For Quick Alerts
ALLOW NOTIFICATIONS  
For Daily Alerts

ಸೆಪ್ಟೆಂಬರ್ 5: ವಿಶ್ವಕಪ್‌ಗೆ ಭಾರತ ತಂಡ ಪ್ರಕಟ; ಬ್ಯಾಡ್ಮಿಂಟನ್‌ನಲ್ಲಿ ಆಘಾತ: ಕ್ರೀಡಾ ಲೋಕದ ಇಂದಿನ ಸುದ್ದಿ

* ಮುಂದಿನ ತಿಂಗಳು ಭಾರತದಲ್ಲಿ ಆರಂಭವಾಗಲಿರುವ ವಿಶ್ವಕಪ್ ಟೂರ್ನಿಗೆ ಬಲಿಷ್ಠ ಭಾರತ ತಂಡ ಪ್ರಕಟವಾಗಿದೆ. ರೋಹಿತ್ ಶರ್ಮಾ ನೇತೃತ್ವದ 15 ಆಟಗಾರರ ಬಳಗವನ್ನು ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಪ್ರಕಟಿಸಿದ್ದು ಏಷ್ಯಾಕಪ್ ತಂಡದಲ್ಲಿ ಸಣ್ಣ ಬದಲಾವಣೆಯೊಂದಿಗೆ ತಂಡವನ್ನು ಅಂತಿಮಗೊಳಿಸಲಾಗಿದೆ. ಏಷ್ಯಾಕಪ್ ತಂಡದಲ್ಲಿ 17 ಆಟಗಾರರ ಪಡೆಯನ್ನು ಘೋಷಿಸಲಾಗಿತ್ತು. ಆದರೆ ವಿರ್ಶವಕಪ್‌ನಲ್ಲಿ 15 ಆಟಗಾರರ ತಂಡಕ್ಕೆ ಮಾತ್ರವೇ ಅವಕಾಶವಿದೆ. ಹಾಗಾಗಿ ಏಷ್ಯಾಕಪ್‌ನಲ್ಲಿ ಸ್ಥಾನವನ್ನು ಪಡೆದ ಇಬ್ಬರು ಆಟಗಾರರಿಗೆ ಕೊಕ್ ಸಿಗುವುದು ನಿಶ್ಚಿತವಾಗಿತ್ತು. ಕನ್ನಡಿಗ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಹಾಗೂ ತಿಲಕ್ ವರ್ಮ ವಿಶ್ವಕಪ್ ತಂಡದಿಂದ ಹೊರಬಿದ್ದಿರುವ ಇಬ್ಬರು ಆಟಗಾರರಾಗಿದ್ದಾರೆ.

* ಭಾರತದ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್). ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಸೂರ್ಯಕುಮಾರ್ ಯಾದವ್

September 5, what happened in sports World: Todays Top sports news and headlines

* ಕಳೆದ ವರ್ಷದ ಮೂರು ಗ್ರ್ಯಾಂಡ್‌ಸ್ಲ್ಯಾ್‌ಗಳಿಂದ ಹೊರಬಿದ್ದಿದ್ದ ಜೆಕ್ ರಿಪಬ್ಲಿಕ್‌ನ ಮಾರ್ಕೆಟ ವೊಂಡ್ರೋಸೊವಾ ಕಳೆದ ವಿಂಬಲ್ಡನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನಸಳೆದಿದ್ದರು. ಇದೀಗ ಯುಎಸ್ ಓಪನ್‌ನಲ್ಲಿ ಮೊದಲ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. 24ರ ಹರೆಯದ ವೊಂಡ್ರೊಸೊವಾ ಅವರಿಗೆ ಸೆಪ್ಟೆಂಬರ್ 4ರ ಸೋಮವಾರ ನಡೆದ ಪಂದ್ಯದಲ್ಲಿ ಎದುರಾಳಿಗಾಗಿದಿದ್ದು ಶ್ರೇಯಾಂಕ ರಹಿತ ಅಮೆರಿಕನ್ ಆಟಗಾರ್ತಿ ಪೇಟನ್ ಸ್ಟೆರ್ನ್ಸ್. ಇವರ ವಿರುದ್ಧ ನಡೆದ ರೌಂಡ್ ಆಫ್ 4ರಲ್ಲಿ ವೊಂಡ್ರೊಸೊವಾ 6-7 (3), 6-3, 6-2 ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

* ಏಕದಿನ ವಿಶ್ವಕಪ್ 2023 ಗಾಗಿ ದಕ್ಷಿಣ ಆಫ್ರಿಕಾ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಕ್ರಿಕೆಟ್ ದಕ್ಷಿಣ ಆಫ್ರಿಕಾ ತನ್ನ 15 ಸದಸ್ಯರ ಆಟಗಾರರ ತಂಡವನ್ನು ಮಂಗಳವಾರ ಹೆಸರಿಸಿದೆ. ಏಕದಿನ ತಂಡದ ನಾಯಕ ಟೆಂಬಾ ಬವುಮಾ ವಿಶ್ವಕಪ್‌ನಲ್ಲೂ ತಂಡವನ್ನು ಮುನ್ನಡೆಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ತಂಡ ಹೀಗಿದೆ: ಟೆಂಬಾ ಬವುಮಾ (ನಾಯಕ), ಜೆರಾಲ್ಡ್ ಕೊಯೆಟ್ಜಿ, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಸಿಸಂದಾ ಮಗಲಾ, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ಅನ್ರಿಚ್ ನೊಕಿಯಾ, ಕಗಿಸೊ ರಬಾಡ, ತಬ್ರೈಜ್ ಶಮ್ಸಿ, ರಾಸ್ಸಿ ವಾನ್ ಡೆರ್ ಡುಸ್ಸೆನ್.

* ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟರ್ ಕ್ವಿಂಟನ್ ಡಿಕಾಕ್ ಮುಂಬರುವ ಏಕದಿನ ವಿಶ್ವಕಪ್‌ನ ಬಳಿಕ ಏಕದಿನ ಮಾದರಿಗೆ ನಿವೃತ್ತಿ ಘೋಷಣೆ ಮಾಡಲಿದ್ದಾರೆ. ಈ ವಿಚಾರವನ್ನು ಸ್ವತಃ ಕ್ರಿಕೆಟ್ ದಕ್ಷಿಣ ಆಫ್ರಿಕಾ ಬಹಿರಂಗ ಪಡಿಸಿದೆ. ವಿಶ್ವಕಪ್ ಟೂರ್‌ಇಗೆ ಇಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ 15 ಆಟಗಾರರ ಬಳಗವನ್ನು ಪ್ರಕಟಿಸಿದೆ. ಈ ಸಂದರ್ಭದಲ್ಲಿ ಈ ವಿಚಾರವನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದೆ.

* 2011ರ ಏಕದಿನ ವಿಶ್ವಕಪ್ ವಿಜೇತ ಆಟಗಾರನಾಗಿರುವ ವೀರೇಂದ್ರ ಸೆಹ್ವಾಗ್ ಅವರು ಐಸಿಸಿ ಪಂದ್ಯಾವಳಿಗಾಗಿ ಭಾರತ ತಂಡದ ಆಟಗಾರರ ಜರ್ಸಿಯಲ್ಲಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸಬೇಕು ಎಂದು ಆಗ್ರಹಿಸಿದರು. 2023ರ ಏಕದಿನ ವಿಶ್ವಕಪ್‌ಗಾಗಿ ಆಯ್ಕೆಯಾದ ಭಾರತ ತಂಡವನ್ನು ಎಕ್ಸ್‌ (ಟ್ವಿಟ್ಟರ್)ನಲ್ಲಿ ಮರು ಪೋಸ್ಟ್ ಮಾಡಿರುವ ವೀರೇಂದ್ರ ಸೆಹ್ವಾಗ್ ತಮ್ಮ ವಿನಂತಿಯನ್ನು ಮಾಡಿದ್ದು, ಆಟಗಾರರ ಜೆರ್ಸಿಯ ಎದೆಯ ಮೇಲೆ 'ಭಾರತ್' ಇರಬೇಕು ಎಂದರು.

* ಚೀನಾ ಓಪನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಶಟ್ಲರ್‌ಗಳು ಮೊದಲ ದಿನವೇ ಭಾರೀ ನಿರಾಸೆ ಪ್ರದರ್ಶನ ನೀಡಿ ಬೇಸರ ಮೂಡಿಸಿದ್ದಾರೆ. ಚೀನಾದ ಚಾಂಗ್‌ಜೌನಲ್ಲಿ ಆರಂಭವಾದ ಸೂಪರ್ 1000 ಟೂರ್ನಮೆಂಟ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ಗೆದ್ದಿರುವ ಸೇರಿದಂತೆ ಪ್ರಮುಖರು ಸೋತು ಹೊರಬಿದ್ದಿದ್ದಾರೆ. ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೂ ಮುನ್ನ ಈ ರೀತಿಯ ಪ್ರದರ್ಶನ ಈಗ ಭಾರತೀಯ ಅಭಿಮಾನಿಗಳ ಪಾಳಯದಲ್ಲಿ ಕಳವಳ ಮೂಡಿಸಿದೆ.

Story first published: Tuesday, September 5, 2023, 20:05 [IST]
Other articles published on Sep 5, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+