ಸೆಪ್ಟೆಂಬರ್ 8: Ind vs Pak ಪಂದ್ಯಕ್ಕೆ ಮೀಸಲು ದಿನ; ಟ್ರಂಪ್ ಜೊತೆ ಗಾಲ್ಫ್ ಆಡಿದ ಧೋನಿ: ಕ್ರೀಡಾ ಲೋಕದ ಇಂದಿನ ಸುದ್ದಿ
* ನ್ಯೂಯಾರ್ಕ್‌ನಲ್ಲಿ ನಡೆದ 2023ರ ಯುಎಸ್ ಓಪನ್ ಗ್ರ್ಯಾಂಡ್ ಸ್ಲಾಮ್‌ನ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಭರ್ಜರಿ ಗೆಲುವು ಸಾಧಿಸಿ ಫೈನಲ್ ತಲುಪಿದರು. ತಮ್ಮ ಗೆಲುವಿನ ಓಟವನ್ನು ಮುಂದುವರೆಸಿರುವ ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ಅವರು ಫ್ರೆಂಚ್ ಜೋಡಿಯಾದ ಪಿಯರೆ-ಹ್ಯೂಗ್ಸ್ ಹರ್ಬರ್ಟ್ ಮತ್ತು ನಿಕೋಲಸ್ ಮಹುತ್ ವಿರುದ್ಧ ನೇರ ಸೆಟ್‌ಗಳ ಜಯಭೇರಿ ಬಾರಿಸಿದರು.
* ವಿಶ್ವಕಪ್ ಸನಿಹದಲ್ಲಿರುವಾಗ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡು ಏಕದಿನ ಸರಣಿಯನ್ನು ಆಡುತ್ತಿರುವ ಆಸ್ಟ್ರೇಲಿಯಾ ತಂಡ ಸ್ಮರಣೀಯ ಗೆಲುವೊಂದನ್ನು ದಾಖಲಿಸಿದೆ. ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ನಡುವಿನ ಈ ಪಂದ್ಯ ಲೋಸ್ಕೋರಿಂಗ್ ಪಂದ್ಯವಾಗಿತ್ತು. ದಕ್ಷಿಣ ಆಫ್ರಿಕಾ ತಂಡ ನಿಡಿದ್ದ ಸಾಧಾರಣ ಮೊತ್ತದ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಬಹುತೇಕ ಸೋಲಿನ ಅಂಚಿಗೆ ತಲುಪಿತ್ತು. ಆದರೆ ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡದ ಆಡುವ XIರ ಬಳಗದಲ್ಲೇ ಇಲ್ಲದ ಮಾರ್ನಸ್ ಲ್ಯಾಬುಶೇನ್ ಕನ್ಕೂಶನ್ ಕವರ್ ಆಗಿ ಆಡುವ ಬಳಗಕ್ಕೆ ಸೇರಿಕೊಂಡು ಕಣಕ್ಕಿಳಿದು ಈ ಅತ್ಯಮೋಘ ಪ್ರದರ್ಶನ ನೀಡಿ ಆಸ್ಟ್ರೇಲಿಯಾದ ಗೆಲುವಿಗೆ ಕಾರಣವಾದರು.

* ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಸೆಣೆಸಾಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾನುವಾರ ಈ ಎರಡು ತಂಡಗಳು ಪರಸ್ಪರ ಮುಖಾಮುಖಿಯಾಗಲಿದ್ದು ತೀವ್ರ ಪೈಪೋಟಿ ನಡೆಯಲಿದೆ. ಈ ಸೆಣೆಸಾಟಕ್ಕಾಗಿ ಎರಡು ತಂಡಗಳು ಕೂಡ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಪಾಕಿಸ್ತಾನ ತಂಡ ಸೂಪರ್ 4 ಹಂತದಲ್ಲಿ ಈಗಾಗಲೇ ಒಂದು ಪಂದ್ಯವನ್ನು ಆಡಿದ್ದು ಬಾಂಗ್ಲಾದೇಶ ತಂಡವನ್ನು ಎದುರಿಸಿತ್ತು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿಯೂ ಅಮೋಘ ಪ್ರದರ್ಶನ ನೀಡಿದಪಾಕ್ ಪಡೆ ಭರ್ರಿ 7 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಭಾರತದ ವಿರುದ್ಧದ ಪಂದ್ಯಕ್ಕೆ ಎಲ್ಲಾ ರೀತಿಯಲ್ಲಿಯೂ ಸಿದ್ಧತೆ ಮಾಡಿಕೊಂಡಂತಿದೆ.
* ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದ ಸಂದರ್ಭದಲ್ಲಿ ಪಂದ್ಯಕ್ಕೆ ಪ್ರತಿಭಟನಾಕಾರರು ಅಡ್ಡಿಪಡಿಸಿದ ಘಟನೆ ನಡೆದಿದೆ. ಅಮೆರಿಕಾದ ಆಟಗಾರ್ತಿ ಕೊಕೊ ಗೌಫ್ ಹಾಗೂ ಜೆಕ್ ರಿಪಬ್ಲಿಕ್‌ನ ಆಟಗಾರ್ತಿ ಕ್ಯಾರೊಲಿನಾ ಮುಕೋವಾ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಿದ್ದರು. ಪಂದ್ಯದ ಎರಡನೇ ಸೆಟ್‌ನ ಸಂದರ್ಭದಲ್ಲಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಲು ಆರಂಭಿಸಿದರು. ಇನ್ನು ಈ ಪಂದ್ಯದಲ್ಲಿ 19ರ ಹರೆಯದ ಕೊಕೊ ಗೌಫ್ ಅಮೋಘ ಗೆಲುವು ಸಾಧಿಸಿದ್ದು ತಮ್ಮ ವೃತ್ತಿ ಜೀವನದಲ್ಲಿ ಪ್ರಪ್ರಥಮ ಬಾರಿಗೆ ಯುಎಸ್ ಓಪನ್ ಗ್ರ್ಯಾಂಡ್‌ಸ್ಲ್ಯಾಮ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಕ್ಯಾರೊಲಿನಾ ಮುಕೋವಾ ವಿರುದ್ಧದ ಪಂದ್ಯದಲ್ಲಿ ರೋಚಕವಾದ ಗೆಲುವು ಸಾಧಿಸಿದ ಬಳಿಕ ಈ ಸಾಧನೆ ಮಾಡಿದ್ದಾರೆ ಕೊಕೊ ಗೌಫ್.
* ಅಮೆರಿಕಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದಾರೆ. ಇಷ್ಟು ಮಾತ್ರವಲ್ಲದೆ ವಿಭಿನ್ನ ಕ್ಷೇತ್ರಗಳ ಇಬ್ಬರು ದಿಗ್ಗಜರು ಗಾಲ್ಫ್ ಆಡುವ ಮೂಲಕ ಕೆಲ ಸಮಯವನ್ನು ಕಳೆದಿದ್ದಾರೆ. ಮಾಜಿ ಯುಎಸ್ ಅಧ್ಯಕ್ಷರ ಆಹ್ವಾನದ ಮೇರೆಗೆ ಈ ಭೇಟಿ ನಡೆದಿದೆ ಎಂದು ವರದಿಯಾಗಿದೆ. ಎಂಎಸ್ ಧೋನಿ ಹಾಗೂ ಡೊನಾಲ್ಡ್ ಟ್ರಂಪ್ ಇಬ್ಬರು ಕೂಡ ಗಾಲ್ಫ್ ಧಿರಿಸಿನಲ್ಲಿಯೇ ಫೋಟೊಗೆ ಫೋಸ್ ನೀಡಿದ್ದು ಈ ಫೋಟೋ ಈಗ ಸಾಕಷ್ಟು ವೈರಲ್ ಆಗಿದೆ. ಧೋನಿ ತಮ್ಮ ಟ್ರೇಡ್‌ಮಾರ್ಕ್ ಉದ್ದದ ಹೇರ್‌ಸ್ಟೈಲ್‌ನೊಂದಿಗೆ ಕಾಣಿಸಿಕೊಂಡಿದ್ದರೆ ಟ್ರಂಪ್ ಕೆಂಪು ಟೋಫಿ ಜೊತೆಗೆ ಪೋಸ್ ನೀಡಿದ್ದಾರೆ.
* ಏಷ್ಯಾಕಪ್ ಟೂರ್ನಿಯಲ್ಲಿ ಶನಿವಾರ ಮತ್ತೊಂದು ಕುತೂಹಲಕಾರಿ ಸೆಣೆಸಾಟವೊಂದು ನಡೆಯಲಿದೆ. ಸೂಪರ್ 4 ಹಂತದ ಎರಡನೇ ಪಂದ್ಯ ಇದಾಗಿದ್ದು ಶ್ರೀಲಂಕಾ ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ. ಬಾಂಗ್ಲಾದೇಶ ಸೂಪರ್ 4 ಹಂತದಲ್ಲಿ ಈಗಾಗಲೇ ಒಂದು ಪಂದ್ಯ ಆಡಿದ್ದು ಪಾಕಿಸ್ತಾನದ ವಿರುದ್ಧ ಸೋಲು ಅನುಭವಿಸಿದೆ. ಹೀಗಾಗಿ ಈ ಪಂದ್ಯ ಬಾಂಗ್ಲಾದೇಶ ತಂಡದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.
* ಏಷ್ಯಾಕಪ್ ಟೂರ್ನಿಯ ಲೀಗ್ ಹಂತದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ಸೆಣೆಸಾಟ ಮಳೆಗೆ ಆಹುತಿಯಾಗಿತ್ತು. ಸೂಪರ್ 4 ಹಂತದಲ್ಲಿ ಮತ್ತೆ ಈ ಎರಡು ತಂಡಗಳು ಮುಂದಿನ ಬಾನುವಾರ ಮುಖಾಮುಖಿಯಾಗಲಿದೆ. ಆದರೆ ಈ ಪಂದ್ಯಕ್ಕೂ ಮಳೆಯ ಕಾಟ ತ್ಪಪಿದ್ದಲ್ಲ ಎನ್ನಲಾಗುತ್ತಿದೆ. ಇದಕ್ಕಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪರಿಹಾರವನ್ನು ಕಂಡುಕೊಂಡಿದ್ದು ಮೀಸಲು ದಿನವನ್ನು ನಿಗದಿಪಡಿಸಿದೆ. ಭಾನುವಾರ ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಲಾಗಿದೆ. ಹೀಗಾಗಿ ನಿಗದಿತ ದಿನದಂದು ಪಂದ್ಯ ಮಳೆಗೆ ಆಹುತಿಯಾದರೂ ಮೀಸಲು ದಿನದಂದು ಪಂದ್ಯವನ್ನು ಮುಂದುವರಿಲಿದ್ದು ಫಲಿತಾಂಶ ಕಂಡುಕೊಳ್ಳಲಾಗುತ್ತದೆ ಎಂದು ಮಾಹಿತಿ ಲಭ್ಯವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications