Paralympics 2024: ಪ್ಯಾರಾ ಆರ್ಚರ್ ಶೀತಲ್ ದೇವಿ ಪ್ರದರ್ಶನಕ್ಕೆ ಸಲಾಂ ಹೊಡೆದ ಕ್ರೀಡಾ ಜಗತ್ತು
ಕ್ರೀಡೆ ಎಂಬುದು ಬರೀ ಕೈ ಕಾಲು ಇದ್ದವರಿಗೆ ಮಾತ್ರ ಎಂದುಕೊಂಡಿದ್ದರೆ ಅದು ತಪ್ಪು.. ಮನಸ್ಸು ಧೃಡವಾಗಿದ್ದರೆ, ಯಾವ ಸಾಧನೆಯನ್ನಾದರೂ ಮಾಡಬಹುದು ಎಂಬುದಕ್ಕೆ ಪ್ಯಾರಾಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿರುವ ಪ್ಯಾರಾ ಅಥ್ಲೀಟ್‌ಗಳೇ ಸಾಕ್ಷಿ.. ಇವರ ಸಾಧನೆಗೆ ಕೋಟ್ಯಾಂತರ ಕ್ರೀಡಾಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ.
ನೀವು ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟವನ್ನು ಫಾಲೋ ಮಾಡ್ತಾ ಇದ್ದರೆ, ಈ ಕ್ರೀಡಾ ಕೂಟದಲ್ಲಿ ಒಂದು ಚಿತ್ರ ಎಲ್ಲರ ಗಮನ ಸೆಳೆಯಿತು. ಆ ಫೋಟೋ ಇಂಟರ್‌ನೆಟ್‌ನಲ್ಲಿ ಧೂಳು ಎಬ್ಬಸಿದೆ. ಎರಡೂ ಕೈಗಳು ಇದ್ದು ಸರಿಯಾಗಿ ಮಾಡದ ಸಾಧನೆಯನ್ನು, ಭಾರತದ ಅಥ್ಲೀಟ್ ಮಾಡಿದ್ದಾರೆ. ಭಾರತದ ಶೀತಲ್ ದೇವಿ, ಸದ್ಯ ಸಂಚಲನವನ್ನು ಮೂಡಿಸಿದ್ದಾರೆ. ಇವರು ತಮ್ಮ ಕಾಲುಗಳನ್ನೇ, ಕೈಗಳಂತೆ ಬಳಸಿಕೊಂಡು, ಆರ್ಚರಿಗೆ ಗುರಿ ಇಟ್ಟರೆ ಮುಗಿದೇ ಹೋಯಿತು ಅಂಕಗಳನ್ನು ಬಾಚಿಕೊಂಡು ಬಿಡ್ತಾರೆ.

ಟಾರ್ಗೆಟ್ 10 ರೀಚ್ ಆಗುವುದು ಇವರಿಗೆ ನೀರು ಕುಡಿದಷ್ಟೇ ಸುಲಭ.. ಇವರ ಕಣ್ಣುಗಳಿಗೆ ಬರೀ ಹಳದಿ ಸರ್ಕಲ್ ಮಾತ್ರ ಕಾಣುತ್ತದೇನು ಎಂಬಂತೆ ಗುರಿ ಇಟ್ಟು ಪಟಾರಾ ಅಂತಾ ಬಾಣ ಬಿಟ್ಟರೆ, ಅದು ಹೋಗಿ 10 ಅಂಕ ಪಡೆಯುತ್ತದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲೂ ಶೀತಲ್ ದೇವಿ ಜಿದ್ದಾಜಿದ್ದಿನ ಫೈಟ್ ನೀಡಿ, ಕೇವಲ 1 ಅಂಕದಿಂದ ಸೆಮಿಫೈನಲ್‌ಗೆ ಅರ್ಹತೆ ಪಡೆಯುವುದನ್ನು ಮಿಸ್ ಮಾಡಿಕೊಂಡರು. ಆದರೆ ಇವರಲ್ಲಿನ ಛಲ ದೇಶವಾಸಿಗಳಲ್ಲಿ ಪದಕದ ಆಸೆಯನ್ನು ಚಿಗುರಿಸಿದೆ.
ಶೀತಲ್, ತಮ್ಮ ಕಾಲ್‌ಗಳ ಬೊಟ್ಟುಗಳ ಸಹಾಯದಿಂದ ಒಂದು ಬಾಣ ಎತ್ತಿಕೊಂಡು, ಬಿಲ್ಲಿಗೆ ಕಾಲಿನ ಮುಖಾಂತರ ಇಟ್ಟು. ತಮ್ಮ ಗದ್ದದ ಮುಖಾಂತರ ಬಿಲ್ಲನ್ನು ಜಗ್ಗಿ ಪರ್ಫೆಕ್ಟ್ 10 ಬಾರಿಸುವ ಇವರ ಧಾಟಿಗೆ ವಿಶ್ವವೇ ಸಲಾಂ ಎಂದಿದೆ. ಅಂದಹಾಗೆ ಇವರು ಈ ಸಾಧನೆಯನ್ನು ಹೂವಿನ ಹಾಸಿಗೆಯ ಮೇಲೆ ಮಾಡಿದ್ದಾರೆ ಎಂದರೆ ಅದು ನಿಮ್ಮ ತಪ್ಪು ಕಲ್ಪನೆ. ಎಲ್ಲ ಅಥ್ಲೀಟ್‌ಗಳ ರೀತಿ ಇವರಿಗೂ ಕಲ್ಲು ಮುಳ್ಳುಗಳೇ ಮೊದಲ ಸನ್ಮಾನಗಳು.
ಕೈಗಳನ್ನು ಕಳೆದುಕೊಂಡಿದ್ದೇಗೆ?
ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಲೋಯಿ ಧಾರ್ ಎಂಬ ದೂರದ ಹಳ್ಳಿಯ ಬಡ ಕುಟುಂಬದಲ್ಲಿ ಶೀತಲ್ ದೇವಿ ಜನಿಸಿದರು. ಹುಟ್ಟಿನಿಂದಲೇ ಫೋಕೊಮೆಲಿಯಾ ಕಾಯಿಲೆಯಿಂದ ಬಳಲುತ್ತಿದ್ದು, ಪರಿಣಾಮ ತಮ್ಮ ಎರಡು ಕೈಗಳನ್ನು ಕಳೆದುಕೊಂಡರು. ಅವರ ತಂದೆ-ತಾಯಿ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದವರು.
ಹುಟ್ಟಿನಿಂದಲೇ ಎರಡೂ ಕೈಗಳಿಲ್ಲದೆ ಬೆಳೆದ ಶೀತಲ್ ಅವರಿಗೆ ಅಂಗವೈಕಲ್ಯ ಶಾಪವಾಗಲಿಲ್ಲ. ಆದರೆ 2021ರಲ್ಲಿ
ಆರ್ಚರಿ ಕಲಿಯಲು ಮುಂದಾದ ಅವರಿಗೆ ಸವಾಲಾಗಿತ್ತು. ಏಕೆಂದರೆ ಆರಂಭದಲ್ಲಿ ಅವರಿಗೆ ಬಿಲ್ಲು ಎತ್ತಲು ಕೂಡ ಸಾಧ್ಯವಾಗಿರಲಿಲ್ಲ.
ಆದರೆ ಛಲ ಬಿಡದ ಶೀತಲ್ ಏನನ್ನಾದರೂ ಸಾಧಿಸಬೇಕೆನ್ನುವ ಉತ್ಸಾಹದಿಂದ ಕಠಿಣ ಅಭ್ಯಾಸ ನಡೆಸಿದರು. ನಂತರ ಆದರೆ ನಿರಂತರ ಪ್ರಯತ್ನದಿಂದಾಗಿ ತನ್ನ ಬಲಗಾಲಿನಿಂದ ಬಿಲ್ಲನ್ನು ಎತ್ತಲು ಪ್ರಾರಂಭಿಸಿದ ಅವರು ಇಂದು ವಿಶ್ವ ದಾಖಲೆ ನಿರ್ಮಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications