ಟೇಬಲ್ ಟೆನಿಸ್‌ನಲ್ಲಿ ಶರತ್ ಕಮಲ್ ಕಮಾಲ್, ಅತ್ಯುತ್ತಮ ಶ್ರೇಯಾಂಕ

ನವದೆಹಲಿ, ಏಪ್ರಿಲ್ 16: ಭಾರತದ ಅನುಭವಿ ಟೇಬಲ್ ಟೆನಿಸ್ ಆಟಗಾರ ಶರತ್ ಕಮಾಲ್ ಗುರುವಾರ (ಏಪ್ರಿಲ್ 16) ಅತ್ಯುತ್ತಮ ರ್ಯಾಂಕಿಂಗ್‌ನಲ್ಲಿ ಕಾಣಿಸಿಕೊಂಡ ಭಾರತದ ಆಟಗಾರನಾಗಿ ಗಮನ ಸೆಳೆದಿದ್ದಾರೆ. ಇಂಟರ್ ನ್ಯಾಷನಲ್ ಟೇಬಲ್ ಟೆನಿಸ್ ಫೆಡರೇಶನ್ (ಐಟಿಟಿಎಫ್) ಪ್ರಕಟಿಸಿರುವ ರ್ಯಾಂಕಿಂಗ್‌ನಲ್ಲಿ ಶರತ್ 31ನೇ ಸ್ಥಾನ ಪಡೆದುಕೊಂಡಿದ್ದಾರೆ.
ಟೇಬಲ್ ಟೆನಿಸ್ ನೂತನ ವಿಶ್ವ ರ್ಯಾಂಕಿಂಗ್‌ನಲ್ಲಿ ಒಟ್ಟು 7 ಸ್ಥಾನ ಜಿಗಿದಿರುವ 37ರ ಹರೆಯದ ಶರತ್ ಕಮಾಲ್, ತನ್ನದೇ ಸಹ ಆಟಗಾರ ಜಿ ಸತಿಯನ್ ಅವರನ್ನು ಹಿಂದಿಕ್ಕಿ ಅತ್ಯುತ್ತಮ ರ್ಯಾಂಕ್ ಆವರಿಸಿದ ಭಾರತೀಯನಾಗಿ ಗುರುತಿಸಿಕೊಂಡಿದ್ದಾರೆ.
ಕಳೆದ ತಿಂಗಳು ಶರತ್ ಅವರು ಓಮನ್ ಓಪನ್ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಟ್ರೋಫಿ ಗೆದ್ದಿದ್ದರು. ಇದು ಶರತ್‌ಗೆ ಕಳೆದ 10 ವರ್ಷಗಳಲ್ಲಿ ಲಭಿಸಿದ ಮೊದಲ ಐಟಿಟಿಎಫ್ ಪ್ರಶಸ್ತಿಯಾಗಿತ್ತು. ಈ ಚಾಂಪಿಯನ್ ಪಟ್ಟ ಶರತ್ ಅವರಿಗೆ ಅತ್ಯುತ್ತಮ ಶ್ರೇಯಾಂಕದ ಖುಷಿ ತಂದಿದೆ.
ನೂತನ ಟಿಟಿ ರ್ಯಾಂಕಿಂಗ್‌ನಲ್ಲಿ ಶರತ್ 31ನೇ ಸ್ಥಾನದಲ್ಲಿದ್ದರೆ, ಸತಿಯನ್ 32ರಲ್ಲಿದ್ದಾರೆ. ಇನ್ನು ಮಹಿಳೆಯರ ವಿಭಾಗದಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಮಣಿಕಾ ಭಾತ್ರಾ 63ರಲ್ಲಿದ್ದರೆ, ಸುತೀರ್ಥ ಮುಖರ್ಜೀ 95ರಲ್ಲಿದ್ದಾರೆ. ಟಾಪ್ 100ರೊಳಗೆ ಇದೇ ಮೊದಲ ಬಾರಿಗೆ ಮುಖರ್ಜೀ ಪ್ರವೇಶಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications