Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಗ್ಬಿ ಆಟಗಾರ ಸೋಲಿಯೊಲಾ ಮುಖದ ಒಳಗಿದೆ ಬರೋಬ್ಬರಿ 20 ಸ್ಕ್ರೂಗಳು!

Sia Soliola suffers multiple facial fractures, has 20 screws inserted into face

ಕ್ಯಾನ್ಬೆರಾ, ಜುಲೈ 11: ನ್ಯೂಜಿಲೆಂಡ್ ರಗ್ಬಿ ತಂಡದ ಮಾಜಿ ಫಾರ್ವರ್ಡ್ ಆಟಗಾರ, ಈಗ ಆಸ್ಟ್ರೇಲಿಯಾದ ರಗ್ಬಿ ಲೀಗ್‌ನ ತಂಡ ಕ್ಯಾನ್ಬೆರಾ ರೈಡರ್ಸ್ ಪರ ಆಡುವ ಸಿಯಾ ಸೋಲಿಯೊಲಾ ಅವರ ಮುಖದೊಳಗೆ ಬರೋಬ್ಬರಿ 20 ಸ್ಕ್ರೂಗಳಿವೆ.

ಕಳೆದ ಶುಕ್ರವಾರ (ಜುಲೈ 3) ಆಸ್ಟ್ರೇಲಿಯಾ ನ್ಯಾಷನಲ್ ರಗ್ಬಿ ಲೀಗ್‌ನಲ್ಲಿ ಸೇಂಟ್ ಜಾರ್ಜ್ ಇಲವಾರಾ ಡ್ರಾಗನ್ಸ್ ಮತ್ತು ಕ್ಯಾನ್ಬೆರಾ ರೈಡರ್ಸ್ ತಂಡಗಳ ಮಧ್ಯೆ 8ನೇ ಸುತ್ತಿನ ಕಾದಾಟ ನಡೆದಿತ್ತು. ಈ ಪಂದ್ಯದಲ್ಲಿ ಕ್ಯಾನ್ಬೆರಾ ರೈಡರ್ಸ್ ಗೆಲುವನ್ನಾಚರಿಸಿತ್ತು.

ರೈಡರ್ಸ್ ಗೆಲುವಿಗಾಗಿ ಗುದ್ದಾಡಿಕೊಂಡಿದ್ದರಿಂದ ಸಿಯಾ ಸೋಲಿಯೊಲಾ ಅವರ ಮುಖಕ್ಕೆ ಗಂಭೀರ ಗಾಯವಾಗಿತ್ತು. ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ಜನಿಸಿರುವ ಸೋಲಿಯೊಲಾ ಮುಖದ ಶಸ್ತ್ರ ಚಿಕಿತ್ಸೆಯನ್ನು ವೈದ್ಯರೇನೋ ಯಶಸ್ವಿಯಾಗಿ ಮುಗಿಸಿದ್ದಾರೆ. ಆದರೆ ಸೋಲಿಯೊಲಾ ಮುಖದೊಳಗೀಗ ಒಟ್ಟು 20 ಸ್ಕ್ರೂಗಳನ್ನು ಅಳವಡಿಸಲಾಗಿದೆ.

Sia Soliola suffers multiple facial fractures, has 20 screws inserted into face

ಪೂರ್ತಿ ನಜ್ಜುಗುಜ್ಜಾಗಿದ್ದ ಸೋಲಿಯೊಲಾ ಮುಖವನ್ನು ಹೇಗೋ ಸರಿ ಮಾಡಲಾಗಿದೆ. ಬಾಯಿ ಪೂರ್ತಿ ಸ್ಕ್ರೂಗಳೇ ತುಂಬಿರುವ 33ರ ಹರೆಯದ ಸೋಲಿಯೊಲಾ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಈಗಲೂ ಹಾಸ್ಯ ಮನೋಭಾವ ಬಿಡದ ಸೋಲಿಯೊಲಾ, ತನ್ನ ಮುಖಕ್ಕೆ ಸ್ಕ್ರೂ ಅಳವಡಿಸಿರುವ ಎಕ್ಸ್‌ರೇ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡು, 'ನೇಲ್ಡ್ ಇಟ್' ಅಂತ ತಮಾಷೆಯಾಗಿ ಬರೆದುಕೊಂಡಿದ್ದಾರೆ.

Story first published: Saturday, July 11, 2020, 16:06 [IST]
Other articles published on Jul 11, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+