For Quick Alerts
ALLOW NOTIFICATIONS  
For Daily Alerts

ಶಾಹಿದ್ ಅಫ್ರಿದಿ ಪುತ್ರಿಯನ್ನು 2ನೇ ಬಾರಿ ವಿವಾಹವಾಗಲಿದ್ದಾರೆ ಶಾಹೀನ್ ಶಾ ಅಫ್ರಿದಿ!; ಕಾರಣವೇನು?

ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಟಾರ್ ಎಡಗೈ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಅವರು 2023ರ ಏಷ್ಯಾ ಕಪ್ ಪಂದ್ಯಾವಳಿ ನಂತರ, ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಪುತ್ರಿ ಅನ್ಶಾ ಅಫ್ರಿದಿ ಅವರನ್ನು ಎರಡನೇ ಬಾರಿಗೆ ವಿವಾಹವಾಗಲಿದ್ದಾರೆ.

ವರದಿಗಳ ಪ್ರಕಾರ, ಸದ್ಯ ನಡೆಯುತ್ತಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಯ ಫೈನಲ್‌ ಪಂದ್ಯದ ಮುಗಿದು ಎರಡು ದಿನಗಳ ನಂತರ 23 ವರ್ಷದ ಕ್ರಿಕೆಟಿಗ ಶಾಹೀನ್ ಶಾ ಅಫ್ರಿದಿ ಸೆಪ್ಟೆಂಬರ್ 19ರಂದು ಮತ್ತೊಮ್ಮೆ ಅನ್ಶಾ ಅವರನ್ನು ವರಿಸಲಿದ್ದಾರೆ.

Shaheen Afridi and Ansha Afridi Set to Renew Wedding Vows After Asia Cup 2023: But Why?

ಶಾಹೀನ್ ಅಫ್ರಿದಿ ಮತ್ತು ಅನ್ಶಾ ಅಫ್ರಿದಿ 2023ರ ಫೆಬ್ರವರಿ ತಿಂಗಳಿನಲ್ಲಿ ಮೊದಲ ಬಾರಿಗೆ ವಿವಾಹವಾಗಿದ್ದರು. 2021ರಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ವಿವಾಹ ಕಾರ್ಯಕ್ರಮದಲ್ಲಿ ಪಾಕಿಸ್ತಾನ ನಾಯಕ ಬಾಬರ್ ಅಜಂ ಮತ್ತು ಶಾದಾಬ್ ಖಾನ್ ಸೇರಿದಂತೆ ಹಲವು ಕ್ರಿಕೆಟಿಗರು ಭಾಗವಹಿಸಿದ್ದರು.

ಆದಾಗ್ಯೂ, ಎರಡನೇ ಮದುವೆಯಾಗುವ ಮೂಲಕ ದೊಡ್ಡದಾಗಿ ಮತ್ತು ಅದ್ಧೂರಿಯಾಗಿ ಆಚರಿಸಲು ಈ ದಂಪತಿಗಳು ನಿರ್ಧರಿಸಿದ್ದಾರೆ. ಸಾಂಪ್ರದಾಯಿಕ ಅಫ್ರಿದಿ ಬುಡಕಟ್ಟು ಸಂಪ್ರದಾಯಗಳ ಮೂಲಕ ನಡೆದ ಮೊದಲ ಮದುವೆಯಲ್ಲಿ ಆಯ್ದ ಕೆಲವರು ಮಾತ್ರ ಭಾಗವಹಿಸಿದ್ದರು.

ಎರಡೂ ಕುಟುಂಬಗಳು ಮತ್ತು ಶಾಹೀನ್ ಅಫ್ರಿದಿ-ಅನ್ಶಾ ಅಫ್ರಿದಿ ಜೋಡಿಯು ದೊಡ್ಡ ಸಂಖ್ಯೆಯ ಜನರೊಂದಿಗೆ ತಮ್ಮ ಸಂಭ್ರಮವನ್ನು ಆಚರಿಸಲು ಎರಡನೇ ಬಾರಿಗೆ ವಿವಾಹವಾಗಲು ನಿರ್ಧರಿಸಿದರು.

ಸೆಪ್ಟೆಂಬರ್ 19ರಂದು ಕರಾಚಿಯಲ್ಲಿ ಅದ್ಧೂರಿ ಬಾರಾತ್ ಸಮಾರಂಭ ನಡೆಯಲಿದ್ದು, ಸೆಪ್ಟೆಂಬರ್ 21ರಂದು ಇಸ್ಲಾಮಾಬಾದ್‌ನ ಖಾಸಗಿ ಕಾರ್ಯಕ್ರಮದಲ್ಲಿ ಆರತಕ್ಷತೆ ನಡೆಯಲಿದೆ.

ಶಾಹೀನ್ ಶಾ ಅಫ್ರಿದಿ ಪ್ರಸ್ತುತ 2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಜಂಟಿ ಎರಡನೇ ಅತಿ ಹೆಚ್ಚು ವಿಕೆಟ್ ಟೇಕರ್ ಬೌಲರ್ ಆಗಿದ್ದಾರೆ. ಮೂರು ಪಂದ್ಯಗಳಲ್ಲಿ 14.86ರ ಸರಾಸರಿಯಲ್ಲಿ ಏಳು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಇನ್ನು ಸೆಪ್ಟೆಂಬರ್ 2ರಂದು ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಶಾಹೀನ್ ಶಾ ಅಫ್ರಿದಿ ಅವರು ಭಾರತದ ಅಗ್ರ ಕ್ರಮಾಂಕದ ಮೇಲೆ ಒತ್ತಡ ಹಾಕಿದರು. ನಂತರ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ವಿಕೆಟ್ ಪಡೆದು ಮಿಂಚಿದರು.

ಪಾಕಿಸ್ತಾನ ತಂಡವು ಪ್ರಸ್ತುತ 2023ರ ಏಷ್ಯಾ ಕಪ್‌ನಲ್ಲಿ ಅಜೇಯವಾಗಿದೆ. ಬುಧವಾರ ನಡೆದ ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿದೆ. ಇದೀಗ ಪಾಕಿಸ್ತಾನ ತಂಡವು ಸೆಪ್ಟೆಂಬರ್ 10ರ ಭಾನುವಾರದಂದು ಕೊಲಂಬೊದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತವನ್ನು ಎದುರಿಸಲಿದೆ.

Story first published: Saturday, September 9, 2023, 14:54 [IST]
Other articles published on Sep 9, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+