For Quick Alerts
ALLOW NOTIFICATIONS  
For Daily Alerts

ಸೆಪ್ಟೆಂಬರ್ 6: ಶ್ರೀಲಂಕಾ ಕ್ರಿಕೆಟಿಗ ಅರೆಸ್ಟ್; ವಿಶ್ವಕಪ್‌ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಕ್ರೀಡಾ ಲೋಕದ ಇಂದಿನ ಸುದ್ದಿ

* ಶ್ರೀಲಂಕಾದ ಮಾಜಿ ಕ್ರಿಕೆಟಿಗ, ವಿಶ್ವಕಪ್ ವಿಜೇತ ತಂಡದ ಸದಸ್ಯ ಸಚಿತ್ರ ಸೇನನಾಯಕೆ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಕ್ರೀಡಾ ಇಲಾಖೆಯ ಭ್ರಷ್ಟಾಚಾರ ತನಿಖಾ ದಳದ ಪೊಲೀಸರಿಗೆ ಶರಣಾಗಿದ್ದ ಸೇನನಾಯಕೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ. ಮೂರು ವಾರಗಳ ಹಿಂದೆಯಷ್ಟೇ ನ್ಯಾಯಾಲಯ ವಿದೇಶ ಪ್ರಯಾಣ ನಡೆಸದಂತೆ ನಿಷೇಧಿಸಿತ್ತು. 2020ರ ಶ್ರೀಲಂಕಾ ಪ್ರೀಮಿಯರ್ ಲೀಗ್(LPL) ಟೂರ್ನಿಯಲ್ಲಿ ಪಂದ್ಯದ ಫಲಿತಾಂಶ ಮೇಲೆ ಪರಿಣಾಮ ಬೀರಲು ಪ್ರಯತ್ನಿಸಿದ ಆರೋಪವನ್ನು ಸೇನನಾಯಕೆ ಮೇಲೆ ಹೊರಿಸಲಾಗಿದೆ.

* ಭಾರತದ ಟೆನಿಸ್ ದಿಗ್ಗಜ ರೋಹನ್ ಬೋಪಣ್ಣ ಯುಎಸ್ ಓಪನ್‌ 2023ರ ಪುರುಷರ ಡಬಲ್ಸ್ ವಿಭಾಗದಲ್ಲಿ ಫೈನಲ್‌ಗೆ ಹತ್ತಿರದಲ್ಲಿದ್ದಾರೆ. 2010ರ ಯುಎಸ್ ಓಪನ್‌ನಲ್ಲಿ ರೋಹನ್ ಬೋಪಣ್ಣ ಪಾಕಿಸ್ತಾನದ ಐಸಾಮ್-ಉಲ್-ಹಕ್ ಖುರೇಷಿ ಜೊತೆಗೆ ಡಬಲ್ಸ್‌ನಲ್ಲಿ ಆಡಿ ಏಕೈಕ ಬಾರಿ ಯುಎಸ್ ಓಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದ್ದ ಸಾಧನೆ ಮಾಡಿದ್ದರು. ಇದೀಗ ಮತ್ತೊಮ್ಮೆ ಅಂಥಾ ಮಹತ್ವದ ಸಾಧನೆಯ ಸನಿಹದಲ್ಲಿದ್ದಾರೆ.

September 6, what happened in sports World: Todays Top sports news and headlines

* ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತೀಯ ಆಟಗಾರರ ಆಘಾತಕಾರಿ ಪ್ರದರ್ಶನ ಎರಡನೇ ದಿನವೂ ಮುಂದುವರಿಯಿತು. ಮೊದಲ ದಿನದಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರೀ ನಿರಾಸೆ ಅನುಭವಿಸಿದ ಭಾರತ ಎರಡನೇ ದಿನ ಡಬಲ್ಸ್ ವಿಭಾಗದಲ್ಲಿ ಆಘಾತ ಅನುಭವಿಸಿದೆ. ಸಾತ್ವಿಕ್-ಚಿರಾಗ್ ಜೋಡಿ ಪುರುಷರ ಡಬಲ್ಸ್‌ನಲ್ಲಿ ಅನಿರೀಕ್ಷಿತ ರೀತಿಯಲ್ಲಿ ಸೋಲು ಕಂಡು ಹೋರಾಟವನ್ನು ಅಂತ್ಯಗೊಳಿಸಿದ್ದಾರೆ.

* ವಿಶ್ವಕಪ್‌ಗೆ ಪ್ರಕಟಿಸಿರುವ ಭಾರತ ತಂಡ ಬಲಿಷ್ಠವಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಬಹುತೇಕ ಪೂರ್ಣಪ್ರಮಾಣದ ಆಟಗಾರರ ಪಡೆಯನ್ನು ಹೊಂದಿದ್ದು ಬಲಾಢ್ಯ ಆಟಗಾರರು ತಂಡದಲ್ಲಿದ್ದಾರೆ. ಆದರೆ ಬಹುದೊಡ್ಡ ಟೂರ್ನಿಯನ್ನು ಕೆಲವೇ ಆಟಗಾರರ ವೈಯಕ್ತಿಕ ಪ್ರದರ್ಶನ ಗೆಲ್ಲುವುದು ಸಾಧ್ಯವಿಲ್ಲ. ವಿಶ್ವಕಪ್‌ನಂಥಾ ಟೂರ್ನಿಯನ್ನು ಗೆಲ್ಲಬೇಕಾದರೆ ತಂಡವಾಗಿ ಪ್ರದರ್ಶನ ನೀಡಬೇಕಿದೆ. ಆದರೆ ತಂಡದ ನಾಯಕನಾಗಿ ರೋಹಿತ್ ಶರ್ಮಾ ವಿಶ್ವಕಪ್‌ ಟೂರ್ನಿಯ ಬಗ್ಗೆ ಮಾತನಾಡುವಾಗ ಓರ್ವ ಆಟಗಾರನನ್ನು ಬೊಟ್ಟು ಮಾಡಿದ್ದು ಆ ಆಟಗಾರನ ಫಾರ್ಮ್ ತಂಡಕ್ಕೆ ನಿರ್ಣಾಯಕ ಎಂದು ಹೇಳುವ ಮೂಲಕ ಅಚ್ಚರಿಯನ್ನುಂಟು ಮಾಡಿದ್ದಾರೆ.

* ಇಶಾನ್ ಕಿಶನ್ ಏಕದಿನ ಮಾದರಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇತ್ತೀಚಿಗೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಕುಸಿದಿದ್ದ ಭಾರತ ತಂಡವನ್ನು ಮೇಲೆತ್ತಿದರು. ಇದೀಗ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು 2023ರ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಆಡುವ 11ರ ಬಳಗದಲ್ಲಿ ಆಡಲು ಕೆಎಲ್ ರಾಹುಲ್ ಅವರಿಗಿಂತ ಮೊದಲು ಇಶಾನ್ ಕಿಶನ್ ಅವರನ್ನು ಬೆಂಬಲಿಸಿದ್ದಾರೆ.

* ಬುಧವಾರ, ಸೆಪ್ಟೆಂಬರ್ 6ರಂದು ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನವೀಕರಣದ ನಂತರ ಭಾರತದ ಸ್ಟಾರ್ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಅವರು ವೃತ್ತಿಜೀವನದ ಅಗ್ರ 3ನೇ ಸ್ಥಾನ ಗಳಿಸಿದ್ದಾರೆ. ಸೋಮವಾರ ಕ್ಯಾಂಡಿಯಲ್ಲಿ ನಡೆದ ಏಷ್ಯಾ ಕಪ್‌ನ ಗೆಲ್ಲಲೇಬೇಕಾದ ಪಂದ್ಯದಲ್ಲಿ ನೇಪಾಳ ತಂಡದ ವಿರುದ್ಧ 62 ಎಸೆತಗಳಲ್ಲಿ ಅಜೇಯ 67 ರನ್ ಗಳಿಸಿದ ಶುಭ್ಮನ್ ಗಿಲ್ ಹೊಸ ಮೈಲಿಗಲ್ಲು ಸ್ಥಾಪಿಸಿದರು. 23 ವರ್ಷದ ಶುಭ್ಮನ್ ಗಿಲ್ ಈ ವರ್ಷ 50 ಓವರ್‌ಗಳ ಸ್ವರೂಪದಲ್ಲಿ ಭಾರತದ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದಾರೆ. ಅಲ್ಲದೆ, ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರ ಮೂರನೇ ಸ್ಥಾನ ತಲುಪಿದ ವಿಶ್ವದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡರು.

* ಏಷ್ಯಾ ಕಪ್ 2023 ರ ಪಾಕಿಸ್ತಾನ - ಬಾಂಗ್ಲಾದೇಶ ನಡುವಿನ ಸೂಪರ್ 4 ಘರ್ಷಣೆಯ ಸಂದರ್ಭದಲ್ಲಿ ವೇಗಿ ನಸೀಮ್ ಶಾ ಅವರು ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದು ಆತಂಕಕ್ಕೆ ಕಾರಣವಾಗಿದೆ. ನಸೀಂ ಶಾ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಮೊದಲ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಉತ್ತಮ ಲಯದಲ್ಲಿ ಕಾಣುತ್ತಿದ್ದ ಅವರು, ಆದಾಗ್ಯೂ, ಥರ್ಡ್ ಮ್ಯಾನ್ ಪ್ರದೇಶದಲ್ಲಿ ಬೌಂಡರಿ ನಿಲ್ಲಿಸಲು ಪ್ರಯತ್ನಿಸುವಾಗ ಗಾಯಗೊಂಡರು. ಅವರು ನೋವಿನಿಂದ ಬಳಲುತ್ತಿದ್ದ ಕಾರಣ ಅವರನ್ನು ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು.

* ದಕ್ಷಿಣ ಆಪ್ರಿಕಾದ ಅನುಭವಿ ಆಟಗಾರ ಕ್ವಿಂಟನ್ ಡಿಕಾಕ್ ಮುಂದಿನ ವಿಶ್ವಕಪ್‌ನ ಬಳಿಕ ಏಕದಿನ ಮಾದರಿಗೆ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಮಾಹಿತಿ ನೀಡಿದೆ. ಮಂಗಳವಾರ ವಿಶ್ವಕಪ್‌ಗೆ ತಂಡವನ್ನು ಪ್ರಕಟಿಸಿದ ಬಳಿಕ ಕ್ರಿಕೆಟ್ ದಕ್ಷಿಣ ಆಫ್ರಿಕಾ ಈ ವಿಚಾರವನ್ನು ಬಹಿರಂಗಪಡಿಸಿತ್ತು. ಆದರೆ ಈ ವಿಚಾರವಾಗಿ ಸ್ವತಃ ನಾಯಕ ಟೆಂಬಾ ಬವುಮಾ ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳಿದ್ದಾರೆ.

Story first published: Wednesday, September 6, 2023, 20:45 [IST]
Other articles published on Sep 6, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+