Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಥ್ಲೆಟಿಕ್ ಚಾಂಪಿಯನ್‌ಶಿಪ್‌ಗೆ ಸಾಕ್ಷಿಯಾಗಲಿದೆ ಮಂಗಳೂರು

ಮಂಗಳೂರು, ಏ. 23 : ಕರಾವಳಿ ಜಿಲ್ಲೆ ಆತಿಥ್ಯಕ್ಕೆ ಹೆಸರುವಾಸಿ. ಇದೀಗ ಕರಾವಳಿ ಪ್ರತಿಷ್ಠಿತ ಪೆಡರೇಶನ್ ಕಪ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ಗೆ ಸಿದ್ಧವಾಗುತ್ತಿದೆ. ಏ.30ರಿಂದ ಮೇ 4ರ ವರೆಗೆ ಕಡಲ ತಡಿಯಲ್ಲಿ ನಡೆಯುವ ಚಾಂಪಿಯನ್‌ ಶಿಪ್‌ಗಾಗಿ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.

ಸುಮಾರು 700 ಕ್ರೀಡಾಪಟುಗಳು, 300ಕ್ಕೂ ಅಧಿಕ ಅಧಿಕಾರಿಗಳು, ತರಬೇತುದಾರರು, ತಾಂತ್ರಿಕ ಸಿಬ್ಬಂದಿ ಈ ಕೂಟದಲ್ಲಿ ಭಾಗವಹಿಸುತ್ತಿರುವುದರಿಂದ ಅವರಿಗಾಗಿ ಮಂಗಳೂರಿನ ಹೆಚ್ಚಿನ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ.

Federation Cup

ಕರಾವಳಿಯ ಫುಡ್ : ಕೂಟದಲ್ಲಿ ಪಾಲ್ಗೊಳ್ಳುತ್ತಿರುವ 1,300ಕ್ಕೂ ಹೆಚ್ಚು ಮಂದಿಗೆ ಕೂಟ ನಡೆಯುವ ಐದು ದಿನ ಕರಾವಳಿಯ ಖಾದ್ಯ, ತಿಂಡಿ, ತಿನಿಸು ಸವಿಯುವ ಭಾಗ್ಯ ಲಭಿಸಲಿದೆ. ವೆಜ್ ಹಾಗೂ ನಾನ್‌ವೆಜ್ ಫುಡ್‌ಗಳನ್ನು ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.

47 ಚಿನ್ನದ ಪದಕ : ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ 47 ಚಿನ್ನದ ಪದಕ್ಕಾಗಿ ಕ್ರೀಡಾಪಟುಗಳು ಸೆಣಸಾಡಲಿದ್ದಾರೆ. ಲಾಂಗ್ ಜಂಪ್, ಹೈಜಂಪ್, ಪೋಲ್‌ವಾಲ್ಟ್, ಟ್ರಿಪಲ್ ಜಂಪ್, ಶಾಟ್ ಪುಟ್, ಡಿಸ್ಕಸ್ ತ್ರೋ, ಹ್ಯಾಮರ್ ತ್ರೋ, ಜಾವೆಲಿನ್ ತ್ರೋ, 4*100ಮೀ. ರಿಲೇ, 4*400ಮೀ. ರಿಲೇ ಮುಂತಾದ ಸ್ಪರ್ಧೆಗಳಿವೆ.

Athletics

ಮುಂದೆ ಚೀನಾದಲ್ಲಿ ನಡೆಯಲಿರುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್, ಬೀಜಿಂಗ್‌ನಲ್ಲಿ ನಡೆಯಲಿರುವ ವರ್ಲ್ಡ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಮತ್ತು 2016ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದಕ್ಕಾಗಿ ಕ್ರೀಡಾಪಟುಗಳು ಇಲ್ಲಿ ಅರ್ಹತೆ ಪಡೆಯಲಿದ್ದಾರೆ.

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+