* ಏಷ್ಯನ್ ಗೇಮ್ಸ್‌ನಲ್ಲಿ ಗುರುವಾರವೂ ಭಾರತಕ್ಕೆ ಅದ್ಭುತ ಆರಂಭ ದೊರೆತಿದೆ. ಶೂಟಿಂಗ್ ವಿಭಾಗದಲ್ಲಿ ಭಾರತ ಮತ್ತೊಂದು ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ ಗಮನಾರ್ಹ ಸಾಧನೆ ಮಾಡಿದೆ. 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಭಾರತದ ಪುರುಷರ ತಂಡ ಚಿನ್ನದ ಪದಕ ಗೆದ್ದುಕೊಂಡಿದೆ. ಇನ್ನು ಮತ್ತೊಂದೆಡೆ ವುಶು ಸ್ಪರ್ಧೆಯಲ್ಲಿ ಭಾರತದ ರೋಶಿಬಿನಾ ದೇವೆ ನೌರೆಮ್ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.
* ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು ಪದಕಗಳ ಭರ್ಜರಿ ಬೇಟೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಭಾರತ ಪುರುಷರ ಕ್ರಿಕೆಟ್ ತಂಡ ಕುಡ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದೆ. ಈಗಾಗಲೇ ಮಹಿಳೆಯ ತಂಡ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರೆ ಪುರುಷರ ತಂಡ ಇಂದು ಚೀನಾದ ಹ್ಯಾಂಗ್‌ಝೌಗೆ ಪ್ರಯಾಣ ಬೆಳೆಸಿದೆ. ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಋತುರಾಜ್ ಗಾಯಕ್‌ವಾಡ್ ನೇತೃತ್ವದಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ. ಹೀಗಾಗಿ ಋತು ನೇತೃತ್ವದ ತಂಡ ಇದೀಗ ಚೀನಾಗೆ ತನ್ನ ಪ್ರಯಾಣವನ್ನು ಬೆಳೆಸಿದೆ.

* ವಿಶ್ವಕಪ್‌ಗೂ ಮುನ್ನ ಭಾರತ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯ್ಳ ಏಕದಿನ ಸರಣಿಯನ್ನು ಯಶಸ್ವಿಯಾಗಿ ಗೆದ್ದುಕೊಂಡಿದೆ. ಅಂತಿಮ ಪಂದ್ಯದಲ್ಲಿ ಸೋಲಿನ ಹೊರತಾಗಿಯೂ ಈ ಸರಣಿಯಲ್ಲಿ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡಲು ಯಶಸ್ವಿಯಾಗಿದ್ದು 2-1 ಅಂತರದಿಂದ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಸರಣಿಯ ಮುಕ್ತಾಯದ ಬಳಿಕ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಮಾತನಾಡಿದ್ದು ತಂಡದ ಪ್ರದರ್ಶನದ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.
* ಬಾಂಗ್ಲಾದೇಶ ಕ್ರಿಕೆಟ್ ತಂಡದ ಜಗಳ ಈಗ ಬೀದಿಗೆ ಬಿದ್ದಿದೆ. ತಂಡದ ಅನುಭವಿ ಆಟಗಾರ ತಮಿಮ್ ಇಕ್ಬಾಲ್ ಅವರನ್ನು ವಿಶ್ವಕಪ್ ತಂಡದಿಂದ ಹೊರಗಿಟ್ಟ ಬಳಿಕ ತಮಿಮ್ ಇಕ್ಬಾಲ್ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ವಿರುದ್ಧವೇ ಹರಿಹಾಯ್ದಿದ್ದರು. ಇದೀಗ ತಂಡದ ನಾಯಕ ಶಕೀಬ್ ಅಲ್ ಹಸನ್ ಅನುಭವಿ ಆಟಗಾರನ ವಿರುದ್ಧ ವಾಕ್ಸಮರ ನಡೆಸಿದ್ದಾರೆ. ಅನುಭವಿ ಆಟಗಾರಗಿ ತಂಡದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಮನಸ್ಥಿತಿಯನ್ನು ತಮಿಮ್ ಇಕ್ಬಾಲ್ ಹೊಂದಿಲ್ಲ ಎಂದು ಶಕೀಬ್ ಕಿಡಿಕಾರಿದ್ದಾರೆ. ಆತ ತಂಡದ ಆಟಗಾರನಾಗಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
* ಕುದುರೆ ಸವಾರಿ (ಡ್ರೆಸ್ಸೇಜ್) ವೈಯಕ್ತಿಕ ಸ್ಪರ್ಧೆಯಲ್ಲಿ ಭಾರತದ ಅನುಷ್ ಅಗರ್ವಾಲಾ ಅವರು ಐತಿಹಾಸಿಕ ಕಂಚಿನ ಪದಕ ಗೆಲ್ಲುವ ಮೂಲಕ ಭಾರತವು ಹ್ಯಾಂಗ್‌ಝೌನಲ್ಲಿನ ಟಿಎಲ್ ಈಕ್ವೆಸ್ಟ್ರಿಯನ್ ಸೆಂಟರ್‌ನಲ್ಲಿ ಇತಿಹಾಸ ರಚಿಸಿತು. ಗುರುವಾರ, ಸೆಪ್ಟೆಂಬರ್ 28ರಂದು ನಡೆದ 2023ರ ಏಷ್ಯನ್ ಗೇಮ್ಸ್ 15 ಸದಸ್ಯರ ಫೈನಲ್‌ನಲ್ಲಿ 24 ವರ್ಷದ ಅನುಷ್ ಅಗರ್ವಾಲಾ ಕುದುರೆ ಎಟ್ರೋ ಪ್ರಭಾವಶಾಲಿ ಪ್ರದರ್ಶನ ನೀಡಿತು.
* ವಿಶ್ವಕಪ್ ಟೂರ್ನಿಗೆ ಸಿದ್ಧತೆ ಆರಂಭಿಸಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ನಾಯಕ ಟೆಂಬಾ ಬವುಮಾ ವೈಯಕ್ತಿಕ ಕಾರಣಗಳಿಂದಾಗಿ ತವರಿಗೆ ಮರಳಿದ್ದು ಇದು ತಂಡದ ವಿಶ್ವಕಪ್ ಸಿದ್ಧತೆಗೆ ಹಿನ್ನಡೆಯಾಗಬಹುದು ಎನ್ನಲಾಗಿದೆ. ವಿಶ್ವಕಪ್ ಟೂರ್ನಿಗೂ ಮುನ್ನ ನಡೆಯಲಿರುವ ಎರಡು ಅಭ್ಯಾಸ ಪಂದ್ಯಗಳಿಗೂ ಬವುಮಾ ಅಲಭ್ಯವಾಗಲಿದ್ದಾರೆ. ಆದರೆ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದ ವೇಳೆಗೆ ಅವರು ಮತ್ತೆ ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆಯಿದೆ.
* 2023ರ ಏಕದಿನ ವಿಶ್ವಕಪ್‌ಗೆ ಅಂತಿಮ ತಂಡಗಳನ್ನು ಐಸಿಸಿಗೆ ಸಲ್ಲಿಸಲು ಇಂದು (ಗುರುವಾರ, ಸೆಪ್ಟೆಂಬರ್ 28) ಕೊನೆಯ ದಿನವಾಗಿದ್ದು, ಕೊನೆಯ ಕ್ಷಣದಲ್ಲಿ ಭಾರತ ತಂಡವು ಒಂದು ಮಹತ್ವದ ಬದಲಾವಣೆಗೆ ಕೈ ಹಾಕಿದೆ. ಎಡಗೈ ಸ್ಪಿನ್ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರು ತಮ್ಮ ಗಾಯದಿಂದ ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವ ಸಾಧ್ಯತೆಯಿರುವುದರಿಂದ, 2023ರ ವಿಶ್ವಕಪ್‌ಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಬದಲಾವಣೆ ಮಾಡಿದೆ. ಅಕ್ಷರ್ ಪಟೇಲ್ ಬದಲಿಗೆ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ತಂಡದಲ್ಲಿ ಆಯ್ಕೆ ಮಾಡಲಾಗಿದೆ.