Paralympics 2024: ಕಂಚು ಗೆದ್ದು ಮಹಿಳೆಯರಿಗೆ ಸ್ಫೂರ್ತಿಯಾದ 7 ತಿಂಗಳ ಗರ್ಭಿಣಿ ಆರ್ಚರ್
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024ರ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವುದು ಸುಲಭದ ಸಾಧನೆಯಲ್ಲ. ಇದಕ್ಕಾಗಿ ಕ್ರೀಡಾಪಟುಗಳು ಹಗಲು ರಾತ್ರಿ ಬೆವರು ಹರಿಸುತ್ತಾರೆ. ಎಷ್ಟೇ ಕಷ್ಟವಾದರೂ ಸರಿ, ಅವರು ತಮ್ಮ ಸಾಧನೆಯ ಶಿಖರವನ್ನು ತಲುಪುವವರೆಗೂ ಬಿಡುವುದಿಲ್ಲ.
ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಗ್ರೇಟ್ ಬ್ರಿಟನ್‌ನ ಮಹಿಳಾ ಆರ್ಚರ್ ಅದ್ಭುತ ಸಾಧನೆ ಮಾಡಿದ್ದಾರೆ. ಇತಿಹಾಸ ಸೃಷ್ಟಿಸುವ ಭರದಲ್ಲಿ ಎಲ್ಲರೂ ಊಹಿಸಲು ಸಾಧ್ಯವಾಗದಂತಹ ದಾಖಲೆ ಸೃಷ್ಟಿಸಿದ್ದಾರೆ.

7 ತಿಂಗಳ ಗರ್ಭಿಣಿ ಆರ್ಚರ್ ಇತಿಹಾಸ
ಗ್ರೇಟ್ ಬ್ರಿಟನ್‌ನ ಆರ್ಚರ್ ಜೂಡಿ ಗ್ರಿನ್‌ಹ್ಯಾಮ್ ಅವರು 7 ತಿಂಗಳ ಗರ್ಭಿಣಿಯಾಗಿದ್ದರೂ ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಗೆದ್ದು ಇತಿಹಾಸವನ್ನು ಸೃಷ್ಟಿಸಿದ್ದಾರೆ. ಇದರೊಂದಿಗೆ ಗರ್ಭಿಣಿಯಾಗಿದ್ದಾಗ ಪದಕ ಗೆದ್ದ ಮೊದಲ ಪ್ಯಾರಾಲಿಂಪಿಕ್ ಅಥ್ಲೀಟ್ ಎನಿಸಿಕೊಂಡಿದ್ದಾರೆ. ಸೆಮಿಫೈನಲ್‌ನಲ್ಲಿ ಹೊಟ್ಟೆಯೊಳಗೆ ಮಗು ಚಲಿಸುತ್ತಿದ್ದಂತೆ ನೋವಿನಿಂದ ಒದ್ದಾಡುತ್ತಿದ್ದ ಆಕೆ, ಪಂದ್ಯ ಸೋತು ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು.
ಅಮೋಘ ಪ್ರದರ್ಶನ
31 ವರ್ಷದ ಜೂಡಿ ಗ್ರಿನ್‌ಹ್ಯಾಮ್ ಅವರು ಪ್ಯಾರಾಲಿಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಬ್ರಿಟನ್‌ಗೆ ಬಂಗಾರದ ಪದಕಗ ಗೆಲ್ಲುವ ನಿರೀಕ್ಷೆಯಲ್ಲಿದ್ದರು. ಆದರೆ ಈ ನಿರೀಕ್ಷೆಯನ್ನು ನಿಜ ಮಾಡಲು ಅವರಿಂದ ಸಾಧ್ಯವಾಗಿಲ್ಲ. ಅವರು
ಮಹಿಳೆಯರ ವೈಯಕ್ತಿಕ ಸ್ಪರ್ಧೆಯಲ್ಲಿ ಕಂಚಿನ ಪದಕದ ಪಂದ್ಯದಲ್ಲಿ ಅಮೆರಿಕದ ಆರ್ಚರ್ ಫೋಬೆ ಪ್ಯಾಟರ್ಸನ್ ಪೈನ್ ಅವರನ್ನು 142-141 ರಿಂದ ಸೋಲಿಸಿದರು .
ಗ್ರಿನ್‌ಹ್ಯಾಮ್ ಸೋಲಿಸಿದ ಅಮೆರಿಕದ ಆರ್ಚರ್ ಈ ಹಿಂದೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಗ್ರಿನ್‌ಹ್ಯಾಮ್ ಅವರ ಎಡಗೈ ಸಂಪೂರ್ಣ ನಿಷ್ಕ್ರಿಯಗೊಂಡಿದ್ದು, ಅವರ ಹೆಬ್ಬೆರಳಿನ ಅರ್ಧ ಭಾಗವು ಇಲ್ಲ. ಆದರೂ ಇರುವ ಒಂದು ಕೈ ಯಿಂದ ಕಂಚು ಗೆದ್ದು ದಾಖಲೆ ಬರೆದಿದ್ದಾರೆ.
ಗ್ರಿನ್‌ಹ್ಯಾಮ್ ಹೇಳಿದ್ದೇನು?
ಪದಕ ಗೆದ್ದ ಬಳಿಕ ಮಾತನಾಡಿದ ಗ್ರಿನ್‌ಹ್ಯಾಮ್, 'ಸೆಮಿಫೈನಲ್ ಪಂದ್ಯದ ವೇಳೆ ಹೊಟ್ಟೆಯೊಳಗೆ ಮಗು ಒದ್ದಾಗ ತುಂಬಾ ನೋವಾಯಿತು. ಆದರೆ, ನಾನು ನೀಡಿದ ಪ್ರದರ್ಶನದ ಮೇಲೆ ನನಗೆ ಹೆಮ್ಮೆ ಇದೆ. ಹಲವು ಕಷ್ಟ, ಸವಾಲುಗಳನ್ನು ದಾಟಿ ಈ ವೇದಿಕೆಗೆ ಬಂದಿದ್ದೇನೆ. ಉತ್ತಮ ಪ್ರದರ್ಶನ ನೀಡಿ ಪದಕ ಗೆಲ್ಲುತ್ತೇನೆ ಎಂದು ನಂಬಿದ್ದೆ. ಸದ್ಯ ಪದಕ ಗೆದ್ದಿದ್ದೇನೆ. ನಾನು ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದೇವೆ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications