ಭಾರತೀಯ ಕ್ರಿಕೆಟಿಗ ಶಿಖರ್ ಧವನ್ ಮತ್ತು ಅವರ ಆಯೆಷಾ ಮುಖರ್ಜಿ ಅವರಿಗೆ ದೆಹಲಿಯ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನ ನೀಡಿದ ವರದಿಯ ನಂತರ, ಕ್ರಿಕೆಟಿಗ ತನ್ನ ಮಾಜಿ ಸಂಗಾತಿಯಿಂದ ಮಾನಸಿಕ ಚಿತ್ರಹಿಂಸೆಗೆ ಒಳಗಾಗಿದ್ದಾನೆ ಎಂದು ಈಗ ತಿಳಿದುಬಂದಿದೆ.
ಶಿಖರ್ ಧವನ್ ಅವರ ಆರೋಪಗಳನ್ನು ಸಮರ್ಥಿಸಿಕೊಳ್ಳಲು ಆಯೆಷಾ ವಿಫಲರಾದ ಹಿನ್ನೆಲೆಯಲ್ಲಿ, ದೆಹಲಿ ನ್ಯಾಯಾಲಯ ಶಿಖರ್ ಧವನ್‌ಗೆ ವಿಚ್ಛೇದನ ನೀಡಿತ್ತು. ಶಿಖರ್ ಧವನ್‌ಗೆ ಹಲವು ವರ್ಷಗಳ ಕಾಲ ತನ್ನ ಮಗನಿಂದ ಪ್ರತ್ಯೇಕವಾಗಿ ವಾಸಿಸುವಂತೆ ಆಯೆಷಾ ಮುಖರ್ಜಿ ಒತ್ತಾಯಿಸಿದ್ದಳು ಎಂದು ನ್ಯಾಯಾಲಯದ ತೀರ್ಪು ಹೇಳಿದೆ.

ಬಾರ್ ಮತ್ತು ಬೆಂಚ್ ವರದಿಯ ಪ್ರಕಾರ, ಶಿಖರ್ ಧವನ್ ಆಸ್ಟ್ರೇಲಿಯಾದಲ್ಲಿ ಖರೀದಿಸಿದ ಮೂರು ಆಸ್ತಿಗಳಲ್ಲಿ ಶೇ.99ರಷ್ಟು ಪಾಲನ್ನು ಆಯೆಷಾ ಕೇಳಿದ್ದಳು ಎಂದು ಭಾರತೀಯ ಕ್ರಿಕೆಟಿಗ ಆರೋಪಿಸಿದ್ದಾರೆ.
ಆಯೆಷಾ ಇತರ ಎರಡು ಆಸ್ತಿಗಳ ಜಂಟಿ ಮಾಲೀಕರಾಗಲು ಬಯಸಿದ್ದಳು. ಇದಲ್ಲದೆ, ಕೋವಿಡ್-19 ವೇಳೆ ತನ್ನ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಕ್ಕಾಗಿ ಶಿಖರ್ ಧವನ್‌ನೊಂದಿಗೆ ಜಗಳವಾಡಿದ್ದಳು ಎಂಬ ವಿಷಯ ಬೆಳಕಿಗೆ ಬಂದಿದೆ.

ಬಿಸಿಸಿಐ ಅಧಿಕಾರಿಗಳು ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ತಂಡಗಳ ಮಾಲೀಕರಿಗೆ ಮಾನಹಾನಿಕರ ಸಂದೇಶಗಳನ್ನು ಕಳುಹಿಸಿದ್ದಾಳೆ ಎಂಬ ಶಿಖರ್ ಧವನ್ ಆರೋಪಕ್ಕೆ ಆಯೆಷಾ ಅವರ ಪ್ರತಿವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ.
ಮಾಸಿಕ ಪಾವತಿಯನ್ನು ಕಳುಹಿಸುವಂತೆ ಶಿಖರ್ ಧವನ್‌ಗೆ ಒತ್ತಡ ಹೇರಲು ಆತನ ಮೂವರು ಸ್ನೇಹಿತರಿಗೆ ಮಾತ್ರ ಸಂದೇಶ ಕಳುಹಿಸಿದ್ದೇನೆ ಎಂದು ಆಯೆಷಾ ಹೇಳಿದ್ದರು.
ಶಿಖರ್ ಧವನ್ ವಿಚ್ಛೇದನ ಪಡೆದ ನಂತರ, ವಕೀಲೆ ದೀಪಿಕಾ ಭಾರದ್ವಾಜ್ ಟ್ವೀಟ್ ಮಾಡಿದ್ದು, ಭಾರತದ ಕ್ರಿಕೆಟಿಗ ಶಿಖರ್ ಧವನ್ ಅವರು ತಮ್ಮ ಮಾಜಿ ಪತ್ನಿ ಆಯೆಷಾಗೆ 8 ವರ್ಷಗಳ ಕಾಲ ಬರೋಬ್ಬರಿ 13 ಕೋಟಿ ರೂಪಾಯಿ ಕಳುಹಿಸಿದ್ದಾರೆ. ಆದರೆ ದಂಪತಿಗಳು 8 ವರ್ಷಗಳ ದಾಂಪತ್ಯದಲ್ಲಿ ನಿರಂತರವಾಗಿ ಒಟ್ಟಿಗೆ ವಾಸಿಸಲು ಸಾಧ್ಯವಾಗಿಲ್ಲ.
ಆಯೆಷಾ ಮುಖರ್ಜಿ ಮತ್ತು ಶಿಖರ್ ಧವನ್ 2012ರಲ್ಲಿ ವಿವಾಹವಾಗಿದ್ದರು. ಈ ದಂಪತಿಯ ಮಗ ಜೊರಾವರ್ ಕೂಡ ಆಸ್ಟ್ರೇಲಿಯಾದಲ್ಲಿ ಜನಿಸಿದ ಕಾರಣ, ಶಿಖರ್ ಧವನ್ ತನ್ನ ಮಗನೊಂದಿಗೆ ದೀರ್ಘಕಾಲ ಜೀವನ ನಡೆಸಲು ಸಾಧ್ಯವಾಗಿಲ್ಲ.

ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿದ ವಕೀಲೆ ದೀಪಿಕಾ ಭಾರದ್ವಾಜ್, ಆಯೆಷಾ ತನ್ನ ಹಿಂದಿನ ಪತಿಯಿಂದಲೂ ಮಕ್ಕಳಿಗೆ ಬೆಂಬಲವನ್ನು ಪಡೆಯುತ್ತಿದ್ದಾಗ, ಹಿಂದಿನ ಮದುವೆಯಿಂದ ತನ್ನ ಇಬ್ಬರು ಹೆಣ್ಣುಮಕ್ಕಳಿಗಾಗಿ ಶಿಖರ್ ಧವನ್‌ಗೆ ಹಣ ಪಾವತಿಸುವಂತೆ ಕೇಳಿದ್ದಾಳೆ ಎಂದು ಬರೆದುಕೊಂಡಿದ್ದಾರೆ.
ಶಿಖರ್ ಧವನ್ ಅವರು ಆಯೆಷಾ ಮತ್ತು ಮಕ್ಕಳ ವಿದೇಶಿ ಪ್ರಯಾಣ, ರಜಾದಿನಗಳು ಮತ್ತು ನಾಯಿ ತರಬೇತಿಗಾಗಿ ಕೋಟಿ ಕೋಟಿ ಪಾವತಿಸಿದ್ದಾರೆ.
ವರದಿಗಳ ಪ್ರಕಾರ, ಆಸ್ಟ್ರೇಲಿಯಾದಲ್ಲಿರುವ ಎಲ್ಲಾ ಆಸ್ತಿಗಳ ಹಕ್ಕನ್ನು ಆಯೆಷಾ ಹೆಸರಿಗೆ ವರ್ಗಾಯಿಸಲು ಶಿಖರ್ ಧವನ್ ನಿರಾಕರಿಸಿದಾಗ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಇದೀಗ ಶಿಖರ್ ಧವನ್ ತಮ್ಮ ಪುತ್ರ ಜೋರಾವರ್ ಪಾಲನೆ ಹಕ್ಕನ್ನು ಪಡೆಯಲು ಮತ್ತೊಂದು ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಶಿಖರ್ ಧವನ್‌ಗೆ ಜೊರಾವರ್ ಭೇಟಿಯ ಹಕ್ಕುಗಳನ್ನು ನೀಡುವಂತೆ ನ್ಯಾಯಾಲಯವು ಆಯೆಷಾಗೆ ಕೇಳಿದೆ. ಆದರೆ ಮಗ ಆಸ್ಟ್ರೇಲಿಯನ್ ಪ್ರಜೆಯಾಗಿರುವುದರಿಂದ ಅವರು ಅದರ ಮೇಲೆ ತೀರ್ಪು ನೀಡಲು ಸಾಧ್ಯವಿಲ್ಲ ಎಂದು ಅರ್ಥಮಾಡಿಕೊಂಡಿದ್ದರಿಂದ ಕಸ್ಟಡಿಯ ಬಗ್ಗೆ ಏನನ್ನೂ ಪ್ರತಿಕ್ರಿಯಿಸಲಿಲ್ಲ.
ಇನ್ನೊಂದು ಬೆಳವಣಿಗೆಯಲ್ಲಿ, ಜೊರಾವರ್ ಅವರ ಪಾಲನೆ ಬಗ್ಗೆ ನಿರ್ಧರಿಸಲು ಮಧ್ಯ ಪ್ರವೇಶಿಸುವಂತೆ ದೆಹಲಿಯ ಕೌಟುಂಬಿಕ ನ್ಯಾಯಾಲಯವು ಭಾರತ ಸರ್ಕಾರಕ್ಕೆ ಮನವಿ ಮಾಡಿದೆ.