For Quick Alerts
ALLOW NOTIFICATIONS  
For Daily Alerts

ಸೆಪ್ಟೆಂಬರ್ 3: ಹೀತ್ ಸ್ಟ್ರೀಕ್ ನಿಧನ; ಏಷ್ಯಾಕಪ್ ಪಂದ್ಯಗಳ ತಾಣದಲ್ಲಿ ಬದಲಾವಣೆ: ಕ್ರೀಡಾ ಲೋಕದ ಇಂದಿನ ಸುದ್ದಿ

* ಕ್ಯಾನ್ಸರ್ ರೋಗದ ವಿರುದ್ಧ ಗೆದ್ದು ಬರಲು ವಿಫಲರಾದ ಜಿಂಬಾಬ್ವೆ ತಂಡದ ಮಾಜಿ ಕ್ರಿಕೆಟಿಗ ಹೀತ್ ಸ್ಟ್ರೀಕ್ ಭಾನುವಾರ, ಸೆಪ್ಟೆಂಬರ್ 3ರ ಬೆಳಗಿನ ಜಾವ ವಿಧಿವಶರಾಗಿದ್ದಾರೆ. ಹೀತ್ ಸ್ಟ್ರೀಕ್ ನಿಧನವು ಅವರ ಕುಟುಂಬಕ್ಕೆ ಮತ್ತು ಪ್ರಪಂಚದಾದ್ಯಂತದ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ಆಘಾತದ ಸುದ್ದಿಯಾಗಿದೆ. ಇತ್ತೀಚಿಗೆ ಅವರ ನಿಧನದ ಸುಳ್ಳು ವದಂತಿಗಳು ವರದಿಯಾಗಿದ್ದವು. ಆದರೆ, ಹೀತ್ ಸ್ಟ್ರೀಕ್ ಸಾವಿನ ಸುದ್ದಿಯನ್ನು ಅವರ ಕುಟುಂಬ ಸದಸ್ಯರು ಈ ಬಾರಿ ಖಚಿತಪಡಿಸಿದ್ದಾರೆ.

* ಏಕದಿನ ಕ್ರಿಕೆಟ್‌ನಲ್ಲಿ ಮೊದಲ 17 ಇನ್ನಿಂಗ್ಸ್‌ ನಂತರ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯಲ್ಲಿ ವಿರಾಟ್ ಕೊಹ್ಲಿ ಸಾಧನೆಯನ್ನು ಇಶಾನ್ ಕಿಶನ್ ಅಳಿಸಿ ಹಾಕಿದರು. ಈ ಪಟ್ಟಿಯಲ್ಲಿ ಇಶಾನ್ ಕಿಶನ್ 776 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಶುಭ್ಮನ್ ಗಿಲ್ 778 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 757 ರನ್ ಗಳಿಸಿ ಮೂರನೇ ಸ್ಥಾನಕ್ಕೆ ಕುಸಿದರು. ಇನ್ನೊಬ್ಬ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ 750 ರನ್ ಗಳಿಸಿದ್ದಾರೆ. ಆದರೆ, ಈ ಪಟ್ಟಿಯಲ್ಲಿ ಇಶಾನ್ ಕಿಶನ್ 105ಕ್ಕೂ ಅಧಿಕ ಸ್ಟ್ರೈಕ್‌ರೇಟ್ ಹೊಂದಿರುವ ಏಕೈಕ ಆಟಗಾರ.

September 3, what happened in sports World: Todays Top sports news and headlines

* ಭಾರತ ತಂಡಕ್ಕೆ ಎರಡನೇ ಪಂದ್ಯದಲ್ಲಿ ಎದುರಾಳಿಯಾಗಿ ನೇಪಾಳ ತಂಡ ಕಣಕ್ಕಿಳಿಯಲಿದೆ. ಇದೇ ಮೊದಲ ಬಾರಿಗೆ ಏಷ್ಯಾಕಪ್ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದುಕೊಂಡಿರುವ ನೇಪಾಳ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಿತ್ತು. ಆ ಪಂದ್ಯದಲ್ಲಿ ಪಾಕಿಸ್ತಾನ ತಂಡ ನೇಪಾಳವನ್ನು ಸುಲಭವಾಗಿ ಮಣಿಸಿತ್ತು. ಇದೀಗ ಏಷ್ಯಾದ ಮತ್ತೊಂದು ಬಲಿಷ್ಠ ತಂಡವಾದ ಭಾರತ ತಂಡವನ್ನು ಎದುರಿಸಲಿದೆ.

* ಶ್ರೀಲಂಕಾದಲ್ಲಿ ನಡೆಯುತ್ತಿರುವ ಏಷ್ಯಾಕಪ್ 2023ರ ಪಂದ್ಯಗಳು ಮಳೆಯಿಂದ ರದ್ದಾಗುತ್ತಿದ್ದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ)ನ ತಲೆಬಿಸಿ ಹೆಚ್ಚಿಸಿವೆ. ಇದರಿಂದಾಗಿ ಸೂಪರ್ 4 ಹಂತದ ಪಂದ್ಯಗಳ ಸ್ಥಳ ಬದಲಾವಣೆ ಮಾಡಲು ಚಿಂತನೆ ನಡೆಸಿದೆ. ಮೂಲಗಳ ಪ್ರಕಾರ ಕೊಲಂಬೊದಲ್ಲಿ ನಡೆಯಲಿರುವ ಸೂಪರ್ 4 ಹಂತದ ಪಂದ್ಯಗಳನ್ನು ಡಂಬುಲಾಗೆ ಸ್ಥಳಾಂತರಿಸುವ ಸಾಧ್ಯತೆ ಇದೆ. ಶನಿವಾರ ನಡೆದ ಬಹು ನಿರೀಕ್ಷಿತ ಭಾರತ - ಪಾಕಿಸ್ತಾನ ಪಂದ್ಯ ಕೂಡ ಮಳೆಯಿಂದ ರದ್ದಾಗಿತ್ತು. ಇದು ಅಭಿಮಾನಿಗಳಲ್ಲಿ ಭಾರಿ ನಿರಾಸೆ ಉಂಟುಮಾಡಿತ್ತು.

* ಏಷ್ಯಾಕಪ್‌ನಲ್ಲಿ ಭಾಗಿಯಾಗಿರುವ ಟೀಮ್ ಇಂಡಿಯಾ ಸ್ಕ್ವಾಡ್ ಎರಡನೇ ಪಂದ್ಯದಲ್ಲಿ ನೇಪಾಳ ತಂಡವನ್ನು ಎದುರಿಸಲು ಸಜ್ಜಾಗುತ್ತಿದೆ. ಆದರೆ ಈ ಸಂದರ್ಭದಲ್ಲಿ ಟೀಮ್ ಇಂಡಿಯಾದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಟೀಮ್ ಇಂಡಿಯಾದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಶ್ರೀಲಂಕಾದಲ್ಲಿ ಭಾರತ ತಂಡವನ್ನು ತೊರೆದು ಮುಂಬೈಗೆ ಪ್ರಯಾಣಿಸಿದ್ದಾರೆ ಎನ್ನಯವ ಮಾಹಿತಿ ಲಭ್ಯವಾಗಿದೆ.

* ಪಾಕ್ ವಿರುದ್ಧದ ಪಂದ್ಯದಲ್ಲಿ ಆರಂಬಿಕ ಆಟಗಾರ ಶುಬ್ಮನ್ ಗಿಲ್ ಅವರಲ್ಲಿ ತಾಂತ್ರಿಕವಾಗಿ ಕೆಲ ಲೋಪಗಳ ಬಗ್ಗೆ ಗೌತಮ್ ಗಂಭೀರ್ ಬೊಟ್ಟುಮಾಡಿದ್ದು ಅದನ್ನು ಸರಿಪಡಿಸಿಕೊಳ್ಳಲು ಯುವ ಆಟಗಾರನಿಗೆ ಸಲಹೆ ನೀಡಿದ್ದಾರೆ. "ಗಿಲ್ ಅವರಲ್ಲಿ ತಾಂತ್ರಿಕವಾಗಿ ಲೋಪಗಳು ಕಂಡಿತು. ಆದರೆ ಮತ್ತೊಂದು ತುದಿಯಲ್ಲಿ ವಿಕೆಟ್‌ಗಳು ಉರುಳಲು ಆರಂಭವಾದ ಕಾರಣ ತಮ್ಮ ಸಹಜ ಆಟವನ್ನು ಅವರು ಆಡಲಿಲ್ಲ. ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡರು, ಬಳಿಕ ವಿರಾಟ್ ಕೊಹ್ಲಿ ಔಟಾದರು. ನಂತರ ಶ್ರೇಯಸ್ ಐಯ್ಯರ್ ಕೂಡ ವಿಕೆಟ್ ಕಳೆದುಕೊಂಡರು. ಇದರಿಂದಾಗಿ ಅವರು ಒತ್ತಡಕ್ಕೆ ಸಿಲುಕಿದ್ದರು" ಎಂದಿದ್ದಾರೆ ಗೌತಮ್ ಗಂಭೀರ್.

* ಏಷ್ಯಾಕಪ್ ಟೂರ್ನಿಯಲ್ಲಿ ಇಂದು ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಿದ್ದು ಭರ್ಜರಿ ಹೋರಾಟ ನಡೆದಿದೆ. ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಬಾಂಗ್ಲಾದೇಶ ಭರ್ಜರಿ 89 ರನ್‌ಗಳ ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಸೂಪರ್ 4 ಹಂತಕ್ಕೇರುವ ಸ್ಪರ್ಧೆಯಲ್ಲಿ ಬಾಂಗ್ಲಾದೇಶ ಉಳಿದುಕೊಂಡಿದೆ. ಬಾಂಗ್ಲಾದೇಶ ನೀಡಿದ 335 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ ಮೊದಲ ವಿಕೆಟನ್ನು ಶೀಘ್ರದಲ್ಲಿಯೇ ಕಳೆದುಕೊಂಡರೂ ಬಳಿಕ ಉತ್ತಮ ಹೋರಾಟವನ್ನು ಪ್ರದರ್ಶಿಸಿತು. ಇಬ್ರಾಹಿಮ್ ಜದ್ರಾನ್, ರಹ್ಮತ್ ಶಾ ಹಾಗೂ ನಾಯಕ ಹಶ್ಮತುಲ್ಲಾ ಶಾಹಿದಿ ಪೈಪೊಟಿ ನೀಡಿದ. ಆದರೆ ನಂತರದ ಬ್ಯಾಟರ್‌ಗಳಿಮದ ನೆರವು ದೊರೆಯಲಿಲ್ಲ. ಹೀಗಾಗಿ 245 ರನ್‌ಗಳಿಗೆ ಅಫ್ಘಾನಿಸ್ತಾನ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿದ್ದು 89 ರನ್‌ಗಳ ಅಂತರದ ಸೋಲು ಅನುಭವಿಸಿದೆ.

Story first published: Sunday, September 3, 2023, 23:43 [IST]
Other articles published on Sep 3, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+