Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚೆನ್ನೈಗೆ ಸೋಲಿಣಿಸಿ 'ವಿಸಿಲ್ ಪೋಡು' ಸ್ಟೈಲ್‌ನಲ್ಲಿ ಕಿಚಾಯಿಸಿದ ಇಶಾನ್ ಕಿಶನ್

SRH Vs CSK IPL 2026: ಚೆಪಾಕ್‌ನಲ್ಲಿ ನಡೆದ ಐಪಿಎಲ್ 2026ರ ನಿರ್ಣಾಯಕ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದು ಪ್ಲೇಆಫ್‌ಗೆ ಲಗ್ಗೆ ಇಟ್ಟಿದೆ. ಈ ರೋಚಕ ಗೆಲುವಿನ ಬಳಿಕ ಎಸ್‌ಆರ್‌ಎಚ್ ಓಪನರ್ ಇಶಾನ್ ಕಿಶನ್ ಮಾಡಿದ ಸಂಭ್ರಮಾಚರಣೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಪಂದ್ಯ ಮುಗಿದ ಬಳಿಕ ಇಶಾನ್ ಕಿಶನ್ ಅವರು ಸಿಎಸ್‌ಕೆಯ ಜನಪ್ರಿಯ ಸ್ಲೋಗನ್ ಆದ 'ವಿಸಿಲ್ ಪೋಡು' ಸನ್ನೆ ಮಾಡುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್‌ ಅಭಿಮಾನಿಗಳನ್ನು ತಮಾಷೆಯಾಗಿ ಕೆಣಕಿದರು. ಮೈದಾನದಲ್ಲಿ ಸಹ ಆಟಗಾರರೊಂದಿಗೆ ಸಂಭ್ರಮಿಸುತ್ತಾ ಗ್ಯಾಲರಿಯತ್ತ ತಿರುಗಿ ಕಿಶನ್ ಮಾಡಿದ ಈ ತುಂಟಾಟದ ವಿಡಿಯೋಗಳು ಮತ್ತು ಫೋಟೋಗಳು ವೈರಲ್ ಆಗಿವೆ.

SRH vs CSK IPL 2026 Ishan Kishan s Whistle Podu Celebration Goes Viral After SRH Playoff Entry

ಬ್ಯಾಟಿಂಗ್‌ನಲ್ಲಿ ಮಿಂಚಿದ ಕಿಶನ್

ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್‌ ಡೆವಾಲ್ಡ್ ಬ್ರೆವಿಸ್ ಅವರ 44 ರನ್ ನೆರವಿನಿಂದ 180 ರನ್ ಕಲೆಹಾಕಿ 181 ರನ್‌ಗಳ ಸಾಧಾರಣ ಗುರಿ ನೀಡಿದರು. ಆದರೆ ಈ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ಪರ ಇಶಾನ್ ಕಿಶನ್ ಅಬ್ಬರದ ಬ್ಯಾಟಿಂಗ್ ಮಾಡಿದರು. ಸಿಎಸ್‌ಕೆ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಇಶಾನ್‌ ಕಿಶನ್ ಕೇವಲ 47 ಎಸೆತಗಳಲ್ಲಿ 70 ರನ್ ಚಚ್ಚಿದರು. ಇವರಿಗೆ ಹೆನ್ರಿಚ್ ಕ್ಲಾಸನ್ (47) ಉತ್ತಮ ಸಾಥ್ ನೀಡಿದ್ದರಿಂದ ಹೈದರಾಬಾದ್ ಸುಲಭವಾಗಿ ಜಯ ದಾಖಲಿಸಿತು.

ಸೋತರೂ ಎದೆಗುಂದದ ಋತುರಾಜ್ ಗಾಯಕ್ವಾಡ್

ಪಂದ್ಯದ ನಂತರ ಮಾತನಾಡಿದ ಸಿಎಸ್‌ಕೆ ನಾಯಕ ಋತುರಾಜ್ ಗಾಯಕ್ವಾಡ್ ಅವರು, ಸೋಲಿನ ನಡುವೆಯೂ ತಂಡದ ಹೋರಾಟವನ್ನು ಮೆಚ್ಚಿಕೊಂಡರು. "ನಾವು ಕೊನೆಯ ಓವರ್‌ವರೆಗೂ ಪೈಪೋಟಿ ನೀಡಿದೆವು. ಕೆಲವು ಸಣ್ಣ ತಪ್ಪುಗಳು ನಮಗೆ ಮುಳುವಾದವು. ಆದರೆ ತಂಡದ ಪ್ರತಿಯೊಬ್ಬ ಆಟಗಾರನೂ ಉತ್ತಮವಾಗಿ ಆಡಿದ್ದಾರೆ," ಎಂದರು. ಅಲ್ಲದೆ ಸರಣಿಯುದ್ದಕ್ಕೂ ಉತ್ತಮವಾಗಿ ಆಡುತ್ತಿರುವ ಸಂಜು ಸ್ಯಾಮ್ಸನ್ ಅವರ ಪ್ರದರ್ಶನವನ್ನು ಶ್ಲಾಘಿಸಿದರು.

ಈ ಗೆಲುವಿನೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ಅಧಿಕೃತವಾಗಿ ಪ್ಲೇಆಫ್ ಪ್ರವೇಶ ಪಡೆದಿದೆ. ತವರು ಮೈದಾನದಲ್ಲೇ ಸೋತ ಚೆನ್ನೈ ಸೂಪರ್ ಕಿಂಗ್ಸ್‌ಗೆ ಈಗ ಮುಂದಿನ ಹಂತ ತಲುಪಲು ಬೇರೆ ತಂಡಗಳ ಫಲಿತಾಂಶ ಹಾಗೂ ನೆಟ್ ರನ್ ರೇಟ್‌ನ ಲೆಕ್ಕಾಚಾರಗಳು ಮುಖ್ಯವಾಗಿವೆ. ಒಟ್ಟಿನಲ್ಲಿ ಈ ಪಂದ್ಯದ ಬಳಿಕ ಗಮನ ಸೆಳೆದಿದ್ದು ಮಾತ್ರ ಇಶಾನ್ ಕಿಶಾನ್ ಮಾಡಿದ 'ವಿಸಿಲ್ ಪೋಡು' ಸಂಭ್ರಮಾಚರಣೆ.

Story first published: Tuesday, May 19, 2026, 18:34 [IST]
Other articles published on May 19, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+