Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪದ್ಮಶ್ರೀ ಪ್ರಶಸ್ತಿಗೆ ಬಜರಂಗ್ ಪೂನಿಯಾ, ವಿನೇಶ್ ಫೋಗಟ್ ಹೆಸರು ಶಿಫಾರಸು

Sports Ministry recommends Bajrang Punia for Padma Shri

ನವದೆಹಲಿ, ಅಕ್ಟೋಬರ್ 3: ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ತನ್ನ ಹೆಸರನ್ನು ಶಿಫಾರಸು ಮಾಡದಿರುವ ಬಗ್ಗೆ ತಾನು ಭಾರತದ ಕ್ರೀಡಾ ಪ್ರಾಧಿಕಾರದ ವಿರುದ್ಧ ಕೋರ್ಟಿನ ಮೊರೆ ಹೋಗುವುದಾಗಿ ಬೆದರಿಸಿದ್ದ ರಸ್ಲರ್ ಬಜರಂಗ್ ಪೂನಿಯಾ ಅವರ ಹೆಸರನ್ನು ಕ್ರೀಡಾ ಪ್ರಾಧಿಕಾರ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಿದೆ.

ಬಜರಂಗ್ ಜೊತೆ ಮತ್ತೊಬ್ಬ ರಸ್ಲರ್ ವಿನೇಶ್ ಫೋಗಟ್ ಅವರ ಹೆಸರನ್ನೂ ಕ್ರೀಡಾ ಸಚಿವಾಲಯ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಿದೆ. ಇಬ್ಬರೂ ರಸ್ಲರ್ ಈ ಬಾರಿ ನಡೆದ ಇಂಡೋನೇಷ್ಯಾ ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಬಂಗಾರ ಗೆದ್ದಿದ್ದರು.

ಖೇಲ್ ರತ್ನಾ ಪ್ರಶಸ್ತಿ ಸಿಗುವುದಕ್ಕೂ ಮುನ್ನ ಕ್ರೀಡಾಪಟುವೊಬ್ಬ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸ್ಸಾಗುತ್ತಿರುವುದು ಇದೇ ಮೊದಲೇನಲ್ಲ. ಈ ಬಾರಿ ಖೇಲ್ ರತ್ನಾ ಸ್ವೀಕರಿಸಿದ್ದ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರೂ ಅದಕ್ಕೂ ಮುನ್ನ ಪದ್ಮಶ್ರೀ ಪಡೆದಿದ್ದರು. ಪದ್ಮಶ್ರೀ, ಭಾರತದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ನಾಲ್ಕನೆಯ ದೊಡ್ಡ ಪ್ರಶಸ್ತಿಯಾಗಿದೆ.

Story first published: Wednesday, October 3, 2018, 17:54 [IST]
Other articles published on Oct 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+