂಡದ ಬಲವನ್ನು ಹೆಚ್ಚಿಸಿದರೂ ಕೂಡ ವಿಕೆಟ್ ಹಿಂದೆ ಅವರ ಪ್ರದರ್ಶನ ಉತ್ತಮವಾಗಿಲ್ಲ. ಆಸಿಸ್ ವಿರುದ್ಧದ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಅಭಿಮಾನಿಗಳಲ್ಲಿ ಹೊಸ ಕಳವಳಕ್ಕೆ ಕಾರಣವಾಗಿದೆ.

* ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಮತ್ತೊಂದು ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದೆ. ಭಾರತದ ನೇಹಾ ಠಾಕೂರ್ ವನಿತೆಯರ ಡಿಂಗಿ ILCA4 ಈವೆಂಟ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ಇದು ಸೈಲಿಂಗ್‌ನಲ್ಲಿ ಭಾರತದ ಮೊದಲ ಪದಕವಾಗಿದ್ದು ಹ್ಯಾಂಗ್‌ಝೌ ಗೇಮ್ಸ್‌ನಲ್ಲಿ ಒಟ್ಟಾರೆಯಾಗಿ ಭಾರತದ 12ನೇ ಪದಕವಾಗಿದೆ.

* ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 2023ರ ಏಷ್ಯನ್ ಗೇಮ್ಸ್‌ನ ವಿಂಡ್‌ಸರ್ಫರ್ ಆರ್‌ಎಸ್:ಎಕ್ಸ್‌ ಸ್ಪರ್ಧೆಯಲ್ಲಿ ಭಾರತದ ಇಯಾಬಾದ್ ಅಲಿ ಅವರು ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಮಂಗಳವಾರ, ಸೆಪ್ಟೆಂಬರ್ 26ರಂದು ನಿಂಗ್ಬೋದಲ್ಲಿರುವ ಎನ್‌ಬಿಎಕ್ಸ್ ಸೇಲಿಂಗ್ ಸೆಂಟರ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್ ಪುರುಷರ ಸೈಲಿಂಗ್ ವಿಂಡ್‌ಸರ್ಫರ್ ಆರ್‌ಎಸ್:ಎಕ್ಸ್ ಸ್ಪರ್ಧೆಯಲ್ಲಿ ಇಯಾಬಾದ್ ಅಲಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟರು.

* ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಈಕ್ವೆಸ್ಟ್ರಿಯನ್(ಕುದುರೆ ಸವಾರಿ) ವಿಭಾಗದಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದೆ. 1982ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಬಳಿಕ ಇದೇ ಮೊದಲ ಬಾರಿಗೆ ಭಾರತ ಈಕ್ವೆಸ್ಟ್ರಿಯನ್‌ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡ ಸಾಧನೆ ಮಾಡಿದ್ದು ಬರೊಬ್ಬರಿ 41 ವರ್ಷಗಳ ಚಿನ್ನದ ಪದಕದ ಕನಸನ್ನು ನನಸಾಗಿಸಿಕೊಂಡಿದೆ. ಈಕ್ವೆಸ್ಟ್ರಿಯನ್ ಟೀಮ್ ಡ್ರೆಸ್ಸೇಜ್ ವಿಭಾಗದಲ್ಲಿ ಭಾರತ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.

* ಸೋಮವಾರ, ಸೆಪ್ಟೆಂಬರ್ 25ರಂದು ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 2023ರ ಏಷ್ಯನ್ ಗೇಮ್ಸ್‌ನ ಮಹಿಳಾ ಕ್ರಿಕೆಟ್ ಪಂದ್ಯಾವಳಿಯ ಫೈನಲ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡವು ಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು 19 ರನ್‌ಗಳಿಂದ ಸೋಲಿಸಿತು. ಈ ಮೂಲಕ ಭಾರತ ಮಹಿಳಾ ತಂಡವು ಕ್ರಿಕೆಟ್‌ನಲ್ಲಿ ತನ್ನ ಚೊಚ್ಚಲ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿತು. ರನ್ನರ್-ಅಪ್ ಶ್ರೀಲಂಕಾ ಮಹಿಳಾ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು. ಇದೀಗ ಐಸಿಸಿ ಮಹಿಳಾ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಭಾರತ ತಂಡದ ಉಪನಾಯಕಿ ಹಾಗೂ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಅವರು ಅಗ್ರ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

* ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಏಕದಿನ ಸರಣಿಯ ಮೂರನೇ ಪಂದ್ಯ ಬುಧವಾರ ನಡೆಯಲಿದೆ. ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಹಾಗೂ ಮೊಹಾಲಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಅದ್ಭುತ ಗೆಲುವು ಸಾಧಿಸಿದ್ದು ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಹೀಗಾಗಿ ಕೊನೆಯ ಪಂದ್ಯದಲ್ಲಿ ಗೆದ್ದು ವೈಟ್‌ವಾಶ್ ಮಾಡುವ ಲೆಕ್ಕಾಚಾರದಲ್ಲಿ ಭಾರತ ತಂಡವಿದ್ದರೆ ವಿಶ್ವಕಪ್‌ಗೂ ಮುನ್ನ ಈ ಅವಮಾನದಿಂದ ತಪ್ಪಿಸಿಕೊಳ್ಳುವ ಸರ್ವ ಪ್ರಯತ್ನವನ್ನು ಆಸಿಸ್ ಪಡೆ ನಡೆಸಲಿದೆ.

Story first published: Tuesday, September 26, 2023, 21:27 [IST]
Other articles published on Sep 26, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+