Kaviya Maran: SRH ತಂಡದ ಒಡತಿ ಕಾವ್ಯ ಮಾರನ್‌ಗೆ ಮದುವೆ ಪ್ರಸ್ತಾಪ ಮಾಡಿದ ದಕ್ಷಿಣ ಆಫ್ರಿಕಾ ಪ್ರೇಕ್ಷಕ

ಸನ್ ನೆಟ್‌ವರ್ಕ್ ಹಾಗೂ ಟಿ20 ಲೀಗ್ ಫ್ರಾಂಚೈಸಿಗಳಾದ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡಗಳ ಸಹ-ಮಾಲೀಕರಾದ ಮಾಲೀಕ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯ ಮಾರನ್ ಹಲವು ವರ್ಷಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 'ಮಿಸ್ಟರಿ ಗರ್ಲ್' ಎಂದೇ ಹೆಸರುವಾಸಿಯಾಗಿದ್ದಾಳೆ. ಮೈದಾನದಲ್ಲಿ ತನ್ನ ತಂಡವನ್ನು ಹಾಗೂ ಆಟಗಾರರಿಗೆ ಬೆಂಬಲಿಸುವಾಗ ಕ್ಯಾಮೆರಾ ಕಣ್ಣಿಗೆ ಬೀಳುವ ಕಾವ್ಯ ಮಾರನ್‌ಗೆ ಟಿವಿ ಪ್ರೇಕ್ಷಕರು ಸಹ ಫಿದಾ ಆಗಿದ್ದಾರೆ.
ಐಪಿಎಲ್ ಹರಾಜಿನ ವೇಳೆ ಮತ್ತು ಐಪಿಎಲ್ ಪಂದ್ಯಾವಳಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪಂದ್ಯವಿರುವ ವೇಳೆ ಕಾಣಿಸಿಕೊಳ್ಳುವ ಕಾವ್ಯ ಮಾರನ್ ಲಕ್ಷಾಂತರ ಭಾರತೀಯ ಯುವಕರ ಮನ ಕದ್ದಿದ್ದಾಳೆ. ಕಾವ್ಯ ಮಾರನ್ ಭಾರತದ ಲಕ್ಷಾಂತರ ಐಪಿಎಲ್ ಅಭಿಮಾನಿಗಳ ಕನಸಿನ ಪ್ರಿಯತಮೆಯಾಗಿದ್ದು, ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ದೊಡ್ಡ ಬೆಂಬಲಿಗರಲ್ಲಿ ಒಬ್ಬರಾಗಿದ್ದಾರೆ.
ಇದೀಗ ಕಾವ್ಯ ಮಾರನ್ ಜನಪ್ರಿಯತೆ ಈಗ ವಿದೇಶಿ ಕ್ರಿಕೆಟ್ ಲೀಗ್ SA20ಗೂ ತಲುಪಿದೆ. ಐಪಿಎಲ್‌ನ ಈ "ಮಿಸ್ಟರಿ ಗರ್ಲ್' ಗುರುವಾರ, ಜನವರಿ 19ರಂದು ಪರ್ಲ್‌ನ ಬೋಲ್ಯಾಂಡ್ ಪಾರ್ಕ್ ಮೈದಾನದಲ್ಲಿ ಪಾರ್ಲ್ ರಾಯಲ್ಸ್ ತಂಡದ ವಿರುದ್ಧ ಸನ್‌ರೈಸರ್ಸ್ ಈಸ್ಟರ್ನ್ ಕೇಪ್‌ನ ಪಂದ್ಯದ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಅಭಿಮಾನಿಯಿಂದ "ಮದುವೆ ಪ್ರಸ್ತಾಪ'ವನ್ನು ಪಡೆದಳು.

ಪಾರ್ಲ್ ರಾಯಲ್ಸ್ ಇನ್ನಿಂಗ್ಸ್‌ನ ಎಂಟನೇ ಓವರ್ ಮುಗಿದ ನಂತರ, ಹುಲ್ಲಿನ ಹಾಸಿನ ಮೇಲೆ ಕುಳಿತು ಪಂದ್ಯವನ್ನು ವೀಕ್ಷಿಸುತ್ತಿದ್ದ ಪ್ರೇಕ್ಷಕನೋರ್ವ ಹೃದಯದ ಎಮೋಜಿಯೊಂದಿಗೆ "ಕಾವ್ಯ ಮಾರನ್, ನೀವು ನನ್ನನ್ನು ಮದುವೆಯಾಗುತ್ತೀರಾ?" ಎಂಬ ಫಲಕವನ್ನು ಹಿಡಿದಿದ್ದಾಗ, ಆತನ ಮೇಲೆ ಕ್ಯಾಮೆರಾಗಳು ಕೇಂದ್ರೀಕರಿಸಿದವು.
ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡವು ಈ ಬಾರಿ ಡೇವಿಡ್ ಮಿಲ್ಲರ್ ನಾಯಕತ್ವದ ಪಾರ್ಲ್ ರಾಯಲ್ಸ್ ವಿರುದ್ಧ ಸತತ ಮೂರನೇ ಗೆಲುವಿನೊಂದಿಗೆ 2023 SA20 ಲೀಗ್‌ನ ಅಂಕಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿತು.
ಕಾವ್ಯ ಮಾರನ್ ಮಾಲೀಕತ್ವ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡದ ಆಲ್‌ರೌಂಡರ್ ಮಾರ್ಕೊ ಜಾನ್ಸೆನ್ ಅಜೇಯ 21 ರನ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅಜೇಯ 18 ರನ್ ಬಾರಿಸುವ ಮೂಲಕ ಐದು ವಿಕೆಟ್‌ಗಳ ಜಯ ಸಾಧಿಸಲು ನೆರವಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications