ಸೆಪ್ಟೆಂಬರ್ 29: ವಿಶ್ವಕಪ್ ಅಭ್ಯಾಸ ಪಂದ್ಯ ಆರಂಭ; ಏಷ್ಯಾಡ್‌ನಲ್ಲಿ ಮುಂದುವರಿದ ಭಾರತದ ಪದಕ ಬೇಟೆ: ಕ್ರೀಡಾ ಲೋಕದ ಇಂದಿನ ಸುದ್ದಿ
* ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 2023 ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯರ ಪದಕ ಬೇಟೆ ಮುಂದುವರೆದಿದೆ. ಪುರುಷರ 50 ಮೀ ರೈಫಲ್ ತಂಡದ ಸ್ಪರ್ಧೆಯಲ್ಲಿ ಭಾರತೀಯ ತಂಡವು ಅಗ್ರಸ್ಥಾನ ಪಡೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದೆ. ಶುಕ್ರವಾರ, ಸೆಪ್ಟೆಂಬರ್ 29ರಂದು ಐಶ್ವರಿ ಪ್ರತಾಪ್ ಸಿಂಗ್ ತೋಮರ್, ಸ್ವಪ್ನಿಲ್ ಕುಸಾಲೆ ಮತ್ತು ಅಖಿಲ್ ಶೆಯೋರಾನ್ ಅವರ 50 ಮೀಟರ್ ರೈಫಲ್ 3Ps ಪುರುಷರ ಭಾರತ ತಂಡವು ಚಿನ್ನದ ಪದಕವನ್ನು ಗೆದ್ದುಕೊಂಡಿತು. 2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಶೂಟಿಂಗ್‌ನಲ್ಲಿ ಇದು 15ನೇ ಪದಕ ಮತ್ತು 7ನೇ ಚಿನ್ನವಾಗಿದೆ.
* ಶುಕ್ರವಾರ, ಸೆಪ್ಟೆಂಬರ್ 29ರಂದು 18 ವರ್ಷದ ಶೂಟರ್ ಇಶಾ ಸಿಂಗ್ ನೇತೃತ್ವದ ಭಾರತ ಮಹಿಳಾ 10 ಮೀಟರ್ ಏರ್ ಪಿಸ್ತೂಲ್ ತಂಡ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿತು. ಭಾರತದ 14ನೇ ಶೂಟಿಂಗ್ ಪದಕವಾಯಿತು. ಇದಾದ ಬಳಿಕ ಪುರುಷರ 50 ಮೀ ರೈಫಲ್ ತಂಡದ ಸ್ಪರ್ಧೆಯಲ್ಲಿ ಭಾರತೀಯ ತಂಡವು ಅಗ್ರಸ್ಥಾನ ಪಡೆದು ಚಿನ್ನದ ಪದಕಕ್ಕೆ ಕೊರಳೊಡ್ಡಿತು.

* ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 2023ರ ಏಷ್ಯನ್ ಗೇಮ್ಸ್‌ನ ಫುಟ್ಬಾಲ್ ಪಂದ್ಯಾವಳಿಯಲ್ಲಿ ಸುನಿಲ್ ಛೆಟ್ರಿ ನಾಯಕತ್ವದ ಭಾರತ ಪುರುಷರ ತಂಡವು 16ರ ಘಟ್ಟದಲ್ಲಿ ಸೌದಿ ಅರೇಬಿಯಾ ವಿರುದ್ಧ 0-2 ಅಂತರದಿಂದ ಸೋತು ಹೊರಬಿದ್ದಿದೆ. ಇದೀಗ ಭಾರತೀಯ ಫುಟ್ಬಾಲ್ ತಂಡದ ಕೋಚ್ ಇಗೊರ್ ಸ್ಟಿಮ್ಯಾಕ್ ಅವರು 2023ರ ಏಷ್ಯನ್ ಗೇಮ್ಸ್‌ಗೆ ಮುಂಚಿತವಾಗಿ ಭಾರತ ತಂಡಕ್ಕೆ ತಯಾರಿ ಸಮಯದ ಕೊರತೆಯನ್ನು ಮತ್ತೊಮ್ಮೆ ಟೀಕಿಸಿದರು.
* ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 2023ರ ಏಷ್ಯನ್ ಗೇಮ್ಸ್‌ನ ಶೂಟಿಂಗ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕದ ಬೇಟೆ ಮುಂದುವರಿದಿದ್ದು, ಶುಕ್ರವಾರ ನಡೆದ 10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ವೈಯಕ್ತಿಕ ಫೈನಲ್‌ನಲ್ಲಿ 17 ವರ್ಷದ ಪಾಲಕ್ ದಾಖಲೆಯ ಚಿನ್ನದ ಪದಕಕ್ಕೆ ಕೊರಳೊಡ್ಡಿದರೆ, ಅದೇ ವಿಭಾಗದಲ್ಲಿ 18 ವರ್ಷದ ಇಶಾ ಸಿಂಗ್ ಬೆಳ್ಳಿ ಪದಕ ಗೆದ್ದರು.
* ಅಕ್ಟೋಬರ್ 5ರಿಂದ ಪ್ರಾರಂಭವಾಗುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗಾಗಿ ಪಾಕಿಸ್ತಾನ ತಂಡ 7 ವರ್ಷಗಳ ಬಳಿಕ ಭಾರತಕ್ಕೆ ಭೇಟಿ ನೀಡಿದೆ. ಈ ಮಧ್ಯೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಿರ್ವಹಣಾ ಸಮಿತಿ ಅಧ್ಯಕ್ಷ ಝಾಕಾ ಅಶ್ರಫ್ ತಮ್ಮ ಹೇಳಿಕೆ ಮೂಲಕ ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಪಾಕಿಸ್ತಾನ ಆಟಗಾರರಿಗಾಗಿ ಪಿಸಿಬಿಯ ಹೊಸ ಒಪ್ಪಂದಗಳ ಬಗ್ಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ, ವಿಶ್ವಕಪ್ ಪಂದ್ಯಾವಳಿಗೆ 'ದುಷ್ಮನ್ ಮುಲ್ಕ್' (ಶತ್ರು ದೇಶ) ಗೆ ಹೋಗಿದ್ದಾರೆ ಎಂದು ಝಾಕಾ ಅಶ್ರಫ್ ಮಾತನಾಡಿದ್ದಾರೆ. ಅವರ ಹೇಳಿಕೆಯು ಭಾರತವನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಲಾಗಿದೆ.
* ವಿಶ್ವಕಪ್ ಟೂರ್ನಿಯ ಆರಂಭಕ್ಕೆ ಇರುವುದು ಬೆರಳೆಣಿಕೆಯ ದಿನಗಳು ಮಾತ್ರ. ಟೀಮ್ ಇಂಡಿಯಾ ಈಗಾಗಲೇ ತನ್ನ ತಂಡವನ್ನು ಕೂಡ ಅಂತಿಮಗೊಳಿಸಿದೆ. ಕೊನೆಯ ಹಂತದಲ್ಲಿ ಆರ್ ಅಶ್ವಿನ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದ್ದು ಅಕ್ಷರ್ ಪಟೇಲ್ ಗಾಯದ ಕಾರಣದಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ. ಈ ಮೂಲಕ ಭಾರತ ಟೂರ್ನಿಗೆ ಸರ್ವ ಸನ್ನಧವಾಗಿದೆ. ಆದರೆ ಈ ಸಂದರ್ಭದಲ್ಲಿ ಟೀಮ್ ಇಂಡಿಯಾಗೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತೊಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
* ಎರಡು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ನಿಖತ್ ಝರೀನ್ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ತಮ್ಮ ಚೊಚ್ಚಲ ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ. ಶುಕ್ರವಾರ ನಡೆದ 50 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಜೋರ್ಡಾನ್‌ನ ಹನಾನ್ ನಾಸರ್ ಅವರ ವಿರುದ್ಧ ಅದ್ಭುತ ಜಯ ಸಾಧಿಸುವ ಮೂಲಕ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತಕ್ಕೆ ಮೊದಲ ಬಾಕ್ಸಿಂಗ್ ಪದಕವನ್ನು ಖಚಿತಪಡಿಸಿದ್ದಾರೆ. ಈವೆಂಟ್‌ನ ಸೆಮಿಫೈನಲ್‌ಗೆ ತಲುಪಲು ಆರ್‌ಎಸ್‌ಸಿ (ರೆಫರಿ ಸ್ಟಾಪ್ಸ್ ಕಾಂಟೆಸ್ಟ್) ಗೆಲುವನ್ನು ಸಾಧಿಸಿ ಎದುರಾಳಿಯನ್ನು ಮಣಿಸಿದರು. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ 2024ಕ್ಕೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದಾರೆ.
* ವಿಶ್ವಕಪ್ ಟೂರ್ನಿಯ ಆರಂಭಕ್ಕೂ ಮುನ್ನ ಇಂದಿನಿಂದ ಅಭ್ಯಾಸ ಪಂದ್ಯಗಳು ಆರಂಭವಾಗಿದೆ. ಏಷ್ಯಾದ ಎರಡು ತಂಡಗಳಾದ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಅಭ್ಯಾಸ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು ಇದರಲ್ಲಿ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ಭರ್ಜರಿ ಗೆಲುವು ಸಾಧಿಸಿದೆ. ಇತ್ತೀಚೆಗಷ್ಟೇ ಏಷ್ಯಾಕಪ್‌ನಲ್ಲಿ ಶ್ರೀಲಂಕಾ ಫೈನಲ್‌ಗೆ ಪ್ರವೇಶಿಸಿದ್ದರೆ ಬಾಂಗ್ಲಾದೇಶ ತಂಡ ಸೂಪರ್ 4 ಹಂತದಿಂದ ನಿರ್ಗಮಿಸಿತ್ತು.
* ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ನ್ಯೂಜಿಲೆಂಡ್ ಭರ್ಜರಿ ಗೆಲುವು ಸಾಧಿಸಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ರನ್ ಈ ಹೈಸ್ಕೋರಿಂಗ್ ಪಂದ್ಯದಲ್ಲಿ ಎರಡು ತಂಡಗಳು ಕೂಡ ರನ್ ಮಳೆಯನ್ನೇ ಹರಿಸಿದೆ. ಬೃಹತ್ ಮೊತ್ತದ ಗುರಿಯನ್ನು ನೀಡಿದ್ದರೂ ನ್ಯೂಜಿಲೆಂಡ್ ತಂಡ ಭರ್ಜರಿಯಾಗಿ ಗೆದ್ದುಬೀಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications