* ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್‌ನಲ್ಲಿ ನೇಪಾಳ ತಂಡ ವಿಶ್ವದಾಖಲೆಗಳನ್ನೆಲ್ಲಾ ಮುರಿದು ಹೊಸ ಇತಿಹಾಸ ಬರೆದಿದೆ. ಮಂಗೋಲಿಯಾ ವಿರುದ್ಧದ ಪಂದ್ಯದಲ್ಲಿ ನೇಪಾಳ ತಂಡದ ಬ್ಯಾಟರ್‌ಗಳು ಅಬ್ಬರಿಸಿದ್ದು 20 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಬರೊಬ್ಬರಿ 314 ರನ್ ಗಳಿಸಿ ವಿಶ್ವ ದಾಖಲೆ ಬರೆದಿದೆ. ಟಿ20I ಇತಿಹಾಸದಲ್ಲಿ ತಂಡವೊಂದು 300 ರನ್ ದಾಟಿದ್ದು ಇದೇ ಮೊದಲು. ನೇಪಾಳದ ಬ್ಯಾಟ್ಸ್‌ಮನ್‌ಗಳು ದುರ್ಬಲ ಮಂಗೋಲಿಯಾ ಬೌಲರ್‌ಗಳನ್ನು ಅಕ್ಷರಶಃ ಧ್ವಂಸಮಾಡಿದ್ದಾರೆ.
* ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಬುಧವಾರವೂ ಅದ್ಭುತ ಆರಂಭವನ್ನು ಪಡೆದುಕೊಂಡಿದೆ. ಶೂಟಿಂಗ್‌ನಲ್ಲಿ ಭಾರತದ ಮಹಿಳೆಯರ ತಂಡ ಚಿನ್ನದ ಪದಕ ಗೆದ್ದುಕೊಂಡಿದ್ದು ಮಹತ್ವದ ಸಾಧನೆ ಮಾಡಿದೆ. ಮಹಿಳೆಯದ 25 ಮೀಟರ್ ತಂಡ ವಿಭಾಗದಲ್ಲಿ ಭಾರತ ಈ ಚಿನ್ನದ ಪದಕ ಗೆದ್ದುಕೊಂಡಿದ್ದು ಮನು ಭಾಕರ್, ಇಶಾ ಸಿಂಗ್, ಮತ್ತು ರಿದಮ್ ಸಂಗ್ವಾನ್ ಅವರನ್ನು ಒಳಗೊಂಡ ಭಾತ ತಮಡ ಈ ಸಾಧನೆ ಮಾಡಿದೆ.

* ಏಷ್ಯನ್ ಗೇಮ್ಸ್‌ನಲ್ಲಿ ಬುಧವಾರ ಭಾರತದ ಪದಕ ಬೇಟೆ ಭರ್ಜರಿಯಾಗಿ ಮುಂದುವರಿದಿದೆ. ಮಹಿಳೆಯರ 50 ಮೀ. ರೈಫಲ್ 3P ಫೈನಲ್‌ನಲ್ಲಿ ಭಾರತದ ಇಬ್ಬರು ಶೂಟರ್‌ಗಳು ಪದಕ ಗೆದ್ದಿದ್ದಾರೆ. ಸಿಫ್ಟ್ ಕೌರ್ ಸಮ್ರಾ ಈ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದರೆ ಆಶೀ ಚೌಕ್ಸೀ ಕಂಚಿನ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ. ಸಿಫ್ಟ್ ಕೌರ್ ಸಮ್ರಾ ಈ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಈ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡ ಸಾಧನೆ ಮಾಡಿದಂತಾಗಿದೆ.
* ಬುಧವಾರ, ಸೆಪ್ಟೆಂಬರ್ 27ರಂದು ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 2023ರ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 25 ಮೀ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಇಶಾ ಸಿಂಗ್ ಬೆಳ್ಳಿ ಪದಕವನ್ನು ಗೆದ್ದು ಗೌರವ ತಂದಿದ್ದಾರೆ. ಅರ್ಹತೆಯಲ್ಲಿ ಅಗ್ರಸ್ಥಾನದಲ್ಲಿದ್ದ ಮತ್ತು ಚಿನ್ನದ ಪದಕದ ಫೇವರಿಟ್ ಆಗಿದ್ದ ಟೊಕಿಯೋ ಒಲಿಂಪಿಯನ್ ಮನು ಭಾಕರ್ ಫೈನಲ್‌ನಲ್ಲಿ 5ನೇ ಸ್ಥಾನ ಗಳಿಸಿ ನಿರಾಸೆ ಮೂಡಿಸಿದರು.
* ಬುಧವಾರ, ಸೆಪ್ಟೆಂಬರ್ 27ರಂದು ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಮುಂದುವರೆದಿದ್ದು, ಇಂದು 8 ಪದಕಗಳಿಗೆ ಕೊರಳೊಡ್ಡಿದ್ದಾರೆ. 25 ವರ್ಷದ ಭಾರತೀಯ ಅನಂತ್ ಜೀತ್ ಸಿಂಗ್ ನರುಕಾ ಅವರು ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಬುಧವಾರ ಪುರುಷರ ಸ್ಕೀಟ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.
* ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಮುಂಬರುವ ಭಾರತದಲ್ಲೇ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಬೆದರಿಕೆ ಸಂದೇಶವನ್ನು ನೀಡಿದ್ದಾನೆ ಎಂದು ವರದಿಯಾಗಿದೆ. ನಿರ್ದಿಷ್ಟವಾಗಿ, ಅಕ್ಟೋಬರ್ 5ರಂದು ಗುಜರಾತ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯವನ್ನು ಗುರಿಯಾಗಿಸಿಕೊಂಡು ಖಲಿಸ್ತಾನಿ ಉಗ್ರ ಬೆದರಿಕೆಯೊಡ್ಡಿದ್ದಾನೆ ಎನ್ನಲಾಗಿದೆ.
* ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಯುವ ವೇಗಿ ನವೀನ್-ಉಲ್-ಹಕ್ ಅವರು ಭಾರತದಲ್ಲಿ ನಡೆಯಲಿರುವ 2023ರ ವಿಶ್ವಕಪ್ ಮುಕ್ತಾಯದ ನಂತರ, ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. 24 ವರ್ಷದ ಯುವ ಬೌಲರ್ ನವೀನ್-ಉಲ್-ಹಕ್ ವಿಶ್ವಕಪ್ ನಂತರ ತನ್ನ ನಿವೃತ್ತಿ ನಿರ್ಧಾರವನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾನೆ.
* ಬುಧವಾರ, ಸೆಪ್ಟೆಂಬರ್ 27ರಂದು ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆತಿಥೇಯ ಭಾರತ ತಂಡದ ವಿರುದ್ಧ ಪ್ರವಾಸಿ ಆಸ್ಟ್ರೇಲಿಯಾ ತಂಡವು ಭರ್ಜರಿ ಗೆಲುವು ದಾಖಲಿಸುವ ಮೂಲಕ ಗೆಲುವಿನ ಹಳಿಗೆ ಮರಳಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ್ದ ಆಸ್ಟ್ರೇಲಿಯಾ ತಂಡ ನಾಲ್ವರು ಬ್ಯಾಟ್ಸ್‌ಮನ್‌ಗಳ ಭರ್ಜರಿ ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 352 ರನ್‌ಗಳನ್ನು ಕಲೆಹಾಕಿತ್ತು.
* ಭಾರತದಲ್ಲಿ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯುವ 2023ರ ಐಸಿಸಿ ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಗೆ ಕೆಲವೇ ದಿನಗಳಲ್ಲಿ ಚಾಲನೆ ದೊರೆಯಲಿದೆ. ಸೆಪ್ಟೆಂಬರ್ 29ರಿಂದ ಅಭ್ಯಾಸ ಪಂದ್ಯಗಳು ಆರಂಭವಾಗಲಿದ್ದು, ಭಾರತದಲ್ಲಿ ಒಂದೂವರೆ ತಿಂಗಳ ಕಾಲ ಐಸಿಸಿ ಕ್ರಿಕೆಟ್ ಹಬ್ಬ ನಡೆಯಲಿದೆ. ಇದಕ್ಕಾಗಿ ಈಗಾಗಲೇ ನೆದರ್ಲ್ಯಾಂಡ್ಸ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಭಾರತಕ್ಕೆ ಬಂದಿಳಿದಿವೆ.