ಏಷ್ಯನ್ ಗೇಮ್ಸ್: ಭಾರತ ತಂಡದಿಂದ ಸ್ಟೀಪಲ್ ಚೇಸರ್ ನವೀನ್ ಅಮಾನತು

ನವದೆಹಲಿ, ಆಗಸ್ಟ್ 3: ಉದ್ದೀಪನ ಪರೀಕ್ಷೆಯಲ್ಲಿ ಭಾರತದ ಸ್ಟೀಪಲ್ ಚೇಸರ್ ನವೀನ್ ದಾಗರ್ ವಿಫಲರಾಗಿದ್ದರಿಂದ ಅವರನ್ನು ಮುಂಬರಲಿರುವ ಏಷ್ಯನ್ ಗೇಮ್ಸ್ ನಿಂದ ಅಮಾನತುಗೊಳಿಸಲಾಗಿದೆ. ಇದರೊಂದಿಗೆ ಕ್ರೀಡಾಕೂಟದಲ್ಲಿ ಹೆಚ್ಚು ಪದಕ ಗೆಲ್ಲುವ ಭಾರತದ ಆಸೆಗೆ ಹಿನ್ನಡೆಯಾದಂತಾಗಿದೆ.
2014ರ ಏಷ್ಯನ್ ಗೇಮ್ಸ್ ನ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಕಂಚು ಜಯಿಸಿದ್ದ ನವೀನ್, ನಿಷೇಧಿತ ಮೆಲ್ಡೋನಿಯಮ್ ಸೇವಿಸಿರುವುದು ಉದ್ದೀಪನ ಪರೀಕ್ಷೆಯಲ್ಲಿ ಕಂಡುಬಂದಿದೆ. ಹಾಗಾಗಿ ಪ್ರತಿಷ್ಠಿತ ಏಷ್ಯಾನ್ 2018ರಿಂದ ನವೀನ್ ಅವರನ್ನು ಹೊರಗಿಡಲಾಗಿದೆ ಎಂದು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾಕ್ಕೆ ಆಪ್ತವಾಗಿರುವ ಮೂಲವೊಂದು ಶುಕ್ರವಾರ ತಿಳಿಸಿದೆ.
ಗುವಾಹಟಿಯಲ್ಲಿ ನಡೆದಿದ್ದ ಅಂತಾರಾಜ್ಯ ಕ್ರೀಡಾಕೂಟವೊಂದರಲ್ಲಿ ನವೀನ್ ಉದ್ದೀಪನ ಮದ್ದು ಸೇವಿಸಿರುವುದು ನ್ಯಾಷನಲ್ ಆ್ಯಂಟಿ ಡೋಪಿಂಗ್ ಏಜೆನ್ಸಿ (ನಾಡಾ) ನಡೆಸಿದ ಪರೀಕ್ಷೆಯಲ್ಲಿ ಕಂಡುಬಂದಿತ್ತು. ಆದ್ದರಿಂದ ನವೀನ್ ಇಂಡೋನೇಷ್ಯದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ನಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡದಿಂದ ಹೊರಬೀಳುವಂತಾಗಿದೆ.
'ಹೌದು, 3,000 ಮೀ. ಸ್ಟೀಪಲ್ ಚೇಸ್ ಸ್ಪರ್ಧಿ ದಾಗರ್ ಅವರು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾದಿಂದ ಜುಲೈ 23ರಂದು ಅಮಾನತು ಗೊಂಡಿದ್ದಾರೆ. ಅವರ ಪರೀಕ್ಷಾ ಮಾದರಿಯಲ್ಲಿ ನಿಷೇಧಿತ ಮೆಲ್ಡೋನಿಯಮ್ ಕಂಡು ಬಂದಿದೆ. ಈಗ ನಾವು ಬಿ ಸ್ಯಾಂಪಲ್ ಗಾಗಿ ಕಾಯುತ್ತಿದ್ದೇವೆ' ಎಂದು ಮೂಲವೊಂದು ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications